ಸುದ್ದಿ

ಇನ್ನು ಮುಂದೆ ದೇವಸ್ಥಾನಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಂದ್..!ಯಾಕೆ ಗೊತ್ತ?

28

ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಾಗುತ್ತಿರುವ ಬಗ್ಗೆ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ದೇಗುಲಗಳಲ್ಲಿ ಪೂಜಾ ಕಾರ್ಯಗಳಿಗೆ ನಿಯಮಿತವಾಗಿ ಕುಂಕುಮ ಖರೀದಿಸಿ ಬಳಸಲಾಗುತ್ತದೆ. ಅರ್ಚನೆಗೆ ಬಳಸಿದ ಕುಂಕುಮವನ್ನು ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ. ಜತೆಗೆ ಭಕ್ತರು ಪೂಜೆಗೆಂದು ಸಲ್ಲಿಸಿದ ಕುಂಕುಮವನ್ನೂ ವಿತರಿಸಲಾಗುತ್ತಿದೆ.ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ ಸಮಸ್ಯೆ ಗಳಿಗೂ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಿಂದ ಅಲರ್ಜಿ (ಬಿಂದಿ ಡರ್ಮಟೈಟಿಸ್‌) ಉಂಟಾಗುವ ಸಾಧ್ಯತೆ ಇದೆ. ಇದರಿಂದ ಕುಂಕುಮ ಹಚ್ಚಿ ಕೊಂಡ ಭಾಗದಲ್ಲಿ ಕೆರೆತ, ಸಣ್ಣ ನೀರಿನ ಗುಳ್ಳೆ ಕಾಣಿಸಿಕೊಳ್ಳಬಹುದು. ಇಂತಹ ಕುಂಕುಮಗಳಿಂದ ಜೀವಕಣ ಗಳು ನಾಶವಾಗಿ ಕ್ರಮೇಣ ಆ ಭಾಗ ಬೆಳ್ಳಗಾಗಲಿದೆ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.

ಕೆಲವು ದೇಗುಲಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಳಸಲಾಗುತ್ತಿದೆ ಎಂದು ಭಕ್ತರಿಂದ ದೂರುಗಳು ಕೇಳಿ ಬಂದಿವೆ. ಭಕ್ತರ ಹಿತದೃಷ್ಟಿಯಿಂದ ರಾಸಾಯನಿಕ ಮಿಶ್ರಿತವೆಂದು ಕಂಡುಬಂದ ಕುಂಕುಮ ಖರೀದಿ, ಬಳಕೆ ಮಾಡದಂತೆ ಆದೇಶ ಹೊರಡಿಸಲಾಗುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಶಾಲಾ ಮಕ್ಕಳು ನೆಲ ಒರೆಸುತ್ತಿರುವ ಚಿತ್ರ ಸೆರೆ ಇಡಿದಿದ್ದಕ್ಕೆ ಪತ್ರಕರ್ತ ಅರೆಸ್ಟ್…!

    ಉತ್ತರ ಪ್ರದೇಶದ ಅಜಂಘಡ ಜಿಲ್ಲೆಯ ಶಾಲೆಯ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರವನ್ನು ಸೆರೆ ಹಿಡಿದ ಪತ್ರಕರ್ತನ ಬಂಧನವಾಗಿ ವಾರ ಕಳೆದ ಬಳಿಕ, ಸ್ಥಳೀಯ ಆಡಳಿತವು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ. ಜಿಲ್ಲೆಯ ಊದ್ಪುರ ಸರಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರಗಳನ್ನು ಸೆರೆಹಿಡಿದ ಸ್ಥಳೀಯ ಪತ್ರಕರ್ತ ಸಂತೋಷ್‌ ಜೈಸ್ವಾಲ್‌ನನ್ನು ಪೊಲೀಸರು ಬಂಧಿಸಿ, ಆತನ ವಿರುದ್ಧ ಸುಲಿಗೆ ಹಾಗೂ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಯಾದ ಆಪಾದನೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಶಾಲಾ ಪ್ರಾಂಶುಪಾಲರು, ಪತ್ರಕರ್ತನ ವಿರುದ್ದ…

  • ನೆಲದ ಮಾತು

    ಪಾಕ್ ಗಡಿಗೆ ಸಂಬಂದಿಸಿ,ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..!ತಿಳಿಯಲು ಇದನ್ನು ಓದಿ..

    ಭಾರತೀಯ ಸೇನೆ ಮತ್ತೊಮ್ಮೆ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ.ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮತ್ತೊಮ್ಮೆ ತಕ್ಕ ತಿರುಗೇಟು ನೀಡಿದೆ.

  • ಸುದ್ದಿ

    ಹೇರ್ ಫಾಲ್ ಟೆನ್ಶನ್ ಇಲ್ಲಿಗೆ ಬಿಡಿ, ಇನ್ಮುಂದೆ ನ್ಯಾಚುರಲ್ ಪರಿಹಾರ ಟ್ರೈ ಮಾಡಿ,..!

    ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್‍ನಿಂದ…

  • ಸುದ್ದಿ

    ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿಗೆ ನಿಟ್ಟುಸಿರು ಬಿಟ್ಟ ವಾಹನ ಸವಾರರು,.!

    ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದ್ದಂತೆ ಪರ ವಿರೋಧ ಕೇಳಿ ಬಂದಿದೆ. ಇದರಲ್ಲಿ ರಸ್ತೆ ರಿಪೇರಿ ಮಾಡಿ ಹೊಸ ನಿಯಮ ಜಾರಿ ಮಾಡಿ ಅನ್ನೋ ಒತ್ತಾಯ  ಕೇಳಿ ಬಂದಿತ್ತು. ಇದೀಗ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ನೆರೆ ರಾಜ್ಯ ರಸ್ತೆ ರಿಪೇರಿ ಬಳಿಕ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ. ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿ 10 ದಿನಗಳಾಗಿವೆ. ಆಗಲೇ ಕೋಟಿ ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ಕಟ್ಟಿ ಸುಸ್ತಾಗಿದ್ದಾರೆ. ದುಬಾರಿ…

  • ಆರೋಗ್ಯ

    ಹೆಚ್ಚು ಸಮಯ ಕಲಸಿಟ್ಟ ಹಿಟ್ಟನ್ನು ಬಳಸುವುದರಿಂದ ಏನಾಗುತ್ತೆ ಗೊತ್ತಾ? ನೋಡಿ.

    ಬೆಳಗ್ಗೆ ಸಮಯದ ಅಭಾವವಿರುವುದರಿಂದ ರಾತ್ರಿಯೇ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳುವುದು ಈಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿದೆ. ಕೆಲವರು ಚಪಾತಿ ಹಿಟ್ಟು ಕಲಸಿದರೆ, ಇನ್ನು ಕೆಲವರು ಅಕ್ಕಿ, ಗೋಧಿ, ಜೋಳದ ಹಿಟ್ಟನ್ನು ಕಲಸಿಡುತ್ತಾರೆ. ಆದರೆ ಹೀಗೆ ಕಲಸಿಟ್ಟ ಹಿಟ್ಟನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳು ಬೀರುತ್ತವೆ, ಅದೇನೆಂದು ನೀವೇ ಓದಿ ನೋಡಿ… ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು  ಮೃದುವಾದ, ಹಸಿ ಹಿಟ್ಟಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಸಾಮಾನ್ಯ ಹಿಟ್ಟಿಗಿಂತ ಬೇಗನೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಹಿಟ್ಟು…