govt, ಕರ್ನಾಟಕ

ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್‌ ಸಾರಿಗೆ ಸಮ್ಮೇಳನದಲ್ಲಿ KSRTC ವೋಲ್ವೊ ಬಸ್‌ಗೆ ಪ್ರಶಸ್ತಿ, ಯಾಕೆ ಗೊತ್ತಾ.?

39

ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್‌ ಸಾರಿಗೆ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್‌ಆರ್‌ಟಿಸಿ) ವೋಲ್ವೊ ಬಸ್‌ಗಳು ರಿಪೇರಿಯಿಲ್ಲದೆ 20 ಲಕ್ಷ ಕಿ.ಮೀ. ಕ್ರಮಿಸಿ 2 ಮಿಲಿಯನ್‌  ಕ್ಲಬ್‌ಗೆ ಸೇರ್ಪಡೆಯಾಗಿ ಜಾಗತಿಕ ಮನ್ನಣೆ ಗಳಿಸಿವೆ.

ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಓಡುತ್ತಿರುವ ವೋಲ್ವೊ ಬಸ್‌ಗಳು ಹೆಚ್ಚಿನ ಮೈಲೇಜ್‌ ನೀಡುವ ಜತೆಗೆ, ರಿಪೇರಿಯಿಲ್ಲದೆ 20 ಲಕ್ಷ ಕಿ.ಮೀ ಸಂಚರಿಸಿವೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್‌ ಸಾರಿಗೆ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ವೋಲ್ವೊ ಬಸ್‌ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಹಕನ್‌ ಅಗ್ನೆವಾಲ್‌ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರು ಕೇಂದ್ರೀಯ ವಿಭಾಗದ ಒಂದು ಮಲ್ಟಿ ಆಕ್ಸಲ್‌ ವೋಲ್ವೊ ಬಸ್‌ ಮತ್ತು ಒಂದು ಸಿಂಗಲ್‌ ಆಕ್ಸಲ್‌ ವೋಲ್ವೊ ಬಸ್‌ ದುರಸ್ತಿ ಇಲ್ಲದೆ 20 ಲಕ್ಷ ಕಿ.ಮೀ. ಕ್ರಮಿಸಿವೆ. ಇತರೆ 13 ವಾಹನಗಳು 18 ಲಕ್ಷ ಕಿ.ಮೀ. ಸಂಚರಿಸಿವೆ.

ಇವೆಲ್ಲವೂ ದೂರದ ಮಾರ್ಗಗಳಲ್ಲಿ ಓಡುತ್ತಿವೆ. ಮಂಗಳೂರು ವಿಭಾಗದ ವೋಲ್ವೊ ಬಸ್‌ 21.5 ಲಕ್ಷ, 14 ವೋಲ್ವೊ ಬಸ್‌ಗಳು 18 ಲಕ್ಷ ಮತ್ತು ಮೈಸೂರು ಗ್ರಾಮಾಂತರ ವಿಭಾಗದ 4 ವೋಲ್ವೊ ವಾಹನಗಳು 19 ಲಕ್ಷ ಕಿ.ಮೀ. ಕ್ರಮಿಸಿವೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