ಸುದ್ದಿ

ಮನೆ ಬಾಡಿಗೆ ಕೊಡುವ ಮುನ್ನ ಹೆಚ್ಚರಿಕೆಯಿಂದಿರಿ ; ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.ಯಾಕೆ ಗೊತ್ತಾ.?

39

ಯಾವುದೇ ತರಹದ ಗುಂಪಿನ ದಾಖಲೆಗಳನ್ನು ಹೊಂದಿರದ ಅಕ್ರಮ ವಲಸಿಗರಿಗೆ ಬಾಡಿಗೆ ಮನೆ ಕೊಡಬಾರದು, ಕೊಟ್ಟರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

 ಮನೆ ಮಾಲೀಕರು ಬಾಡಿಗೆ ಮನೆಯನ್ನು ಕೊಡುವ ಮೊದಲು ಅವರ ಬಗ್ಗೆ ಸಂಪೂರ್ಣ  ಮಾಹಿತಿ              ತಿಳಿದುಕೊಂಡ ಬಳಿಕ ಮನೆ ಬಾಡಿಗೆಗೆ ಕೊಡಿ ,ಬಾಡಿಗೆದಾರ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಸಂಬಂಧಪಟ್ಟ ಮನೆ ಮಾಲೀಕರ ವಿರುದ್ಧ ಕ್ರಮ  ಕೈಗೊಳ್ಳಲಾಗುವುದು.  ಮತ್ತು ಅವರ  ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ .

ಬಾಂಗ್ಲಾದೇಶದ ಪ್ರಜೆಗಳು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಅವರಿಗೆ ನೆರವು ನೀಡುವವರ ವಿರುದ್ಧವೂ ಐಪಿಸಿ ಸೆಕ್ಷನ್120(ಬಿ)ಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಇತ್ತೀಚೆಗೆ ಸಿಸಿಬಿ ಪೊಲೀಸರು ಸಹ  ನಗರದ ವಿವಿಧ ಕಡೆಗಳಲ್ಲಿ  ದಾಳಿ ನಡೆಸಿ 60ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ ಎಂಬ ವಿಷಯವು ಸಹ ಟಿಲ್;ತಿಳಿದು ಬಂದಿದೆ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