ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಿನುಗುವ ಮುತ್ತುಗಳು ಸಮುದ್ರ ತೀರದಲ್ಲಿ ಬಿದ್ದಿದ್ದಾವೋ ಏನೋ ಎಂಬಂತೆ ಕಾಣುವ ದೃಶ್ಯ.ಪ್ರಕೃತಿ ದೇವಿಯೇ ಮುತ್ತನ್ನು ಪೋಣಿಸಿ ಹಾಸಿಗೆ ಮಾಡಿದ್ದಾಳೋ ಏನೋ ಎಂಬಂತಹ ನೋಟ…ಎಂತಹವರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ಸೊಬಗು.ಈ ಸೌಂದರ್ಯ `ರಾಶಿ’ಗೆ ಸಾಕ್ಷಿಯಾಗಿದ್ದು ಫಿನ್‌ಲ್ಯಾಂಡಿನ ಮರ್ಜಾನಿಯೆಮಿ ಕಡಲತೀರ.

ಇಷ್ಟು ದಿನ ಮರಳಿಂದ ಆವೃತ್ತವಾಗಿದ್ದ ಈ ಬೀಚ್ ಮೊನ್ನೆ ಸಾವಿರಾರು `ಹಿಮದ ಮೊಟ್ಟೆ’ಗಳ ಹಾಸಿನಿಂದ ಅಚ್ಚರಿಗೆ ಕಾರಣವಾಗಿತ್ತು. ಸುಮಾರು 30 ಮೀಟರ್ ಅಂದರೆ 10 ಅಡಿಯಷ್ಟು ಪ್ರದೇಶದಲ್ಲಿ ಈ ಮೊಟ್ಟೆಗಳ ರಾಶಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದನ್ನು ಕಂಡು ಜನ ಆಶ್ಚರ್ಯಚಕಿತರಾಗಿದ್ದರು.

ರಿಸ್ಟೊ ಮಟಿಲಾ ಮತ್ತು ಅವರ ಪತ್ನಿ ಹೈಲುಟೊ ದ್ವೀಪದ ಮಾರ್ಜನಿಯೆಮಿ ಬೀಚಿನಲ್ಲಿ ನಡೆದುಕೊಂಡು ಹೋಗುವಾಗ ಇಂತಹ ದೃಶ್ಯವನ್ನು ಕಂಡಿದ್ದರು. ತಕ್ಷಣ ಇವರು ಈ ಸೊಬಗಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬೇರೆ ಬೇರೆ ಗಾತ್ರದ ಹಿಮದುಂಡೆಗಳು ಇಲ್ಲಿ ಬಿದ್ದು ಸೊಬಗಿನ ಲೋಕವನ್ನು ಸೃಷ್ಟಿಸಿದ್ದವು. ಮೊಟ್ಟೆ ಗಾತ್ರದಿಂದ ಹಿಡಿದು ಫುಟ್ಬಾಲ್ ಗಾತ್ರದ ಹಿಮದ ಚೆಂಡುಗಳು ಇಲ್ಲಿ ಜನರಿಗೆ ಕಾಣಸಿಕ್ಕಿದ್ದವು.
ಇದು ಬಲು ಅಪರೂಪದ ವಿದ್ಯಮಾನ. ವಾತಾವರಣದ ಸ್ಥಿತಿ ತುಂಬಾ ಚೆನ್ನಾಗಿದ್ದರೆ ಮಾತ್ರ ವರ್ಷದಲ್ಲಿ ಒಂದು ಸಲ ಇಂತಹ ದೃಶ್ಯವನ್ನು ನಾವು ಕಾಣಬಹುದು ಎಂಬುದು ಫಿನ್ನಿಷ್ ಹವಾಮಾನ ಸಂಸ್ಥೆಯ ಹಿಮ ತಜ್ಞ ಜೌನಿ ವೈನಿಯೋ ಅವರ ಅಭಿಮತ. ಸರಿಯಾದ ಪ್ರಮಾಣದ ಗಾಳಿಯ ಉಷ್ಣತೆ (ಶೂನ್ಯಕ್ಕಿಂತ ಕಡಿಮೆ, ಆದರೆ ಸ್ವಲ್ಪ ಮಾತ್ರ), ಸರಿಯಾದ ನೀರಿನ ತಾಪಮಾನ, ಆಳವಿಲ್ಲದ ಮತ್ತು ಅಲ್ಪ ಪ್ರಮಾಣದ ಇಳಿಜಾರಿನಂತಿರುವ ಮರಳಿನ ತೀರ ಹಾಗೂ ಶಾಂತ ಅಲೆಗಳಿದ್ದರೆ ಈ ಹಿಮದ ಮೊಟ್ಟೆಗಳು ಗೋಚರಿಸುತ್ತವೆ’ ಎಂದು ಇವರು ಹೇಳಿದ್ದಾರೆ.

