ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಯಾಂಡಲ್ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಎಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ ಜೋಡಿ. ರಾಧಿಕಾ ಪಂಡಿತ್ ಅವರು ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದವರು ತಿಳಿಸಿದ್ದಾರೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್ ಮನೆಯವರು ಮತ್ತು ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
ಇತ್ತೀಚೆಗೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದರು. ಈ ಕಾರ್ಯಕ್ರಮವನ್ನು ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು. ರಾಧಿಕಾ ಕಾರ್ಯಕ್ರಮದ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, ನನ್ನ ಸ್ನೇಹಿತರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ ಆಂಟಿಗಳಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದರು.
ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ಅವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.
ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ ಸಂತೋಷದಲ್ಲಿದ್ದರೆ ಯಶ್ ಅವರು ಮತ್ತು ಅವರ ಕುಟುಂಬದವರು ಸಹ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಸ್ಮಾರ್ಟ್ಫೋನ್ಸ್ ಇಂದು ನಮ್ಮ ಜೀವನವನ್ನು ಯಾವುದೋ ಒಂದು ವಿಧದಲ್ಲಿ ಪ್ರಭಾವಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ. ಅಂಗೈಯಲ್ಲಿ ಜಗತ್ತನ್ನು ತೋರಿಸುವ ಹೈಸ್ಪೀಡ್ ಇಂಟರ್ನೆಟ್, ಸಾಮಾಜಿಕ ನೆಟ್ವರ್ಕಿಂಗ್, ಮ್ಯಾಪ್ಸ್, ಗೇಮ್ಸ್, ಎಂಟರ್ ಟೇನ್ಮೆಂಟ್…. ಹೀಗೆ ಸಾಕಷ್ಟು ರೀತಿಯಲ್ಲಿ ಸ್ಮಾರ್ಟ್ಫೋನ್ಸ್ನ್ನು ನಾವು ಬಳಸುತ್ತಿದ್ದೇವೆ. ಅತ್ಯಂತ ಕಡಿಮೆ ಬೆಲೆಗೆ ಇವು ಈಗ ನಮಗೆ ಲಭ್ಯವಾಗುತ್ತಿವೆ
ಗತಿಸಿದ ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಈ ಮಾಸಾಂತ್ಯದವರೆಗೆ ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಪಿತೃಪಕ್ಷದ ಪರಂಪರೆ ನಡೆದುಕೊಂಡು ಬಂದಿದೆ. ಮಹಾಭಾರತದಲ್ಲಿ ತನ್ನ ಕರ್ಣಕುಂಡಲವನ್ನು ಕೊಟ್ಟು ಮರಣವನ್ನಪ್ಪಿದ ಕರ್ಣ, ಸ್ವರ್ಗ ಲೋಕಕ್ಕೆ ಹೋದ ವೇಳೆ ಆಹಾರವಾಗಿ ವಜ್ರ, ವೈಢೂರ್ಯಗಳನ್ನು ನೀಡಲಾಗುತ್ತದೆ. ಆಗ ಕರ್ಣ ಈ ಕುರಿತು ಪ್ರಶ್ನಿಸಿದಾಗ, ಹಿರಿಯರಿಗೆ ಶ್ರಾದ್ದ ಮಾಡದ ಹಿನ್ನಲೆಯಲ್ಲಿ ಕರ್ಣ ಮಾಡಿದ ದಾನಕ್ಕೆ ಅನುಸಾರವಾಗಿ ಇದನ್ನು ನೀಡಲಾಗುತ್ತದೆ ಎನ್ನಲಾಗುತ್ತದೆ….
ಉಡುಪಿ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ದಿನೇಶ್ ಆತ್ಮಹತ್ಯೆಗೆ ಶರಣಾದ ತಂದೆ. ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ದಿನೇಶ್ ಇತ್ತೀಚೆಗಷ್ಟೇ ಸಾಲ ಮಾಡಿ, ಮಗಳ ಮದುವೆ ಮಾಡಿಸಿದ್ದರು. ಈ ಮದುವೆ ಸಾಲದ ಜೊತೆಗೆ ಟ್ಯಾಕ್ಸಿ ಕೂಡಾ ಅಪಘಾತಕ್ಕೀಡಾಗಿತ್ತು. ಇದರಿಂದ ಚಿಂತೆಗೀಡಾಗಿದ್ದ ದಿನೇಶ್, ಉಡುಪಿಯ ಇಂದ್ರಾಳಿ ಬಳಿಯ ರೈಲ್ವೆ ಟ್ರ್ಯಾಕ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ಯಾಕ್ಸಿಯಲ್ಲಿ ದುಡಿದು ಮನೆ ನಿಭಾಯಿಸುವ ಜೊತೆಗೆ ಮದುವೆಗೆ ಮಾಡಿದ್ದ ಸಾಲ…
ಬಿಗ್ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ…