ಸುದ್ದಿ

ಅಲ್ಲು ಅರ್ಜುನ್ ಬಳಿ ಕ್ಷಮೆ ಯಾಚಿಸಿದ ರಶ್ಮಿಕಾ ಮಂದಣ್ಣ..!ಯಾಕೆ ಗೊತ್ತಾ?

51

ನಟಿ ರಶ್ಮಿಕಾ ಮಂದಣ್ಣ ತೆಲುಗು ನಟ ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ್ದಾರೆ. ಅಲ್ಲು ಅರ್ಜುನ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು (ಅಕ್ಟೋಬರ್ 30) ನಡೆದಿದೆ. ನಟ ಅಲ್ಲು ಅರ್ಜುನ್, ನಿರ್ಮಾಪಕ ಅಲ್ಲು ಅರವಿಂದ್, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸೇರಿದಂತೆ ಇಡೀ ತಂಡ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಬೇರೆ ಸಿನಿಮಾದ ಚಿತ್ರೀಕರಣ ಇದ್ದ ಕಾರಣ ರಶ್ಮಿಕಾ ಈ ಸಿನಿಮಾದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯ ಆಗಿಲ್ಲ. ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿರುವ ರಶ್ಮಿಕಾ ತಂಡಕ್ಕೆ ಕ್ಷಮೆ ಕೇಳಿದ್ದಾರೆ. ಚಿತ್ರತಂಡದ ಜೊತೆಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಇದು ಅಲ್ಲು ಅರ್ಜುನ್ ನಟನೆಯ 20ನೇ ಸಿನಿಮಾವಾಗಿದೆ. ‘ರಂಗಸ್ಥಳಂ’ ನಂತರ ಸುಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಮೊದಲ ಬಾರಿಗೆ ಸ್ಟೈಲಿಷ್ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ.

ಮತ್ತೊಂದು ವಿಶೇಷ ಏನೆಂದರೆ, ಸಿನಿಮಾದಲ್ಲಿ ಕಾಲಿವುಡ್ ನಟ ವಿಜಯ್ ಸೇತುಪತಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಇದೆ. ಇತ್ತೀಚಿಗೆ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದ ವಿಜಯ್ ಸೇತುಪತಿ ಇದೀಗ ಅಲ್ಲು ಅರ್ಜುನ್ ಜೊತೆ ನಟಿಸುವ ಸಾಧ್ಯತೆ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಾಲಕನಿಂದ ಮೋದಿಯವರಿಗೆ 37ನೇ ಪತ್ರ….ಕಾರಣ ಏನು?

    ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು….

  • ನೀತಿ ಕಥೆ

    ಸ್ವರ್ಗ..ನರಕಗಳ ನಡುವೆ ಇರುವ ವ್ಯತ್ಯಾಸವೇನೆಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ಅದೊಂದು ಶಾಲೆ…ಅದರಲ್ಲಿ ಒಬ್ಬ ವಿದ್ಯಾರ್ಥಿಗೆ ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳುವು ದೆಂದರೆ ಬಹಳ ಇಷ್ಟ. ಈ ನಿಟ್ಟಿನಲ್ಲಿ ಒಂದು ದಿನ ಆ ಹುಡುಗ ತನ್ನ ಟೀಚರ್ ಬಳಿ ಸ್ವರ್ಗ ಹಾಗೂ ನರಕ ಎಂದರೇನು. ಇವೆರಡರ ನಡುವೆ ಇರುವ ವ್ಯತ್ಯಾಸವೇನು? ಎಂದು ಪ್ರಶ್ನಿಸುತ್ತಾನೆ.

  • ಸುದ್ದಿ

    ಮುಂಬೈನಲ್ಲಿ ಇಂದು ಭಾರೀ ಮಳೆ ಸಾಧ್ಯತೆ ಗೋಡೆ ಕುಸಿದು 18 ಮಂದಿ ಸಾವು…!

    ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮಲಾಡ್‍ನ ಕರೂರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಗೋಡೆ ಕುಸಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಈ ದುರಂತ ನಡೆದಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಗುಡಿಸಲುಗಳ ಮೇಲೆಯೇ 20 ಅಡಿ ಉದ್ದ ಹಾಗೂ ಬಹು ಎತ್ತರದ ಗೋಡೆ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿರುವ ಪರಿಣಾಮ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಫ್ ಪಡೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀದಿನ ಊಟದ ಜೊತೆಗೆ ತುಪ್ಪ ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…

  • ತಂತ್ರಜ್ಞಾನ

    ನೀವು ದಿನನಿತ್ಯ ನಡೆಯುವುದರಿಂದ ಬ್ಯಾಟರಿ ಚಾರ್ಜ್ ಮಾಡಬಹುದು ಹೇಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.