ಸುದ್ದಿ

40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ ನಂತರ ಏನಾಯ್ತು ಗೊತ್ತೇ,.??

39

ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್ ​ಮಾಡುತ್ತಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಮಹಿಳೆಯ ಪತಿ ಜನಕರಾಜ್​, ಅಕ್ಟೋಬರ್​ 29ರಂದು ಈ ಘಟನೆ ನಡೆಯಿತು. ತರಕಾರಿ ಕತ್ತರಿಸಿ ತುಂಬಲಾಗಿದ್ದ ಬೌಲ್​ನಲ್ಲಿ ನನ್ನ ಪತಿ ಹಾಗೂ ಸೊಸೆ ತಮ್ಮ ಚಿನ್ನಾಭರಣವನ್ನು ಅದರಲ್ಲಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಚಿನ್ನದಮೇಲೆ ತರಕಾರಿ ತ್ಯಾಜ್ಯವನ್ನು ಇಡಲಾಗಿತ್ತು.ಕೊನೆಯಲ್ಲಿ ಇದರ ಅರಿವಿಲ್ಲದೆ ಅದನ್ನು ಕಸದ ಗುಂಡಿಗೆ ಎಸೆಯಲಾಗಿತ್ತು.

ಬಳಿಕ ಆಭರಣದ ಅರಿವಾಗಿ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಗೂಳಿಯೊಂದು ನಾವು ಎಸೆದಿದ್ದ ತರಕಾರಿ ತ್ಯಾಜ್ಯವನ್ನು ಮೇಯುತ್ತಿರುವುದನ್ನು ನೋಡಿದೆವು ಎಂದು ತಿಳಿಸಿದ್ದಾರೆ. ಬಳಿಕ ಗೂಳಿಗಾಗಿ ಹುಡುಕಾಡಿದೆವು. ಅದನ್ನು ಹಿಡಿಯಲು ಪಶುವೈದ್ಯರಿಗೂ ಕರೆ ಮಾಡಿದೆವು. ಬಳಿಕ ಗೂಳಿಯನ್ನು ಪತ್ತೆ ಮಾಡಿ ಅದನ್ನು ನಮ್ಮ ಮನೆಯ ಬಳಿ ಬಯಲಿನಲ್ಲಿ ಕಟ್ಟಿಹಾಕಿ ಆಹಾರ ನೀಡಿದೆವು.

 ಸಗಣಿಮೂಲಕ ನಮ್ಮ ಚಿನವನ್ನು ಮತ್ತೆ ಪಡೆಯುತ್ತೇವೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ.ಹೀಗಾಗಿ ನಿರಂತರವಾಗಿ ಆಹಾರ ನೀಡುತ್ತಿದ್ದೇವೆ. ಒಂದು ವೇಳೆ ಚಿನ್ನವನ್ನು ಪಡೆಯಲು ಸಾಧ್ಯವಾಗದಿದ್ದರೆ ಗೂಳಿಯನ್ನು ಗೋಶಾಲೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಭಾನುವಾರದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(21 ಏಪ್ರಿಲ್, 2019) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ…

  • ದೇವರು-ಧರ್ಮ

    ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಗೋವರ್ಧನ ಪೂಜೆ…!ಇದರ ಇನ್ನಳೆಯೇನು ಗೊತ್ತಾ?

    ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…

  • ಜೀವನಶೈಲಿ

    ಭಾರತೀಯ ಮಹಿಳೆಯರು ಆಭರಣಗಳನ್ನು ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು ಗೊತ್ತಾ…? ಈ ಲೇಖನ ಓದಿ…

    ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.

  • ರಾಜಕೀಯ

    ಅಬ್ಬಾ! ಬೃಹತ್ ಸೇಬಿನ ಹಾರ ಹಾಕಿ ಹೆಚ್.ಡಿ.ಕೆ ಅವರಿಗೆ ಸ್ವಾಗತ…ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ…ನೀವೂ ನೋಡಿ…

    ಮದ್ದೂರು ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ  ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಸುಮಾರು 5000ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು  ಅದ್ಧೂರಿ ಬೈಕ್ ರ‍್ಯಾಲಿ ಮೂಲಕ ಅಭೂತಪೂರ್ವಕ ಸ್ವಾಗತ ಮಾಡಿದ್ದಲ್ಲದೆ, ಸುಮಾರು 500 ಕೆಜಿ ಸೇಬಿನ ಹಾರವನ್ನು ಕ್ರೈನ್ ಮೂಲಕ ಹಾಕುವ ಮುಖಾಂತರ ಕುಮಾರಸ್ವಾಮಿಯವರಿಗೆ ತಮ್ಮ ಅಭಿಮಾನ ಮೆರೆದರು. ಅಬ್ಬಾ..ಇಲ್ಲಿದೆ ನೋಡಿ ಬೃಹತ್ ಸೇಬಿನ ಹಾರ ಹಾಕಿದ ವಿಡಿಯೋ…

  • ಉಪಯುಕ್ತ ಮಾಹಿತಿ

    ಭೀಮ್ ಆ್ಯಪ್ ಇದ್ದವರಿಗೆ ಬಂಪರ್ ಆಫರ್.!1ರೂ ಕಳಿಸಿ 51ರೂಪಾಯಿಗಳ ಕ್ಯಾಶ್ಬ್ಯಾಕ್ ಪಡೆಯಿರಿ.!ಹೇಗೆಂದು ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡಿಜಿಟಲ್‌ ಪೇಮೆಂಟ್‌ ಮೊಬೈಲ್‌ ಆ್ಯಪ್‌ ಆಗಿರುವ ಭೀಮ್‌ ಅನ್ನು ಪ್ರಚಾರ ಪಡಿಸುವ ಸಲುವಾಗಿ ಕೇಂದ್ರ ಸರಕಾರ ಏ.14ರಿಂದ ನಾನಾ ಬಗೆಯ ಕ್ಯಾಶ್‌ ಬ್ಯಾಕ್‌ ಮತ್ತು ಇನ್ಸೆಂಟಿವ್‌ಗಳನ್ನು ನೀಡಲಿದೆ. ಭೀಮ್ ಆ್ಯಪ್’ನ್ನು ಪ್ರಧಾನಿ ನರೇಂದ್ರ ಮೋದಿಯವರು 30 ಡಿಸೆಂಬರ್ 2016ರಂದು ಬಿಡುಗಡೆ ಮಾಡಿದ್ದರು. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ.   ಈಗಾಗಲೇ ಒಂದು ವರ್ಷ ಪೂರೈಸಿರುವ ಈ ಭೀಮ್…

  • ಸುದ್ದಿ

    ನಿರ್ಮಾಣ ಪ್ರಗತಿಯಲ್ಲಿದ್ದ ನೀರಿನ ಟ್ಯಾಂಕ್ ಕುಸಿತ…..,7 ಇಂಜಿನಿಯರ್‌ಗಳು ಪೊಲೀಸರ ವಶಕ್ಕೆ….

    ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಮೂವರು ಮೃತಪಟ್ಟು, 20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವರ ಕುಟುಂಬಗಳಿಗೆ 5ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್‌ನಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಿದ್ದಿತ್ತು. ಈ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು….