ಸುದ್ದಿ

ಸರ್ಕಾರದಿಂದ ಬಿಗ್ ಶಾಕ್..!ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗವಿಲ್ಲ…

41

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲವೆಂದು ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ.ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು 2021 ರಿಂದ ಈ ನೀತಿ ಅನುಷ್ಠಾನಗೊಳ್ಳುತ್ತದೆ.

2017 ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ  “ಅಸ್ಸಾಂ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ” ಅಂಗಿಕಾರವಾಗಿತ್ತು. ಇದರ ಅನ್ವಯ ಎರಡು ಅಥವಾ ಒಂದು ಮಕ್ಕಳನ್ನು ಹೊಂದಿದ್ದರವರು ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿದ್ದರು. ಈ ನೀತಿ ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿರುವವರಿಗೂ ಅನ್ವವಾಗಲಿದ್ದು 2021 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಈ ಮಾಹಿತಿಯನ್ನು ಅಧಿಕೃತಗೊಳಿಸಿದ್ದು, 2021 ಜನವರಿಯಿಂದ ಜಾರಿಗೆ ಬರುವಂತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರನ್ನು ಸರ್ಕಾರಿ ಉದ್ಯೋಗಕ್ಕೆ ಪರಿಗಣಿಸಲಾಗುವುದಿಲ್ಲ, ಜನಸಂಖ್ಯಾ ನಿಯಂತ್ರಣ ಇದರ ಹಿಂದಿರುವ ಪ್ರಮುಖ ಉದ್ದೇಶ ಎಂದು ತಿಳಿಸಿದ್ದಾರೆ.

ಇದೇ ವೇಳೆ  ಹೊಸ ಭೂಕಾಯ್ದೆಯನ್ನು ಕೂಡ ಜಾರಿಗೆ ತರಲಾಗಿದ್ದು ಭೂರಹಿತ ರೈತರಿಗೆ ಜಮೀನನ್ನು ಒದಗಿಸುವುದರ ಜೊತೆಗೆ ಮನೆ ನಿರ್ಮಿಸಲು ಕೂಡ ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಪತಿ…….!

    ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.ನಂದಿನಿ(28) ಕೊಲೆಯಾದ ದುರ್ದೈವಿ. ನಂದಿನಿ ಪ್ರೈವೇಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಟ್ಟಡ ನಿರ್ಮಾಣ ಕಾರ್ಮಿಕ ಕನಕ ರಾಜುನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಕೂಡ ಇದ್ದಾರೆ. ನಂದಿನಿ ಹಾಗೂ ಕನಕ ರಾಜು ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಂದಿನಿ ತನ್ನ ಪತಿ ಕನಕ ರಾಜುನಿಂದ ದೂರ ಆಗಿ ಟಿಕ್‍ಟಾಕ್‍ಗೆ ಅಡಿಕ್ಟ್…

  • ಸುದ್ದಿ

    ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

    ‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ! ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ…

  • ಸುದ್ದಿ, ಸ್ಪೂರ್ತಿ

    ರತನ್ ಟಾಟಾ ಕಾಲಿಗೆ ಬಿದ್ದು ನಮಸ್ಕರಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ.

    72 ವರ್ಷದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 82 ವರ್ಷದ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾರಾಯಣ ಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ…

  • ಜ್ಯೋತಿಷ್ಯ

    ನವಿಲು ಗರಿಯನ್ನು ಮನೆಯ ಈ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

    ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಶ್ರೀಕೃಷ್ಣನ ತಲೆ ಮೇಲೂ ನವಿಲು ಗರಿಯಿರುತ್ತದೆ. ನವಿಲು ಗರಿ ಮನೆಯಲ್ಲಿದ್ದರೆ ಸಾಕಷ್ಟು ಲಾಭಗಳಿವೆ. ನವಿಲು ಗರಿ ಮನೆಯ ಸುಖ, ಶಾಂತಿ, ಸಮೃದ್ಧಿಗೆ ಕಾರಣವಾಗುತ್ತದೆ. ಶುಕ್ರವಾರದ ದಿನ ನವಿಲು ಗರಿಯನ್ನು ಮನೆಗೆ ತನ್ನಿ. ಅದನ್ನು ದೇವರ ಮನೆಯಲ್ಲಿಡಿ. ದೇವರ ಮನೆಯಲ್ಲಿ ಪೂಜೆ ವೇಳೆ ಗಣೇಶ, ಈಶ್ವರ, ಲಕ್ಷ್ಮಿ, ಸರಸ್ವತಿ ಮತ್ತು ಹನುಮಂತನ ಮೂರ್ತಿ ಅಥವಾ ಫೋಟೋ…

  • ಸಿನಿಮಾ, ಸುದ್ದಿ

    ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ರಾಧಾ ಹಾಗೂ ಪುತ್ರಿ. ಆಕೆ ಯಾರು ಗೊತ್ತಾ..?

    ಸೌಭಾಗ್ಯಲಕ್ಷ್ಮಿ, ಉಷಾ, ಸಾವಿರ ಸುಳ್ಳು, ದಿಗ್ವಿಜಯ ಸಿನಿಮಾಗಳಲ್ಲಿ ನಟಿಸಿರುವ ಸುಂದರ ಮೊಗದ ನಟಿ ರಾಧಾ ಕನ್ನಡ ಚಿತ್ರಪ್ರೇಮಿಗಳಿಗೆ ಚೆನ್ನಾಗಿ ಪರಿಚಯ. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ ಸೌಭಾಗ್ಯಲಕ್ಷ್ಮಿ ಸಿನಿಮಾ.ರಾಧಾ ಮೊದಲ ಹೆಸರು ಉದಯಚಂದ್ರಿಕ. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದವರು. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿದವರು ರಾಧಾ. 1991 ರಲ್ಲಿ ರಾಧಾ ಉದ್ಯಮಿ ರಾಜಶೇಖರನ್ ನಾಯರ್ ಅವರನ್ನು ವಿವಾಹವಾದರು.ಈ ದಂಪತಿಗೆ…