ಸುದ್ದಿ

ಇದೊಂದು ಭಯಾನಕ ಸುದ್ದಿ ; ನೀವು ಶೌಚಾಲಯಕ್ಕೆ ಹೋಗುವ ಮುನ್ನ ಇದನ್ನೊಮ್ಮೆ ಓದಿ…!

41

ಇದೊಂದು ಭಯಾನಕ ಸುದ್ದಿ.  ಎಲ್ಲರೂ ಭಹಯಬೀಳುವಂತಹ  ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್‌ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ  ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ  ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು. ಬಾಕಿ ಇಲಿಗಳು ಹಾವಿನ ಬಾಯಿಯಿಂದ ತಪ್ಪಿಸಿಕೊಂಡು ಓಡಿದರೆ ಒಂದು ಮಾತ್ರ ಹೆಬ್ಬಾವಿಗೆ ಆಹಾರವಾಗಿತ್ತು. ಈ ಭಯಾನಕ ದೃಶ್ಯ ಕಂಡ ಮಹಿಳೆ ಹೆದರಿ ತಕ್ಷಣ ತನ್ನ ಮಗ ಮಲಗಿದ್ದ ಕೋಣೆ ಹೋಗಿ ಮಗನನ್ನೂ ಎಬ್ಬಿಸಿದ್ದರು.

ಆದರೆ, ಈ ಘಟನೆಯಿಂದ ಎಂಗ್ಲರ್ ಭಯಗೊಂಡಿದ್ದರೆ ಮಗ ಮಾತ್ರ ತುಂಬಾ ಕುತೂಹಲಿಗನಾಗಿದ್ದ. ಕಾರಣ, ಹಾವು ಇಲಿಯನ್ನು ಬೇಟೆಯಾಡುವುದನ್ನು ಆತ ನೋಡಿರಲಿಲ್ಲ. ಇದೇ ಕಾರಣಕ್ಕೆ ಮಗ ಅಮ್ಮನನ್ನೂ ಕರೆದುಕೊಂಡು ಹೆಬ್ಬಾವಿನ ಇಲಿ ಬೇಟೆಯನ್ನು ನೋಡಲು   ನಿಂತಿದ್ದ. ಆದರೆ, ಎಂಗ್ಲರ್‌ ಮಾತ್ರ ಭಯದಲ್ಲಿ ನಡುಗುತ್ತಿದ್ದರು, ಅವರ ಧ್ವನಿಯೂ ಕಂಪಿಸುತ್ತಿತ್ತು… ಈ ಭಯದ ನಡುವೆಯೇ ಜನ್ನಾ ಈ ಹೆಬ್ಬಾವಿನ ಇಲಿ ಶಿಕಾರಿಯ ಫೋಟೋಗಳನ್ನು ತೆಗೆದಿಟ್ಟುಕೊಂಡಿದ್ದರು. ಇದನ್ನು ಜನ್ನಾ  ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ  ಸಾಕಷ್ಟು ಲೈಕ್  ಕಾಮೆಂಟ್ ಬಂದಿದೆ.

