ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭರಚುಕ್ಕಿ ಎಂದರೆ ಎಲ್ಲರಿಗು ಇಷ್ಟವಾದ ಜಾಗ ಎನ್ನಬಹುದು ಯಾಕೆಂದರೆ ಇಲ್ಲಿನ ಸೊಬಗು ನೋಡಲುತುಂಬಾ ಆಕರ್ಷಕವಾಗಿರುತ್ತದೆ ಮತ್ತು ಎತ್ತರದಿಂದ ಹರಿಯುವ ನೀರನ್ನು ನೋಡಲು ಜನರು ಸಾಕಷ್ಟು ದೂರದಿಂದ ಬರುತ್ತಾರೆ. ಈ ಸೊಬಗನ್ನು ಧಾರೆಯೆರೆಯುತ್ತಿದ್ದ ಭರಚುಕ್ಕಿ ಈಗ ಮತ್ತಷ್ಟು ರೋಮಾಂಚಕ ಅನುಭವ ನೀಡಲು ಸಜ್ಜಾಗುತ್ತಿದೆ. ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತವಿಶ್ವದ ಗಮನ ಸೆಳೆಯಲು ಅಣಿಯಾಗುತ್ತಿದೆ.ಶೀಘ್ರದಲ್ಲೇ ಇಲ್ಲಿ ಪ್ರವಾಸಿ ಆಕರ್ಷಣೆಯೊಂದು ಸೇರ್ಪಡೆಗೊಳ್ಳಲಿದ್ದು, ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ಈ ತಾಣದ ಖ್ಯಾತಿ ಇಮ್ಮಡಿಯಾಗಲಿದೆ.

155 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಈಬಯೋ ಪಾರ್ಕ್ ಗೆ ಸರ್ಕಾರ ನೂರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಲಿದೆ. ವೀಕೆಂಡ್ ಗಳಲ್ಲಿ, ರಜಾದಿನಗಳಲ್ಲಿ ಭರಚುಕ್ಕಿಯತ್ತ ಮುಖ ಮಾಡುವ ಜನರಿಗೂ ಇನ್ನಷ್ಟು ಸೌಂದರ್ಯ ಕಣ್ತುಂಬಿಕೊಳ್ಳುವ ಅವಕಾಶ ಒದಗಿಬರಲಿದೆ. ಸಿದ್ಧಗೊಂಡಿರುವ ಕ್ರಿಯಾ ಯೋಜನೆ ಈಗಾಗಲೇ ಅರಣ್ಯ ಇಲಾಖೆಯ ವನ್ಯ ಜೀವಿವಿಭಾಗ ಇದರ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಸರ್ಕಾರದ ಅನುಮೋದನೆ ಇಂದು ಅಥವಾ ನಾಳೆ ಸಿಗುವ ನಿರೀಕ್ಷೆ ಇದೆ. ಈ ಉದ್ದೇಶಿತ ಪಾರ್ಕ್ ಭರಚುಕ್ಕಿ ಜಲಪಾತದ ಸಮೀಪವೇ ನಿರ್ಮಾಣಗೊಳ್ಳಲಿದ್ದು ಜಲಪಾತದ ಸೌಂದರ್ಯವನ್ನೂ ಹೆಚ್ಚಿಸಲಿದೆ. ಅಪರಿಚಿತವಾಗಿಯೇ ಉಳಿದಿದ್ದ ಜಲಪಾತವನ್ನು 2007ರಲ್ಲಿ ರಾಜ್ಯ ಸರ್ಕಾರ ಭರಚುಕ್ಕಿಯಲ್ಲಿ ಜಲಪಾತೋತ್ಸವ ಮಾಡುವ ಮೂಲಕ ಎಲ್ಲರಿಗೆ ಪರಿಚಯಿಸುವ ಕೆಲಸ ಮಾಡಲಾಗಿತ್ತು. ಈಗಈ ಪಾರ್ಕ್ ಮೂಲಕ ಪ್ರವಾಸಿಗರನ್ನು ಹೆಚ್ಚಿಸುವ ಉದ್ದೇಶವೂ ಇದೆ.

