inspirational, ಸುದ್ದಿ

ಹಾಲರುವೆ ಉತ್ಸವದ ಸಂಭ್ರಮ- ಹರ್ಷೋದ್ಘಾರದ ಮಧ್ಯೆ ಮಾದಪ್ಪನ ಜಾತ್ರೆ..!ಇದರ ವಿಶೇಷ, ಹಿನ್ನೆಲೆಯೇನು?

45

ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಅದರಲ್ಲೂ ಎರಡನೇ ದಿನ ನಡೆಯುವ ಹಾಲರುವೆ ಉತ್ಸವ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ನಡೆಯುತ್ತದೆ.

ಮಹದೇಶ್ವರ ದೇವಸ್ಥಾನಕ್ಕೆ 9 ಕಿ.ಮೀ ದೂರದಲ್ಲಿ ಬೆಟ್ಟಗುಡ್ಡಗಳ ನಡುವೆ ಒಂದು ಹಳ್ಳ ಹರಿಯುತ್ತದೆ. ಮಹದೇಶ್ವರರು ಇಲ್ಲಿ ಕಾರಯ್ಯ ಬಿಲ್ಲಯ್ಯ ಎಂಬ ಬೇಟೆಗಾರರು ತಂದುಕೊಟ್ಟ ಕಾಡೆಮ್ಮೆ ಹಾಲನ್ನು ಆಕಸ್ಮಿಕವಾಗಿ ಚೆಲ್ಲಿದರು ಎಂಬ ಐತಿಹ್ಯವಿದೆ. ಈ ಹಳ್ಳದ ನೀರು ಹಾಲಿನಂತೆ ಬೆಳ್ಳಗೆ ಇರುವ ಕಾರಣ ಇದಕ್ಕೆ ಹಾಲಹಳ್ಳ ಎಂಬ ಹೆಸರು ಬಂದಿದೆ.

ದೀಪಾವಳಿ ಜಾತ್ರೆಯ ಎರಡನೇ ದಿನ ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಹೆಣ್ಣುಮಕ್ಕಳು ಉಪವಾಸವಿದ್ದು ಹಾಲಹಳ್ಳಕ್ಕೆ ಬಂದು ಸ್ನಾನ ಮಾಡಿ ಹಳ್ಳದಲ್ಲಿ ಹರಿಯುವ ನೀರು ಹೊತ್ತು ತರುತ್ತಾರೆ. ಬರಿಗಾಲಲ್ಲಿ 9 ಕಿ.ಮೀ ಬೆಟ್ಟಗುಡ್ಡ ಹತ್ತಿ ಬರುವ ಇವರನ್ನು ಸತ್ತಿಗೆ ಸೂರಿಪಾನಿ, ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ ಎಂದು ಪ್ರಧಾನ ಅರ್ಚಕ ಕೆ. ಮಹದೇಶ್ ಹೇಳುತ್ತಾರೆ.ಬೇಡಗಂಪಣ ಬಾಲೆಯರಿಂದ 101 ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ.

ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಅಂತಹ ತಾಯಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಏಳು ಮಲೆ ಒಡೆಯನಿಗೆ ದೀಪಾವಳಿಯಲ್ಲಿ ಎಲ್ಲ ಅಭಿಷೇಕಗಳಿಗಿಂತ ಹಾಲರುವೆ ಅಭಿಷೇಕ ವಿಶೇಷವಾದುದ್ದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ ಜಿಯೋ..!

    ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದ ಜಿಯೋ ಇದೀಗ ತನ್ನ ಹೊರೆಯನ್ನ ತಗ್ಗಿಸಲು ಗ್ರಾಹಕರಿಗೆ ಶಾಕ್‌ ಕೊಡಲು ರೆಡಿಯಾಗಿದೆ. ಈಗಾಗಲೇ ದೇಶದ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೋಡಾಪೋನ್,ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ಏರ್‌ಟೆಲ್ ವೊಡಾಫೋನ್-ಐಡಿಯಾ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸಬೇಕಿದೆ. ಇದೇ ಹಾದಿಯಲ್ಲಿ ಸಾಗುವ…

  • ಸೌಂದರ್ಯ

    ಮನೆಯ ಡಬ್ಬಿಯಲ್ಲಿರುವ ಇದು ಈ 5 ಆರೋಗ್ಯ ಮತ್ತು ಸೌಂದರ್ಯ ತರುವ ಗುಣಗಳನ್ನು ಹೊಂದಿದೆ!!!

    ಅರಿಶಿನವು ಭಾರತೀಯ ಅಡುಗೆಮನೆಯಲ್ಲಿ ಬಳಸಲಾಗುವ ಪ್ರಸಿದ್ಧ ಮಸಾಲೆಯಾಗಿದೆ. ಆಹಾರಕ್ಕಾಗಿ ಸುವಾಸನೆಯನ್ನು ಮತ್ತು ರುಚಿಯನ್ನು ಸೇರಿಸುವುದರ ಜೊತೆಗೆ, ನಿಮಗೆ ಗೊತ್ತಿಲ್ಲದ ಅರಿಶಿನದ ಇನ್ನೂ 5 ಉಪಯೋಗಗಳಿವೆ.

  • ಸುದ್ದಿ

    ಹೆಣ್ಣು ಮಗು ಭವಿಷ್ಯಕ್ಕೆ ಕಂಟಕವೆಂದ ಜ್ಯೋತಿಷಿ; ಮಗುವನ್ನೇ ಕೊಂದ ಅಪ್ಪ…!

    ಚಿಕ್ಕಮಗಳೂರು: ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದ ಜ್ಯೋತಿಷಿಯೊಬ್ಬನ ಮಾತು ಕೇಳಿ 1.5 ತಿಂಗಳ ಹೆಣ್ಣು ಹಸುಗೂಸನ್ನು ಸ್ವತಃ ತಂದೆಯೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ ಘಟ‌ನೆ ನಡೆದಿದೆ. 27 ವರ್ಷದ ಮಂಜುನಾಥ್‌ ನವಜಾತ ಕಂದಮ್ಮನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿ ಹೇಳಿದ್ದರಿಂದ ಅದನ್ನು ಕುರುಡಾಗಿ ನಂಬಿದ ತಂದೆ ಮಗುವನ್ನು ಕತ್ತು…

  • ವಿಸ್ಮಯ ಜಗತ್ತು

    ಸುಳ್ಳು ಸುದ್ದಿ ನಂಬಿ ಮಾಂಗಲ್ಯ ಸರದಲ್ಲಿನ ಹವಳವನ್ನು ಒಡೆದು ಬಿಸಾಡಿದ ಮಹಿಳೆಯರು!ಆ ಸುಳ್ಳು ವದಂತಿ ಏನು ಗೊತ್ತಾ?ಈ ಲೇಖನಿ ಓದಿ…

    ಬಾಯಿಯಿಂದ ಬಾಯಿಗೆ ಹಬ್ಬಿದ ಸುಳ್ಳು ಸುದ್ದಿಯಿಂದಾಗಿ ಆತಂಕಗೊಂಡ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದು ಮಾಂಗಲ್ಯ ಸರದಲ್ಲಿ ಇದ್ದ ಕೆಂಪು ಹವಳವನ್ನು ತೆಗೆದು ಕುಟ್ಟಿ ಪುಡಿ ಮಾಡಿದ್ದಾರೆ.

  • ಸುದ್ದಿ

    ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

    ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ . ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು…