ಸುದ್ದಿ

ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್, ಎಚ್ಛೆತ್ತುಕೊಳ್ಳಿ ಇಲ್ಲವಾದರೆ ದಂಡ ಖಚಿತ.

316

ಬಿಪಿಎಲ್ ಕಾರ್ಡ್ ಯಾರ ಬಳಿ ಇಲ್ಲ ಹೇಳಿ, ಸರ್ಕಾರದ ನಿಯಮ ಅನುಸಾರವಾಗಿ ಯಾರು ಬಡತನ ರೇಖೆಗಿಂತ ಕೆಳಗೆ ಇರುತ್ತಾರೋ ಮತ್ತು ಯಾವ ಕುಟುಂಬದ ಆದಾಯ ಕಡಿಮೆ ಇರುತ್ತದೋ ಅವರು ಮಾತ್ರ ಬಿಪಿಎಲ್ ಕಾರ್ಡ್ ಮಾಡಿಕೊಳ್ಳಲು ಅರ್ಹರು. ಆದರೆ ಈಗ ಕೇವಲ ಬಡವರು ಮಾತ್ರವಲ್ಲದೆ ಶ್ರೀಮಂತರು ಕೂಡ ಬಿಪಿಎಲ್ ಕಾರ್ಡುಗಳನ್ನ ಮಾಡಿಸಿಕೊಂಡಿದ್ದು ಸರ್ಕಾರಕ್ಕೆ ಮೋಸ ಮಾಡಿ ಪಡಿತರ ದಾನ್ಯಗಳನ್ನ ಪಡೆಯುತ್ತಿದ್ದಾರೆ, ಹೌದು ಸರ್ಕಾರೀ ಕೆಲಸದಲ್ಲಿ ಇರುವವರು, ಕುಟುಂಬದ ಆದಾಯ ಜಾಸ್ತಿ ಇರುವವರು ಮತ್ತು ಶ್ರೀಮಂತರು ಕೂಡ ಬಿಪಿಎಲ್ ಕಾರ್ಡುಗಳನ್ನ ಮಾಡಿಸಿಕೊಂಡು ಬಡವರಿಗೆ ಮೀಸಲಾಗಿರುವ ಪಡಿತರವನ್ನ ಪಡೆಯುತ್ತಿದ್ದಾರೆ.

ಇನ್ನು  ಸರ್ಕಾರ ಎಷ್ಟೇ ಕ್ರಮಗಳನ್ನ ಕೈಗೊಂಡರು ಕೂಡ ಸರ್ಕಾರದಿಂದ ಈ ನಕಲಿ ಬಿಪಿಎಲ್ ಕಾರ್ಡುಗಳನ್ನ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ, ಜನರಿಗೆ ಎಷ್ಟೇ ಎಚ್ಚರಿಕೆಯನ್ನ ಕೊಟ್ಟರು ಕೂಡ ಅವರು ತಮ್ಮ ನಕಲಿ ಬಿಪಿಎಲ್ ಕಾರ್ಡುಗಳನ್ನ ಸರ್ಕಾರಕ್ಕೆ ಒಪ್ಪಿಸುತ್ತಿಲ್ಲ. ಇನ್ನು ಈಗ ಸರ್ಕಾರದ ಹೊಸ ಆದೇಶವನ್ನ ಹೊರಡಿಸಿದ್ದು ಎಲ್ಲರೂ ಇದನ್ನ ಪಾಲಿಸುವುದು ಅನಿವಾರ್ಯವಾಗಿದೆ, ಹಾಗಾದರೆ ಏನದು ಹೊಸ ಆದೇಶ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ತಿಳಿಯೋಣ ಪೂರ್ತಿಯಾಗಿ ಓದಿ.

ನಕಲಿ ರೇಷನ್ ಕಾರ್ಡುಗಳನ್ನ ಇಟ್ಟುಕೊಂಡಿದ್ದಾರೋ ಅವರು ಮೂರೂ ತಿಂಗಳ ಒಳಗಾಗಿ ಅದನ್ನ ಸರ್ಕಾರಕ್ಕೆ ಹಿಂತಿರುಗಿಸಿದರೆ ಯಾವುದೇ ದಂಡವನ್ನ ವಿಧಿಸಲಾಗುವುದಿಲ್ಲ. ಇನ್ನು ಅಷ್ಟಾಗಿಯೂ ಅವರು ಹಿಂತಿರುಗಿಸದೆ ಇದ್ದ ಸಮಯದಲ್ಲಿ ಇಲಾಖೆಯ ವತಿಯಿಂದ ಪರಿಶೀಲನೆ ಬಂದಾಗ ಅವರು ಸಿಕ್ಕಿಬಿದ್ದರೆ ಅವರು ಇದುವರೆಗೂ ಆ ಕಾರ್ಡಿನ ಮೂಲಕ ಪಡೆದ ಅಕ್ಕಿಯ ದರವನ್ನ ಮುಕ್ತ ಮಾರುಕಟ್ಟೆಯಲ್ಲಿ ಇರುವ ದರಕ್ಕೆ ಅನುಗುಣವಾಗಿ ವಸೂಲಿ ಮಾಡಲಾಗುತ್ತದೆ ಮತ್ತು ಅವರಿಗೆ ದಂಡವನ್ನ ಹಾಕಲಾಗುತ್ತದೆ.

ಇನ್ನು ನಕಲಿ ರೇಷನ್ ಕಾರ್ಡುಗಳನ್ನ ಪಡೆಗಟ್ಟಲು ಈಗಾಗಲೇ ಅವರ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಜನರು ಅನೇಕ ಕಾರ್ಡುಗಳನ್ನ ವಾಪಾಸ್ ಮಾಡಿದ್ದಾರೆ, ಅನ್ನಭಾಗ್ಯ ಯೋಜನೆಯ ಅಡಿ ಆರ್ಥಿಕವಾಗಿ ಸಬಲರು ಕೂಡ ಅಕ್ಕಿಯನ್ನ ಪಡೆಯುತ್ತಿದ್ದು ಸರ್ಕಾರಕ್ಕೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ ಮತ್ತು ಇದು ತುಂಬಾ ನಷ್ಟದಾಯವಾಗಿದೆ, ಈ ಕಾರಣಕ್ಕೆ ನಕಲಿ ರೇಷನ್ ಕಾರ್ಡುಗಳನ್ನ ತಡೆಗಟ್ಟುವಲ್ಲಿ ಸರ್ಕಾರ ದಿಟ್ಟ ನಿರ್ಧಾರವನ್ನ ತೆಗೆದುಕೊಂಡಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