ಸಮುದ್ರದ ನೀರಿನ ಮೇಲ್ಮೈನಲ್ಲಿ ಹಿಮ ರೂಪುಗೊಳ್ಳುವಾಗ ಸಣ್ಣ ಚೆಂಡಿನ ರೂಪ ತಾಳುತ್ತವೆ. ಈ ಮೊಟ್ಟೆಯಾಕಾರದ ಹಿಮ ಅಲೆಗಳೊಂದಿಗೆ ಸಾಗಿ ದಡದಲ್ಲಿ ಜಮಾಗೊಳ್ಳುತ್ತದೆ ಎಂದು ಇಲಿನಾಯ್ಸ್ ಸ್ಟೇಟ್ ಯೂನಿವರ್ಸಿಟಿಯ ಭೌಗೋಳಿಕ ಭೂವಿಜ್ಞಾನ ಪ್ರಾಧ್ಯಾಪಕ ಡಾ ಜೇಮ್ಸ್ ಕಾರ್ಟರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವೈಕುಂಠ ಏಕಾದಶಿ ಪ್ರಯುಕ್ತ 1.70 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈದರ್ಶನಕ್ಕೆ 1 ಲಕ್ಷದ 80 ಸಾವಿರ ಭಕ್ತರಿಗೆ ಮಾತ್ರ ವೈಕುಂಠ ದರ್ಶನ ಕಲ್ಪಿಸಲಾಗಿದೆ. ತಿರುಪತಿ -ತಿರುಮಲದ ದೇಗುಲದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ಸಾನಿಧ್ಯದಲ್ಲಿ ಜನವರಿ 6 ಮತ್ತು 7ರಂದು 2 ದಿನಗಳ ಕಾಲ ವೈಕುಂಠ ಏಕಾದಶಿ – ದ್ವಾದಶಿ ಪ್ರಯುಕ್ತ ಭಕ್ತಾಧಿಗಳಿಗೆ ವೈಕುಂಠ ದ್ವಾರ ದರ್ಶನ ಕಲ್ಪಿಸಲಾಗಿದೆ. ಜನವರಿಯಂದು 21,28 ರಂದು ದಿವ್ಯಾಂಗರಿಗೆ, ಮಾರ್ಚ್ 22 ಮತ್ತು 29 ರಂದು ಹಸುಗೂಸು ಹೊಂದಿರುವ ತಂದೆ…
ಸಿಗರೇಟ್ ಸೇದುವದನ್ತೂ ಈಗ ಪ್ಯಾಶನ್ ಆಗಿಬಿಟ್ಟಿದೆ.ಈಗಂತೂ ಪುರುಷರಿಗಿಂತ ಮಹಿಳೆಯರೇ ಧೂಮಪಾನ ಮಾಡೋದ್ರಲ್ಲಿ ಮುಂದಿರುತ್ತಾರೆ.
ಇಂಡೊನೇಶಿಯದ ಸಣ್ಣ ಗ್ರಾಮ ಸೆಮರೆಂಗ್ ಇಂಟರ್ನೆಟ್ನಲ್ಲಿ ಸೆನ್ಸೇಶನ್ ನ್ಯೂಸ್ ಆಗಿದೆ. ಪ್ರತಿಯೊಬ್ಬರು ಈಗ ಈ ಗ್ರಾಮದ ಬಗ್ಗೆ ತಿಳಿಯಲು ಇಂಟರ್ನೆಟ್ನಲ್ಲಿ ಹುಡುಕುತ್ತಿದ್ದಾರೆ. ಪರ್ವತ ಪ್ರದೇಶಗಳಲ್ಲಿರುವ ಈ ಗ್ರಾಮವು ಪ್ರವಾಸಿಗರನ್ನು ಅದರಲ್ಲೂ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.
ಕೊರೋನ ದೇಶದಲ್ಲಿ ರಾಜ್ಯದಲ್ಲಿ ಹೆಚ್ಚಳದಿಂದಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ. ಸಕ್ರೀಯ ಪ್ರಕರಣಗಳು ಹೆಚ್ಚುತ್ತಿವೆ.ದಿನದಿಂದ ದಿನಕ್ಕೆ ಸರಾಸರಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ರಾಜ್ಯವ್ಯಾಪಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ.ಆದರಂತೆ ಜಿಲ್ಲಾವಾರು ಪ್ರಕರಣಗಳು ಹೆಚ್ಚುತ್ತಿವೆ.ಕೋಲಾರ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣ ಏರುಮುಖವಾಗಿದೆ.ಇಪ್ಪತ್ತರ ಆಸುಪಾಸಿನಲ್ಲಿದ್ದ ಪ್ರಕರಣಗಳು ಈಗ 75 ಸಕ್ರಿಯ ಪ್ರಕರಣ ದಾಖಲಾಗಿದೆ. ತಾಲ್ಲೂಕುವಾರು ಸಕ್ರಿಯ ಪ್ರಕರಣಗಳು ಇಂತಿದೆ. ಕೋಲಾರ 5, ಮಾಲೂರು 13, ಬಂಗಾರಪೇಟೆ 13, ಕೆಜಿಎಫ್…
![]()
ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ,ಆದರೆ ಕೆಲವರು ಹಲ್ಲುಜ್ಜುವಾಗ ಸ್ನೇಹಿತರ ಜೊತೆ ಮಾತನಾಡಿಕೊಂಡೋ, ಟಿವಿ ನೋಡಿಕೊಂಡೋ, ಮತ್ತೆನ್ನಿನೋ ಮಾಡಿಕೊಂಡೋ ಗಂಟೆಗಟ್ಟಲೆ ಹಲ್ಲು ಉಜ್ಜುತ್ತಾರೆ….
ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ.. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ. ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ…