ಸುದ್ದಿ

ನಮಗೆ ಶಂಕ್ರಣ್ಣನ ಬಗ್ಗೆ ಗೊತ್ತಿರದ ಕುತೂಹಲಕಾರಿ ವಿಚಾರವೊಂದನ್ನು ಅಂಚಿಕೊಂಡ ಜೈ ಜಗದೀಶ್…​!

40

ಬಿಗ್​ಬಾಸ್​ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಚಿತ್ರರಂಗದಲ್ಲಿ ಘಟಿಸಿಹೋದಂತಹ ಹಲವು ಘಟನೆಗಳು ಬಿಗ್​ಬಾಸ್​ನಲ್ಲಿ ಅನಾವರಣಗೊಳ್ಳುತ್ತಿದೆ. ಮೊನ್ನೆ ಶಂಕರ್​ನಾಗ್​ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್​ನಾಗ್​ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ನಿನ್ನೆ ನಡೆದ ಸಂಚಿಕೆಯಲ್ಲಿ ಜೈ ಜಗದೀಶ್​ ಇತರೆ ಸ್ಪರ್ಧಿಗಳ ಜತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಒಬ್ಬ ಫೇಮಸ್​ ನಟ ತನ್ನ ಮಾರ್ಕೆಟ್​ ಬಿದ್ದಾಗ ವ್ಯಾನ್​ ಒಳಗೆ ಕ್ಯಾಂಟೀನ್​ ಇಟ್ಟುಕೊಂಡು ಓಡಾಡುತ್ತಿದ್ದರು. ಅವರು ಯಾರು ಗೊತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ನಾನಾ ಹೆಸರುಗಳು ಬಂದರೂ ಯಾರೊಬ್ಬರು ಸರಿಯಾದ ಉತ್ತರ ನೀಡಲಿಲ್ಲ. ಆಗ ಸ್ವತಃ ಜೈ ಜಗದೀಶ್ ಅವರೇ ಶಂಕರ್​ನಾಗ್​ ಹೆಸರು ಹೇಳಿದಾಗ ಎಲ್ಲರೂ ಒಮ್ಮೆ ಬೆಕ್ಕಸ ಬೆರಗಾದರು.

ಅವರ ಮಾರ್ಕೆಟ್​ ಯಾವಾಗ ಬಿದ್ದಿತ್ತು ಸರ್​ ಎಂದು ಎಲ್ಲರೂ ಅಚ್ಚರಿಯಿಂದ ಕೇಳಿದಾಗ, ಸುಮಾರು ಮೂರು ವರ್ಷ ಶಂಕರ್​ನಾಗ್​ ಅವರಿಗೆ ಮಾರ್ಕೆಟ್​ ಇರಲಿಲ್ಲ. ಆಗ ಮೆಟಡೋರ್​ ವ್ಯಾನ್​ನಲ್ಲಿ ನಗರದ ಕ್ವೀನ್ಸ್ ಪ್ರತಿಮೆ ಬಳಿ ಕ್ಯಾಂಟಿನ್​ ರನ್​ ಮಾಡುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಅವರೇ ಬಹುದೊಡ್ಡ ನಟನಾದರು ಎಂದು ತಿಳಿಸಿದರು. ಅವರ ಆದರ್ಶಗಳನ್ನು ಕೇಳಿದರೆ, ಇಂದಿಗೂ ರೋಮಾಂಚನವಾಗುತ್ತದೆ.

ಅಂದೇ ಮೆಟ್ರೋ ಪರಿಕಲ್ಪನೆಯನ್ನು ಮುಂದಿಟ್ಟಿದ್ದರಂತೆ, ಅವರ ಸ್ವಂತದ ಹಣದಲ್ಲಿ ವಿದೇಶಕ್ಕೆ ಹೋಗಿ ಮೆಟ್ರೋ ಬಗ್ಗೆ ತಿಳಿದುಕೊಂಡುಬಂದಿದ್ದರಂತೆ ಎಂದು ಸ್ಪರ್ಧಿಗಳು ಕೇಳಿದಾಗ ಜೈ ಜಗದೀಶ್​ ಹೌದು, ಮೆಟ್ರೋ ಜತೆಗೆ ನಂದಿ ಬೆಟ್ಟ ಕೆಳಗಿನವರೆಗೂ ರೋಪ್​ ವೇ ಮಾಡಲು ಯೋಜನೆ ಹಾಕಿಕೊಂಡಿದ್ದರು ಎಂಬ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದರು.ವಿಶೇಷ ಅಂದರೆ ಶಂಕರ್​ನಾಗ್​ ಅವರ ಕನಸಾಗಿದ್ದ ಮೆಟ್ರೊ ಇಂದು ಕ್ವೀನ್ಸ್​ ಪ್ರತಿಮೆಯ ಮಾರ್ಗದಲ್ಲೇ ಸಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು

    ಸಂಜೆ ಹೊತ್ತು ಕಸ ಗುಡಿಸಿ ಹೊರ ಹಾಕಬಾರದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲು ಹಳೆ ಕಾಲದ ಕೆಲವೊಂದು ಪರಂಪರೆಗಳನ್ನು ಪಾಲನೆ ಮಾಡುವುದು ಉತ್ತಮ. ಆ ಸಂಪ್ರದಾಯಗಳನ್ನು ನೀವು ಇಂದು ಪಾಲಿಸಿಕೊಂಡು ಬಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿದಾಡುತ್ತಿರುತ್ತದೆ.

  • ಸೌಂದರ್ಯ

    ಹಳದಿ ಕಟ್ಟಿದ ಹಲ್ಲಿಗೆ, ನಿಮ್ಮ ಮನೆಯಲ್ಲಿರುವ ಈ ವಸ್ತುಗಳನ್ನೇ ಬಳಸಿ, ಬಿಳಿಯಾಗಿ ಫಳ ಫಳ ಹೊಳೆಯುವಂತೆ ಮಾಡಿ…

    ಹಲ್ಲು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಕೇವಲ ತಿನ್ನುವುದಕ್ಕೆ ಮಾತ್ರವಲ್ಲ, ನಮ್ಮ ಮುಖದ ಸೌಂದರ್ಯದಲ್ಲಿ ಹಲ್ಲು ವಹಿಸುವ ಪಾತ್ರವನ್ನು ನಾವು ಕೇರ್ಲೆಸ್ ಮಾಡೋ ಅಂಗಿಲ್ಲ. ಯಾಕಂದ್ರೆ ಬಿಳಿ ಬಿಳಿಯಾಗಿ ಪಳ ಪಳ ಅಂತ ಹೊಳೆಯುವ ಹಲ್ಲು ನಮ್ಮ ಮುಖದ ಚಂದವನ್ನು ಜಾಸ್ತಿ ಮಾಡುತ್ತೆ.

  • ಮನರಂಜನೆ

    ಹಳ್ಳಿ ಹೈದ ಹನುಮಂತನಿಗೆ ಹೊಸ ವರ್ಷಕ್ಕೆ ಸಿಕ್ತು ಬಂಪರ್ ಆಫರ್..!

    ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ. ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ. ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ…

  • ಕಾಯಿಲೆ

    19 ನೇ ಶತಮಾನದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿತು

    1800 ರ ಉತ್ತರಾರ್ಧದಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಜಗತ್ತನ್ನು ಧ್ವಂಸಗೊಳಿಸಿದ ಮೂರನೇ ಪ್ಲೇಗ್ ಸಾಂಕ್ರಾಮಿಕವು ಇಂದಿನ COVID-19 ಸಾಂಕ್ರಾಮಿಕ ರೋಗಕ್ಕೆ ಹೋಲುತ್ತದೆ. ಇದು 1860 ರ ದಶಕದಲ್ಲಿ ಚೀನಾದಲ್ಲಿ ತನ್ನ ಕೊಳಕು ತಲೆಯನ್ನು ಬೆಳೆಸಿತು, 1894 ರಲ್ಲಿ ಹಾಂಗ್ ಕಾಂಗ್, ಆಗಸ್ಟ್ 1896 ರಲ್ಲಿ ಮುಂಬೈ, ಡಿಸೆಂಬರ್ 1897 ರಲ್ಲಿ ಹುಬ್ಬಳ್ಳಿ ಮತ್ತು ಆಗಸ್ಟ್ 1898 ರಲ್ಲಿ ಬೆಂಗಳೂರು ತಲುಪಿತು.

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ನಿಮ್ಮ ಭವಿಷ್ಯ ಮಂಗಳವೋ, ಅಮಂಗಳವೋ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(9 ಏಪ್ರಿಲ್, 2019) ನಿಮ್ಮ ಒರಟು ವರ್ತನೆ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ನಿಮಗೆ ತಿಳಿದ…

  • ಸುದ್ದಿ

    ರೈತರಿಗೆ ಮತ್ತೊಂದು ಬಂಪರ್ ಆಫರ್ ಕೊಟ್ಟ ಮೋದಿ ಸರ್ಕಾರ…!

    ಮುಂದಿನ ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೊಳಿಸಿದೆ. ರೈತರಿಗೆ ಕೃಷಿ ಕಾರ್ಯಗಳಿಗೆ ಯಂತ್ರಗಳನ್ನು ಬಾಡಿಗೆಗೆ ನೀಡಲು ಕೃಷಿ ಸಚಿವಾಲಯ ಸಿ.ಹೆಚ್.ಸಿ. ಫಾರ್ಮ್ ಮೆಷಿನರಿ ಆಪ್ ಪರಿಚಯಿಸಿದೆ. ಇದರ ಮೂಲಕ ರೈತರು ಕೃಷಿ ಉಪಕರಣ ಬಾಡಿಗೆ ಪಡೆಯಬಹುದಾಗಿದೆ. ಕೃಷಿ ಕೇಂದ್ರಗಳಿಂದ 50 ಕಿಲೋಮೀಟರ್ ದೂರದಲ್ಲಿನ ಪ್ರದೇಶಗಳಿಗೆ ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. 12 ಭಾಷೆಗಳಲ್ಲಿ ಆಪ್ ಮಾಹಿತಿ ನೀಡಲಿದೆ. ರೈತರು ತಮಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ…