ಸುದ್ದಿ

ದೀಪಾವಳಿ ಹಬ್ಬದಂದು ಕೆಲವು ನಿಷೇಧಿತ ಪ್ರದೇಶದಲ್ಲಿ ಪಟಾಕಿ ಬಳಸುವಂತಿಲ್ಲ…!ಯಾವ ಯಾವ ಸ್ಥಳ ಗೊತ್ತ?

79

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ನಿಟ್ಟಿನಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999 ರ ಅನ್ವಯ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ 125 ಆb (ಂI) ಅಥವಾ 145 ಆb(ಅ) ಠಿಞ ಕ್ಕಿಂತ , ಪಟಾಕಿ ಸಿಡಿಸುವ ಸ್ಥಳದಿಂದ 4 ಮೀಟರ್ ಅಂತರದಲ್ಲಿ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಮಾರಾಟ ಮಾಡುವುದಾಗಲಿ ಮತ್ತು ಉಪಯೋಗಿಸುವುದಾಗಲಿ ನಿಷೇಧಿಸಲ್ಪಟ್ಟಿದೆ.

ಆದುದರಿಂದ ಸಾರ್ವಜನಿಕರು 125 ಆb (ಂI) ಅಥವಾ 145 ಆb(ಅ) ಠಿಞ ಕ್ಕಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದೆಂದು ತಿಳಿಸಲಾಗಿದೆ. ಅಲ್ಲದೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ/ ಸಿಡಿಮದ್ದು, ಸಿಡಿಸುವುದನ್ನು ನಿಷೇಧಿಸಲಾಗಿದೆ.

ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮತ್ತ ಯಾವುದೇ ರೀತಿಯ ಶಬ್ದ ಉಂಟು ಮಾಡುವ ನಿಷೇದಿತ ಪಟಾಕಿ/ ಸಿಡಿಮದ್ದು ಬಳಸಬಾರದು.ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಪೋಟದಿಂದ ಅಪಾಯಗಳು ಆಗುವ ಸಾಧ್ಯತೆ ಇರುವುದರಿಂದ ಆ ಪ್ರದೇಶದಲ್ಲಿ ಪಾಟಾಕಿ ನಿಷಿದ್ಧ.

ಸಾರ್ವಜನಿಕರು ಹಸಿರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ  10 ಗಂಟೆಯವರೆಗೆ ಮಾತ್ರ ಸಿಡಿಸಬೇಕು ಹಾಗೂ ದೀಪಾವಳಿ ಹಬ್ಬವನ್ನು ಸಿಡಿಮದ್ದು, ಪಟಾಕಿಗಳನ್ನು ಉಪಯೊಗಿಸದೇ ದೀಪದ ಹಬ್ಬವನ್ನಾಗಿ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಪ್ರಕಟಣೆ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ನಿಯಮ ಉಲ್ಲಂಗಿಸಲಿಲ್ಲ’ ‘ಯಾವುದೆ ವಿದೇಶೀಯ ಫಂಡ್ಸ್ ಪಡೆದಿಲ್ಲ’ ; ಇನ್ಫೋಸಿಸ್

    ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು. ಈ…

  • ಉಪಯುಕ್ತ ಮಾಹಿತಿ

    ಹೃದಯಾಘಾತವಾದ ತಕ್ಷಣ ಹೀಗೆ ಮಾಡಿದ್ರೆ ಪ್ರಾಣ ಉಳಿಸಬಹುದು…

    ಹೃದಯಾಘಾತದ ಬಗ್ಗೆ ಇರುವ ಮಾಹಿತಿಯನ್ನು ಎಲ್ಲರೂ ತಿಳಿದಿರಲೇಬೇಕು. ಹೃದಯಾಘಾತ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ನಮ್ಮ ಜೀವಮಾನದ ಅವದಿಯಲ್ಲಿ ನಮ್ಮ ಸಂಬದಿಕರಿಗೋ, ಸ್ನೇಹ್ತಿತರಿಗೋ ಯಾರಿಗಾದ್ರೂ ಹೃದಯಾಘಾತ ಬರಬಹುದು. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.

  • ಉಪಯುಕ್ತ ಮಾಹಿತಿ

    ಪ್ರತೀದಿನ ತಪ್ಪದೆ ಈ ಕೆಲಸ ಮಾಡಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಮುಖದಲ್ಲಿರುವ ಕಪ್ಪುಕಲೆ ಮಂಗಮಯವಾಗುತ್ತೆ…

    ಮುಖದ ಮೇಲೆ ಒಂದು ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ಮುಖವೆಲ್ಲ ಕಲೆಯಾದ್ರೆ ಸೌಂದರ್ಯ ಹಾಳಾಗುತ್ತದೆ. ಕಲೆ ಹೋಗಲಾಡಿಸಿ ಸುಂದರ ಮುಖಕ್ಕಾಗಿ ಜನರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಅದ್ರ ಬದಲು ದಿನದಲ್ಲಿ 5 ನಿಮಿಷ ಈ ಮನೆ ಔಷಧಿ ಬಳಸಿದ್ರೆ ಮುಖ ಸುಂದರವಾಗಿ, ಆಕರ್ಷಕವಾಗಿ ಕಾಣುತ್ತದೆ. ಮೂಲಂಗಿ :-  ಮುಖದ ಮೇಲಿರುವ ಕಪ್ಪು ಕಲೆಗಳನ್ನು ಮೂಲಂಗಿ ದೂರ ಮಾಡುತ್ತದೆ. ಪ್ರತಿ ದಿನ ಮೂಲಂಗಿ ರಸವನ್ನು ಮುಖಕ್ಕೆ ಹಚ್ಚಿ. ಕೆಲ ಸಮಯ ಬಿಟ್ಟು ಮುಖ ತೊಳೆಯಿರಿ. ಮಜ್ಜಿಗೆ…

  • ಸಿನಿಮಾ

    ಬಾಡಿಗೆ ಮನೆಯನ್ನು ಖಾಲಿ ಮಾಡಲು ಕೋರ್ಟ್ ನಲ್ಲಿ ಸಮಯ ಕೇಳಿದ ಯಶ್ ತಾಯಿ.!ಈ ಸುದ್ದಿ ನೋಡಿ..

    ರಾಕಿಂಗ್ ಸ್ಟಾರ್ ಯಶ್ ಕುಟುಂಬ ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಯನ್ನು ಮಾರ್ಚ್ 31ರೊಳಗೆ ಖಾಲಿ ಮಾಡಬೇಕಾಗಿತ್ತು. ಆದರೆ ಇದೀಗ ಯಶ್ ಅವರ ತಾಯಿ ಪುಷ್ಪಾ, ಇನ್ನೂ ಆರು ತಿಂಗಳ ಕಾಲ ಇದೇ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಕುಟುಂಬ ಹಾಸನದಲ್ಲಿ ನೆಲೆಸಲು ನಿರ್ಧರಿಸಿದ್ದು, ಅಲ್ಲಿ ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇನ್ನು 6 ತಿಂಗಳೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ತಮಗೆ ಈಗ ವಾಸಿಸುತ್ತಿರುವ…

  • ಸುದ್ದಿ

    ನಮ್ಗೆ ಪ್ರಚಾರ ನಿಲ್ಲಿಸುವಂತೆ ಹೇಳುತ್ತಾರೆ..ಅವರಿಗೆ ಅವಧಿ ಮೀರಿದ್ರೂ ಪ್ರಚಾರ ಮಾಡಲು ಅವಕಾಶ ಕೊಡುತ್ತಾರೆ ಎಂದು ದೂರು ಕೊಟ್ಟ ಸುಮಲತಾ…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದ ಗೊಂದಲಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಮಾಹಿತಿ ತಿಳಿದುಕೊಳ್ಳಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿದ್ದಾರೆ ನಮಗೆ ರಾತ್ರಿ 9.30 ಕ್ಕೆ ಪ್ರಚಾರ ನಿಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ….

  • ಸಿನಿಮಾ

    ಶಾಕಿಂಗ್ ನ್ಯೂಸ್, ಪ್ರಥಮ್ ನಿಂದ ಲೈವ್ ಪ್ರೇಮ ಪತ್ರ ! ಯಾರಿಗೆ? ಏನಾಯಿತು?

    ಒಳ್ಳೆ ಹುಡುಗ ಪ್ರಥಮ್ ರವರು ಪ್ರೇಮ ಪತ್ರವನ್ನು ಬರೆದಿದ್ದಾರೆ. ಯಾರಿಗೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಪ್ರಥಮ್ ರವರು ಲೈವ್ ನಲ್ಲಿ ತಮ್ಮ ಬಿಗಬಾಸ್ ಗೆಳತಿ “ಸಂಜನವ”ರಿಗೆ ಪ್ರೇಮ ಪತ್ರವನ್ನು ಬರೆದಿದ್ದಾರೆ.