ಪಾರ್ಕ್ ನಲ್ಲಿ ಏನೇನಿದೆ? ಈ ಉದ್ಯಾನ ಸೋಲಾರ್ ಬೆಂಬಲಿತವಾಗಿದ್ದು, ಬೋನ್ಸಾಯ್ಗಾರ್ಡನ್, ಆರ್ಕಿಡ್ ಒಳಗೊಂಡ ವನ,ನಕ್ಷತ್ರ ಆಕಾರದ ಉದ್ಯಾನ, ಬಿದಿರುವನ, ಅಪರೂಪದ ಸಸ್ಯಗಳ ಟ್ರೀಪಾರ್ಕ್, ಸೋಲಿಗರ ಬದುಕು ತೋರುವಟ್ರೈಬಲ್ ಪಾರ್ಕ್, ಮ್ಯೂಸಿಯಂ, ಆಂಪಿಥಿಯೇಟರ್, ವನ್ಯ ಜೀವಿ ಪಾರ್ಕ್,ವೆಟ್ ಲ್ಯಾಂಡ್ ಪಾರ್ಕ್, ಚಿಟ್ಟೆ ಪಾರ್ಕ್ ಒಳಗೊಂಡಂತೆ 21 ಬಗೆಯ ವಿಶೇಷ ವಿನ್ಯಾಸದ ಕಲ್ಪನೆಯಲ್ಲಿಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜತೆಗೆ ಫುಡ್ ಕೋರ್ಟ್‌ಕೂಡ ನಿರ್ಮಾಣಗೊಳ್ಳಲಿದೆ. ಸುಮಾರು 1.5 ಕಿ.ಮೀ. ಅಂತರದಸ್ಕೈವಾಕ್ ಪಥವಿರಲಿದೆ. ಎಲ್ಲಾ ವ್ಯವಸ್ಥೆಗಳನ್ನೂ ಒಂದೆಡೆಗೆತಂದು ಜನರನ್ನು ಆಕರ್ಷಿಸಲು ಈಯೋಜನೆಯನ್ನು ರೂಪಿಸಲಾಗಿದೆ.
54 ವಿವಿಧ ಪಾರ್ಕ್ ಗಳ ನಿರ್ಮಾಣಮಲೆ ಮಹದೇಶ್ವರ ಬೆಟ್ಟ ಹುಲಿ ಸಂರಕ್ಷಣಾ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ಈ ಕುರಿತು ಮಾಹಿತಿ ನೀಡಿದ್ದು, ವನ್ಯ ಜೀವಿಗಳ ಸಂರಕ್ಷಣೆ ಮತ್ತು ಅರಣ್ಯ ನಾಶ ತಡೆಗಟ್ಟುವ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸಲಾಗುತ್ತಿದೆ,ಈ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದರು. ಈ ಸ್ಥಳದಲ್ಲಿ ಒಟ್ಟು 54 ವಿವಿಧ ಪಾರ್ಕ್ ಗಳ ನಿರ್ಮಾಣ ಮಾಡಲಿದ್ದು ಪ್ರತೀ ಪಾರ್ಕ್ ಗೂತಲಾ ಎರಡು ಕೋಟಿ ರೂಪಾಯಿವೆಚ್ಚ ತಗುಲಲಿದೆ ಎಂದರು. ಈ ಪಾರ್ಕ್‌ಗಳನ್ನು ಹಂತ ಹಂತವಾಗಿ ನಿರ್ಮಾಣ ಮಾಡುತ್ತಾ ಹೋಗಲಿದ್ದು, ಇದರಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಭೂಮಿಪೂಜೆ ಮೊದಲ ಹಂತದಲ್ಲಿ ಪ್ರವೇಶದ್ವಾರ, ಫುಡ್ ಕೋರ್ಟ್ ಹಾಗೂ ನೀರಿನ ಕಾರಂಜಿ ನಿರ್ಮಾಣಗೊಳ್ಳಲಿದ್ದು ಇದಕ್ಕೆಒಟ್ಟು 4.2 ಕೋಟಿ ರೂಪಾಯಿ ವೆಚ್ಚವಾಗಲಿದೆ.ಇದರಲ್ಲಿ ಅರಣ್ಯ ಇಲಾಖೆ 1 ಕೋಟಿಮತ್ತು ಪ್ರವಾಸೋದ್ಯಮ ಇಲಾಖೆ 3.2 ಕೋಟಿ ರೂಪಾಯಿ ವೆಚ್ಚಮಾಡಲಿದ್ದು ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಪ್ರವಾಸೋದ್ಯಮ ಸಚಿವರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಭೂಮಿ ಪೂಜೆಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ಬಿಗ್ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ….
ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ…
ತುಳಸಿ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣಪಡಿಸಬಹುದು. ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ…
ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.
ಇಂದು ಮಂಗಳವಾರ, 20/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಿಂದಿನ ಕಾಲದಲಿ ಮೊಬೈಲ್ ಫೋನ್ ಗಳು ಇರಲಿಲ್ಲ ಮತ್ತು ಜನರು ಯಾರ ಬಳಿ ಆದರೂ ಮಾತನಾಡಬೇಕು ಅಂದರೆ ಲ್ಯಾಂಡ್ ಲೈನ್ ಅಥವಾ ಅಂಚೆ ಕಚೇರಿಯ ಮೊರೆ ಹೋಗುತ್ತಿದ್ದರು, ಆದರೆ ಈಗ ಒಬ್ಬ ವ್ಯಕ್ತಿ ಎಷ್ಟೇ ದೂರ ಇದ್ದರು ಆತನ ಜೊತೆ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ. ಇನ್ನು ಕೆಲವು ಮೊಬೈಲ್…