ಹಾವನ್ನು ಕಂಡ ಬಳಿಕ ಜನ್ನಾ ಬಾತ್‌ ರೂಮ್‌ನ ಬಾಗಿಲನ್ನು ಮುಚ್ಚಿದ್ದರು. ಸಣ್ಣ ಸಣ್ಣ ರಂಧ್ರಗಳಿಗೂ ಬಟ್ಟೆ ಇಟ್ಟು ಹಾವು ಮನೆಯೊಳಗೆ ಬರದಂತೆ ತಡೆದಿದ್ದರು. ಬಳಿಕ ಇವರು ಕೆಲಸಕ್ಕೆ ಹೋಗಿದ್ದರು. ಇಲ್ಲಿಂದ ಮರಳಿದ ಬಳಿಕ ಬಾತ್‌ ರೂಮ್‌ನ ಬಾಗಿಲು ತೆಗೆದರೆ ಹೆಬ್ಬಾವು ಇರಲಿಲ್ಲ. ಆದರೆ, ಇಲಿಗಳು ಸತ್ತು ಬಿದ್ದಿದ್ದವು. ಉರಗ ಸೆರೆ ಹಿಡಿಯುವವರು ಬಂದು ಹುಡುಕಿದಾಗಲೂ ಹಾವು ಪತ್ತೆಯಾಗಿರಲಿಲ್ಲ. ಬಹುಶಃ ಅಂದು ಹಾವು ಪೈಪಿನ ಮೂಲಕ ಹೊರಗೆ ಹೋಗಿರಬಹುದು ಎಂದು ಎಂಗ್ಲರ್ ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಮತ್ತೆ ಎಂಗ್ಲರ್ ತಮ್ಮ ಮನೆಯ ಆವರಣದಲ್ಲಿ ಮತ್ತೆ ಹೆಬ್ಬಾವನ್ನು ಕಂಡಿದ್ದರು. ತಕ್ಷಣ ಇವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಇವರು ಈ ಹೆಬ್ಬಾವನ್ನು ಸೆರೆ ಹಿಡಿಸಿದ್ದಾರೆ. ಬಳಿಕ ಈ ಹಾವನ್ನು ಹಿಡಿದು ಸುರಕ್ಷಿತವಾಗಿ ಬೇರೆ ಕಡೆಗೆ  ಸಾಗಿಸಲಾಗಿದೆ ಎಂದಿದ್ದಾರೆ .  ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಇಂತಹದ್ದೇ ಮತ್ತೊಂದು ಘಟನೆಯೂ ಸಹ  ನಡೆದಿತ್ತು. ಈ ಫೋಟೋಗಳನ್ನು ಹಾವು ರಕ್ಷಿಸುವ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.ಸದ್ಯ ಇಂತಹ ಘಟನೆಯಿಂದ ಜನರು ತುಂಬಾ  ಭಯಭೀತರಾಗಿದ್ದಾರೆ. ಯಾವಾಗ ಮನೆಯೊಳಗೆ ಹಾವು ಕಾಣಿಸಿಕೊಳ್ಳುತ್ತದೋ ಎಂಬ ಆತಂಕದಲ್ಲೇ ಇವರು ಜೀವನವನ್ನು  ನಡೆಸಲು ಮುಂದಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ ಈಗ ಆಕೆ ಐಎಎಸ್ ಅಧಿಕಾರಿ!

    ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ…

  • ಜ್ಯೋತಿಷ್ಯ

    ಶ್ರೀ ವಿಘ್ನ ವಿನಾಯಕನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಉಪಯುಕ್ತ ಮಾಹಿತಿ

    ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೊಸ ಟ್ರಿಕ್ಸ್..!ತಿಳಿಯಲು ಈ ಲೇಖನ ಓದಿ …

    ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.

  • ಜ್ಯೋತಿಷ್ಯ

    ರಾಘವೇಂದ್ರ ಸ್ವಾಮಿಯ ಕೃಪೆಯಿಂದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಮಾರ್ಚ್, 2019) ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು…

  • Animals, India, National, tourism

    ಇದು ಒಂಟೆಗಳ ಜಾತ್ರೆ !

    ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್‌ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ. ಪುಷ್ಕರ್…

  • ದೇಶ-ವಿದೇಶ

    ಭಾರತದ ಈ ಪುಟ್ಟ ಬಾಲಕನ ಬುದ್ದಿವಂತಿಕೆ ಪ್ರಮಾಣ ಅಳೆಯಲು ವಿಜ್ನ್ಯಾನಿಗಳಿಗೂ ಕಷ್ಟವಾಗಿದೆ!ಹಾಗಾದ್ರೆ ಈ ಬಾಲಕನ ಸಾಧನೆ ಏನು ಗೊತ್ತಾ?

    ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.