ಸುದ್ದಿ

ಬಾಲಿವುಡ್ನಮಹಾಭಾರತ ಕಥೆಯಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಲಿರುವ ಬೆಂಗಳೂರು ಮೂಲದ ಹುಡುಗಿ..!ಆ ನಟಿ ಯಾರು ಗೊತ್ತಾ?

97

ಬಾಲಿವುಡ್ನಲ್ಲಿ ಮಹಾಭಾರತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡ್ತಿದೆ. ನಟ ಅಮೀರ್ ಖಾನ್ ಇಂತಹದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಬಹುದೊಡ್ಡ ಬಜೆಟ್ ನಲ್ಲಿ, ಐದು ಸರಣಿಯಾಗಿ ಸಿನಿಮಾ ಮಾಡಲು ಚಿಂತಿಸಿದ್ದರು.ಆದ್ರೀಗ, ಅಮೀರ್ ಖಾನ್ ಗೂ ಮೊದಲು ಮತ್ತೊಬ್ಬ ನಿರ್ಮಾಪಕ ಮಹಾಭಾರತ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಚಿತ್ರವನ್ನ ದ್ರೌಪದಿ ದೃಷ್ಟಿಕೋನದಲ್ಲಿ ತೋರಿಸಲಾಗುತ್ತಿದ್ದು, ಪಾಂಚಲಿ ಪಾತ್ರಕ್ಕಾಗಿ ಸ್ಟಾರ್ ನಟಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಯಾರದು? ಮುಂದೆ ಓದಿ.

ಖ್ಯಾತ ನಿರ್ಮಾಪಕ ಮಧು ಮಂತೇನಾ ನಿರ್ಮಿಸಲಿರುವ ಮಹಾಭಾರತ ಚಿತ್ರದಲ್ಲಿ ಬೆಂಗಳೂರು ಮೂಲದ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದ್ರೌಪದಿ ಪಾತ್ರ ನಿರ್ವಹಿಸಲಿದ್ದಾರೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ದ್ರೌಪದಿಯನ್ನ ನಾಯಕಿಯನ್ನಾಗಿಸಿ ಚಿತ್ರಕಥೆ ಮಾಡಲಾಗುತ್ತದೆ.

ಮಧು ಮಂತೇನಾ ಅವರ ಜೊತೆ ದೀಪಿಕಾ ಪಡುಕೋಣೆ ಅವರು ಸಹ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಇದಕ್ಕೂ ಮುಂಚೆ ಚಪಕ್ ಚಿತ್ರಕ್ಕೆ ದೀಪಿಕಾ ನಿರ್ಮಾಪಕಿಯಾಗಿದ್ದರು. ಈ ಸಿನಿಮಾ ಇನ್ನು ಚಿತ್ರೀಕರಣ ನಡೆಯುತ್ತಿದೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ ವಾಲ್ ಜೀವನಾಧರಿತ ಕಥೆ ಇದಾಗಿದೆ.

ಮಹಾಭಾರತ ಅಂದ್ಮೇಲೆ ಅಲ್ಲಿ ದ್ರೌಪದಿ ಮಾತ್ರ ಮುಖ್ಯವಲ್ಲ. ಧರ್ಮರಾಮ, ಭೀಮ, ಅರ್ಜುನ, ನಕುಲ, ಸಹದೇವ, ದುರ್ಯೋಧನ, ಕೃಷ್ಣ ಹೀಗೆ ಅನೇಕ ಪಾತ್ರಗಳು ಇರಲಿದೆ. ಇಂತಹ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಯಾವ ನಟರು ನಟಿಸಬಹುದು ಎಂಬ ಕುತೂಹಲ ಈಗ ಆರಂಭವಾಗಿದೆ.ಮಹಾಭಾರತ ಚಿತ್ರವನ್ನ ಎರಡು ಅಥವಾ ಮೂರಕ್ಕಿಂತ ಹೆಚ್ಚು ಸರಣಿ ಮಾಡುವ ನಿರೀಕ್ಷೆ ಇದೆ. ಮೊದಲ ಆವೃತ್ತಿ 2021ರ ದೀಪಾವಳಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಪ್ರಿ-ಪ್ರೊಡಕ್ಷನ್ ಮುಗಿದ್ಮೇಲೆ ಸಿನಿಮಾ ಶೂಟಿಂಗ್ ಆರಂಭಿಸುವ ಚಿಂತನೆ ಇದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ 6 ಕೆಜಿ ಅಕ್ಕಿ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ ಐದು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದೀಗ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ವಿತರಿಸಲಿದೆ. 5+1= 6 KG ಈ ಸಂಬಂಧ ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಆ ಆದೇಶದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಡಿಸೆಂಬರ್ 2022ಕ್ಕೆ ಅಂತ್ಯಗೊಂಡ…

  • ಸುದ್ದಿ

    ಇದೊಂದು ಭಯಾನಕ ಸುದ್ದಿ ; ನೀವು ಶೌಚಾಲಯಕ್ಕೆ ಹೋಗುವ ಮುನ್ನ ಇದನ್ನೊಮ್ಮೆ ಓದಿ…!

