ಸುದ್ದಿ

ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್, ಉಪಾಸನಾ ಕೊನಿಡೆಲಾ ಇನ್ನು ಅನೇಕ ಸ್ಟಾರ್​ಗಳು,..ಇದಕ್ಕೆ ಕಾರಣ.?ಇಲ್ಲಿದೆ ನೋಡಿ….

32

ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ  ‘ನಮ್ಮೊಳಗೆ ಬದಲಾವಣೆ’ (ಚೇಂಜ್ ವಿಥಿನ್) ಹೆಸರಿನಲ್ಲಿ ಬಾಲಿವುಡ್ ಸೆಲಬ್ರಿಟಿಗಳನ್ನು ಭೇಟಿಯಾಗಿದ್ದರು. ಬಾಲಿವುಡ್ ನಟರೊಂದಿಗಿನ ಮೋದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದವು. ಮತ್ತು  ಎಲ್ಲರ  ಟ್ವೀಟ್​ಗಳಿಗೂ ಉತ್ತರಿಸಿರುವ ಮೋದಿಕೂಡ ಚಿತ್ರರಂಗದ ದಿಗ್ಗಜರೊಂದಿಗೆ ಶನಿವಾರದ ಸಂಜೆಯನ್ನು ಕಳೆದಿರುವುದುಖುಷಿ ನೀಡಿದೆ ಎಂದು ಉತ್ತರಿಸಿದ್ದಾರೆ.

ಆದರೆ, ಬಾಲಿವುಡ್ ಚಿತ್ರರಂಗವನ್ನು ಮಾತ್ರ ಭಾರತೀಯ ಚಿತ್ರರಂಗವೆಂದು ಪರಿಗಣಿಸುತ್ತಿರುವುದಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಭಾರತೀಯ ಚಿತ್ರರಂಗವೆಂದರೆ ಖಾನ್​ಗಳು ಮಾತ್ರವಲ್ಲ ಎಂದು ಜಗ್ಗೇಶ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಕನ್ನಡಿಗರು ಇಂದು ಬಹುತೇಕ ಪರಭಾಷೆ ಸ್ಟಾರ್​ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ! ಪ್ರಧಾನಿ ನರೇಂದ್ರ ಮೋದಿ ಅವರೇ, ಉತ್ತರ ಭಾರತದ ನಟ-ನಟಿಯರಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ. ಶಾರೂಖ್, ಅಮೀರ್ ಖಾನ್ ಮಾತ್ರ ಕಲಾರಂಗಕ್ಕೆ ಒಡೆಯರಲ್ಲ! ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಮತ್ತು ಉಪಾಸನಾ  ಕೊನಿಡೆಲಾ  ಅವರು ಸಹ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರೀತಿಯ ನರೇಂದ್ರ ಮೋದಿಜೀ ನಾವು ದಕ್ಷಿಣ ಭಾರತದವರು. ನಿಮ್ಮನ್ನು ನಾವು ಪ್ರಧಾನಿಯನ್ನಾಗಿ ಪಡೆದಿದ್ದಕ್ಕಾಗಿ ಹೆಮ್ಮೆ ಪಡುತ್ತೇವೆ. ಪ್ರಮುಖ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು ಬರೀ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವೇ. ದಕ್ಷಿಣ ಭಾರತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ನನ್ನ ಭಾವನೆಗಳನ್ನು ಮಾತ್ರ ನೋವಿನಿಂದ ವ್ಯಕಪಡಿಸುತ್ತಿದ್ದೇನೆ. ಹೀಗಾಗಿ ನೀವು ನನ್ನ ಅಭಿಪ್ರಾಯವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಕೂಡ ಮಾಡಿರುವ ನಟ ಜಗ್ಗೇಶ್, ‘ಇಂದು ಕರ್ನಾಟಕದಲ್ಲಿ ಹೆಚ್ಚು ಮನರಂಜನಾ ತೆರಿಗೆ ಸಂಗ್ರಹವಾಗುತ್ತಿರುವುದು ಕನ್ನಡದ ಚಿತ್ರರಂಗದಿಂದ, ನಟರಿಂದ ಎಂಬುದನ್ನು ನೆನಪಿಡಿ! ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಅಲ್ಲ. ಈ ವಿಷಯ ಮನವರಿಕೆ ಮಾಡುವ ಕನ್ನಡ ಮನಸ್ಸುಗಳು ಇಲ್ಲವೆ ರಾಷ್ಟ್ರಕ್ಕೆ? ಎಂದು ತುಂಬಾ ದುಃಖವಾಯಿತು. ಖಾನ್​ಗಳು ಮಾತ್ರ ಚಿತ್ರರಂಗವಲ್ಲ’ ಎಂದು ಖಾರವಾಗಿ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.  ಕೇಂದ್ರ ಸರ್ಕಾರ ದಕ್ಷಿಣ ಭಾರತವನ್ನು ಮತ್ತು ಇಲ್ಲಿನ ಸ್ಯಾಂಡಲ್​ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಚಿತ್ರರಂಗವನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಇನ್ನೂ ಅನೇಕ ಸ್ಟಾರ್​ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ಖುಷ್ಬು ಕೂಡ ಮೋದಿ ಅವರ ನಡೆಯ ಬಗ್ಗೆ ಟ್ವಿಟ್ಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