ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ನೆಚ್ಚಿನ ಸ್ಟಾರ್ ನಟರು ಏನು ಓದಿದ್ದಾರೆ, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವು ಅಭಿಮಾನಿಗಳಿಗೆ ಇರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ನಟ ರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಈ ನಟರ ವಿದ್ಯಾಬ್ಯಾಸ ಹಾಗೂ ಅವರು ಓದು ನಿಲ್ಲಿಸಲು ಕಾರಣವೇನು ಅಂತ ಇಲ್ಲಿದೆ ನೋಡಿ….
ಡಾ.ರಾಜ್ ಕುಮಾರ್.. ರಾಜ್ ಕುಮಾರ್ ರವರು ಓದಿರುವುದು 3ನೇ ತರಗತಿ ಆದರೆ ಅವರ ಸಾಧನೆ ಅಪಾರ. ಎಂಟನೇ ವಯಸ್ಸಿಗೆ ರಾಜ್ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು.ಕೇವಲ 3ನೇ ತರಗತಿ ಓದಿ ಡಾಕ್ಟರೇಟ್ ಪಡೆದ ವಿದ್ವಾಂಸರು. ಅವರ ತಂದೆ ಮತ್ತು ತಾಯಿ ಇಬ್ಬರು ರಂಗಭೂಮಿ ಕಲಾವಿದರಾಗಿರುವ ಕಾರಣ ತಾವು ಕೂಡ ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ನಾಟಕದ ನಂತರ ಸಿನಿಮಾ ಪ್ರಯಾಣ ಪ್ರಾರಂಭ ಆಯಿತು.ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿದ ಅವರು ಡಾಕ್ಟರೇಟ್ ಪಡೆದರು.
ಸಾಹಸ ಸಿಂಹ ವಿಷ್ಣುವರ್ಧನ್ ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದರು. ನಂತರ ಬೆಂಗಳೂರಿಗೆ ಬಂದ ಮೇಲೆ ಪ್ರೌಢ ಶಿಕ್ಷಣ ಮುಗಿಸಿದರು. 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದರು. ‘ವಂಶವೃಕ್ಷ’ ಅವರ ಮೊದಲ ಸಿನಿಮಾ. ಆದಾದ ನಂತರ ‘ನಾಗರಹಾವು’ ಸಿನಿಮಾ ಬಂತು. ಆ ಚಿತ್ರದಿಂದ ವಿಷ್ಣು ಪ್ರಭಾವ ಶುರುವಾಯ್ತು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸುದೀಪ್ ರವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಿದ್ದಾರೆ. ನಟನ ತರಬೇತಿಗಾಗಿ ಮುಂಬೈಗೆ ಹೋದ ಸುದೀಪ್, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ದರ್ಶನ್ ಪಿಯುಸಿ ವರೆಗಿನ ಶಿಕ್ಷಣವನ್ನು ಮುಗಿಸಿದರು. 1995-96 ರಲ್ಲಿ ದರ್ಶನ್ ಪಾಲಿಟೆಕ್ನಿಕ್ ಕಾಲೇಜಿಗೆ ಅಡ್ಮಿಶನ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅಪ್ಪ ದೊಡ್ಡ ಕಲಾವಿದ ಆಗಿದ್ದ ಕಾರಣವೋ ಏನೋ, ನಟ ದರ್ಶನ್ ಗೆ ಸಿನಿಮಾ ನಟನೆಯ ಮೇಲೆ ಆಸೆ ಇತ್ತು. ದರ್ಶನ್ ಪಾಲಿಟೆಕ್ನಿಕ್ ಕಾಲೇಜಿಗೆ ಅಡ್ಮಿಶನ್ ಗಾಗಿ ಅರ್ಜಿ ಸಲ್ಲಿಸಿದ ನಂತರ ನೀನಾಸಂ ಗೆ ಸೇರಿ ರಂಗ ಶಿಕ್ಷಣಪಡೆದರು.
ರಮೇಶ್ ಅರವಿಂದ್ ನಟ, ನಿರ್ದೇಶಕ ರಮೇಶ್ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ.ಬೆಂಗಳೂರಿನ UVCE ಕಾಲೇಜ್ ನಲ್ಲಿ ರಮೇಶ್ ತಮ್ಮ ವಿದ್ಯಾಬ್ಯಾಸ ಪಡೆದರು. ಕಾಲೇಜು ದಿನದಲ್ಲಿ ಸಿನಿಮಾ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದರು. ನಂತರ ಟಿವಿ ಕಾರ್ಯಕ್ರಮಗಳ ನಿರೂಪಣೆ, ಸಿನಿಮಾ ನಟನೆ ಪ್ರಾರಂಭಆಯ್ತು. ಅಲ್ಲಿಂದ ಇಂಜಿನಿಯರ್ ಆಕ್ಟರ್, ಡೈರೆಕ್ಟರ್ ಆಗಿ ಬದಲಾದರು.
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟ ಶಿವರಾಜ್ ಕುಮಾರ್ ಹುಟ್ಟಿದ್ದು ಮದ್ರಾಸ್ ನಲ್ಲಿ. ಹೀಗಾಗಿ ಅಲ್ಲಿಯೇ ಅವರ ಓದು ಕೂಡ ಶುರುವಾಯ್ತು. ತಮಿಳಿನಾಡಿನ ನ್ಯೂ ಕಾಲೇಜ್ ನಲ್ಲಿ ಶಿಕ್ಷಣ ಪಡೆದರು. ಬ್ಯಾಚುಲರ್ ಆಫ್ ಸೈನ್ಸ್ ಮುಗಿಸಿದರು. ಕಮಲ್ ಹಾಸನ್ ಅಭಿಮಾನಿಯಾಗಿದ್ದ ಶಿವಣ್ಣ, ಕಾಲೇಜಿನಲ್ಲಿ ಹೆಚ್ಚು ಹೆಚ್ಚು ಸಿನಿಮಾ ನೋಡುತ್ತಿದ್ದರು. ಕಾಲೇಜು ಮುಗಿಯುತ್ತಿದ್ದ ಹಾಗೆ ಆಕಸ್ಮಿಕವಾಗಿಯೇ ಚಿತ್ರರಂಗಕ್ಕೆ ಬಂದರು.
ರಿಯಲ್ ಸ್ಟಾರ್ ಉಪೇಂದ್ರ ಬೆಂಗಳೂರಿನ ಎಪಿಎಸ್ ಕಾಲೇಜ್ ನಲ್ಲಿ ಉಪೇಂದ್ರ ಬಿ ಕಾಂ ಓದಿದರು. ಕಾಲೇಜಿನಲ್ಲಿ ಇದ್ದಾಗಲೇ ನಾಟಕ ಹಾಗೂ ಬರವಣಿಗೆ ಬಗ್ಗೆ ಹೆಚ್ಚು ಉಪ್ಪಿ ಆಸಕ್ತಿ ಇತ್ತು. ಕಾಲೇಜಿಗೆ ಹೊಗುವುದರ ಜೊತೆ ಜೊತೆಗೆ ಕೆಲ ಸಿನಿಮಾಗಳಿಗೆ ಸಂಭಾಷಣೆ ಬರೆದರು. ಅದೇ ವೇಳೆಗೆ ಕಾಶೀನಾಥ್ ಜೊತೆಗೆ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಹೇಳುವ ಹಾಗೆ ಪುನೀತ್ ರಾಜ್ ಕುಮಾರ್ ಗೆ ಓದಿನಲ್ಲಿ ಆಸಕ್ತಿ ಕಡಿಮೆ. ಪುನೀತ್ ಶಾಲೆಗೆ ಅಂತ ಹೋಗಿದ್ದು ಕೇವಲ ಒಂದೆರಡು ವರ್ಷ ಮಾತ್ರ. ಆರು ತಿಂಗಳ ಮಗು ಇದ್ದಗಲೇ ತೆರೆ ಮೇಲೆ ಕಾಣಿಸಿಕೊಂಡ ಅಪ್ಪು ಸ್ಕೂಲ್ ಗಿಂತ ಶೂಟಿಂಗ್ ಸೆಟ್ ನಲ್ಲಿಯೇ ಇರುತ್ತಿದ್ದರು. ನಂತರ ಮನೆಯಲ್ಲಿಯೇ ಟ್ಯೂಷನ್ ಮೂಲಕ ಓದಿ ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.
ಅದೃಷ್ಟ ಅನ್ನೋದು ಯಾರಿಗೆ, ಹೇಗೆ, ಎಲ್ಲಿ ಒಲಿಯುತ್ತೆ ಅಂತ ಹೇಳೋದು ಕಷ್ಟ. ಈ ಮಾತು ಸಿನಿ ರಂಗಕ್ಕೂ ಸರಿಯಾಗಿ ಹೊಂದುತ್ತದೆ. ಇಲ್ಲಿ ಯಶಸ್ಸು ಅನ್ನೋದು ಕೆಲವೊಬ್ಬರಿಗೆ ಮಾತ್ರ ಸಿಗುತ್ತದೆ. ಕಲರ್ಫುಲ್ ದುನಿಯಾಗೆ ಎಂಟ್ರಿಯಾಗಿ ಅದೆಷ್ಟೊ ವರ್ಷಗಳಾದ ಮೇಲೆ ಅದೃಷ್ಟ ಒಲಿದರೆ, ಇನ್ನು ಕೆಲವರಿಗೆ ರಾತ್ರೋ ರಾತ್ರಿ ಸ್ಟಾರ್ ಕಿರೀಟ ದಕ್ಕುತ್ತದೆ. ಹಾಗೇ ಬೇರೆ ಬೇರೆ ಭಾಷೆಗಳಲ್ಲಿ ಕಮಾಲ್ ಕೂಡ ಮಾಡ್ತಾರೆ.
ಇಷ್ಟು ದಿನ ಬಿಜೆಪಿ ಸಮ್ಮಿಶ್ರ ಸರ್ಕಾರ ಈಗ ಬೀಳುತ್ತದೆ ಆಗ ಬೀಳುತ್ತದೆ ಎಂದು ಹೇಳಿಕೊಂಡೆ ಬರುತ್ತಿದೆ ಆದರೆ ಅದು ಸಾಧ್ಯವಾಗಿಲ್ಲ. ಆಪರೇಷನ್ ಕಮಲ ಮಾಡಲು ಬಿಜೆಪಿ ಏನೆಲ್ಲ ಹರಸಾಹಸ ಮಾಡಿ ಕಡೆಗೆ ಮುಖಭಂಗ ಅನುಭವಿಸಿದೆ. ಈಗಲೂ ಸಹ ಕಾಂಗ್ರೆಸ್ನ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಗೆ ಹೋಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಅವರು ಮಾತ್ರ ಅಲ್ಲ ಅವರ ಜೊತೆ ಅವರ ಬೆಂಬಲಿಗರು ಮೈತ್ರಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅವರಿಗೆ ಸಚಿವ…
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.
ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಭ್ಯರ್ಥಿ ಘೋಷಣೆಯಾದ ಬಳಿಕ ಇಂದು ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತ್ ಕುಮಾರ್ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿ ಸೂರ್ಯಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾತುಕತೆಯ ಬಳಿಕ ತೇಜಸ್ವಿ ಸೂರ್ಯ ಅವರು…
ಈ ಹೊಸ 1,999 ರಲ್ಲಿನ Jio-Fi ಹಾಟ್ಸ್ಪಾಟ್ ಸಾಧನವನ್ನು ಖರೀದಿಸಿದ ನಂತರ ಗ್ರಾಹಕರನ್ನು ಮೂರು ಮೊದಲ ರೀಚಾರ್ಜ್ ಆಯ್ಕೆಗಳ ನಡುವೆ ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಆಯ್ಕೆಯನ್ನು ಜಿಯೋ ಎಂಟು ರೀಚಾರ್ಜ್ಗಳಿಗಾಗಿ (ಕಡಿಮೆ ಎಂಟು ತಿಂಗಳಲ್ಲಿ) ದಿನಕ್ಕೆ 1.5GBಗೆ 4G ಡೇಟಾವನ್ನು ಒದಗಿಸುತ್ತಿದೆ. ರಿಲಾಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಡಿವೈಸ್ ಬಿಡುಗಡೆ ಮಾಡಿದೆ. ಇದೊಂದು ಹಾಟ್ಸ್ಪಾಟ್ ಸಾಧನವಾಗಿದೆ. ಜಿಯೋದ ಈ JioFi JMR815 ಸಾಧನವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಫ್ಲಿಪ್‍ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ. ಜಿಯೋ JioFi…