    ಇದೊಂದು ಭಯಾನಕ ಸುದ್ದಿ.  ಎಲ್ಲರೂ ಭಹಯಬೀಳುವಂತಹ  ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್‌ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ  ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ  ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು….

  • ಸುದ್ದಿ

    ಎಸ್ಒಎಸ್ ಸಂಕೇತದಿಂದ ಪ್ರಾಣಾಪಾಯದಿಂದ ಪಾರಾದ ಮಹಿಳೆ,. ಹೇಗೆ ಗೊತ್ತಾ.?

    ಅದು ಆಸ್ಟ್ರೇಲಿಯಾದ ಅರಣ್ಯ. ಅದೆಷ್ಟೋ ವನ್ಯಸಂಕುಲಕ್ಕೆ ಈ ಕಾಡೇ ಆಶ್ರಯ ತಾಣ. ಇಂತಹ ಕಾನನದಲ್ಲಿ 55 ವರ್ಷದ ಮಹಿಳೆಯೊಬ್ಬರು  ಗೊತ್ತಾಗದೇ ದಾರಿ  ತಪ್ಪಿದ್ದರು…! ಬರೋಬ್ಬರಿ ಮೂರು ದಿನಗಳ ಕಾಲ  ಇವರು ಕಾಡಿನಲ್ಲಿ ದಾರಿ ತಪ್ಪಿ ಭಯದಲ್ಲೇ ಅಲೆದಾಡುತ್ತಿದ್ದರು. ಅಂತಹ ಸಮಯದಲ್ಲಿ  ಮಹಿಳೆ ಪತ್ತೆಯಾಗಿದ್ದು        ಇದೊಂದು ಸಂಕೇತದಿಂದ ಆ ಸಂಕೇತವಾದರೂ ಏನು ಗೊತ್ತಾ,… ಈಕೆ ಡೆಬೊರಾ ಪಿಲ್ಗ್ರಿಮ್. ಕಾಡಂಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಇವರು ಸಾಗುತ್ತಿದ್ದರು. ಒಬ್ಬರೇ ಇದ್ದರು. ಹೀಗೆ ಸಾಗುವಾಗ ಅಕಸ್ಮಾತ್  ದಾರಿ ತಪ್ಪಿದ್ದರು. ಹೀಗಾಗಿ,…

  • ಸಿನಿಮಾ

    ಅಬ್ಬಬ್ಬಾ “ರಾಜ್ ವಿಷ್ಣು” ಕನ್ನಡ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಚಿಂದಿ! ಟ್ರೇಲರ್ ನೋಡಲು ಈ ಲೇಖನಿ ಓದಿ….

    ಶರಣ್ ನಾಯಕ ನಟನಾಗಿ ನಟಿಸಿದ್ದು ಪ್ರಮುಖ ಪಾತ್ರಧಾರಿಗಳಾಗಿ ಚಿಕ್ಕಣ್ಣ, ಸಾಧು ಕೋಕಿಲ ನಟಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹೆಸರುಗಳನ್ನು ಇಟ್ಟು ನಿರ್ಮಾಣವಾಗುತ್ತಿರುವ ಸಿನಿಮಾ ‘ರಾಜ್ ವಿಷ್ಣು’ ಸಿನಿಮಾದ ಟ್ರೇಲರ್ ಇದೀಗ ಯೂಟ್ಯೂಬಲ್ಲಿ

  • ಜ್ಯೋತಿಷ್ಯ

    ಶಾಸ್ತ್ರಗಳ ಪ್ರಕಾರ ಯಾವ ರಾಶಿಯವರು ಯಾವ ಬಣ್ಣದ ಬಳೆ ಹಾಕಿದ್ರೆ ಗಂಡನ ಆಯಸ್ಸು ಹೆಚ್ಚಾಗುತ್ತೆ ನೋಡಿ

    ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು ವೃದ್ಧಿಗೆ ನೀವೂ ಬಯಸಿದ್ದರೆ ಈ ಸುಲಭ ಉಪಾಯವನ್ನು ಅನುಸರಿಸಿ. ರಾಶಿಗೆ ಅನುಗುಣವಾಗಿ ಯಾವುದೇ ಮಹಿಳೆ ತನ್ನ ಬಳೆಯ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಆಕೆಯ ಪತಿ ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು…