ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗ್ತಿದೆ.ಜಾಗತಿಕ ಮಟ್ಟದಲ್ಲಿಕನ್ನಡ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಿರುವ ಅತ್ಯಂತ ಪ್ರಮುಖರಲ್ಲಿಒಬ್ಬರಾಗಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಪತ್ನಿ ಸುಧಾ ಮೂರ್ತಿ ಅವರ ಜೀವನವನ್ನಾಧರಿಸಿದ ಚಿತ್ರ ನಿರ್ಮಾಣ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದಾಗಿದ್ದಾರೆ.

ಬಾಲಿವುಡ್ನ ‘ಪಂಗಾ’ ಸಿನಿಮಾ ನಿರ್ದೇಶಕಿ ಅಶ್ವಿನಿ ಅಯ್ಯರ್ ಇಂತಾದೊಂದು ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ಈಗಾಗಲೇ ಕಥೆ ಸಿದ್ಧವಾಗ್ತಿದೆ. ಸುಧಾ ಮೂರ್ತಿ ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಅನ್ನಲಾಗ್ತಿದೆ. ಈ ಯಶಸ್ವಿ ಜೋಡಿಯ ಪ್ರೇಮ ಪುರಾಣ, ಗೆಲುವಿನ ಹಾದಿ, ಬದುಕಿನ ತಿರುವುಗಳನ್ನು ತೆರೆಯ ಮೇಲೆ ತರೋ ಪ್ರಯತ್ನ ನಡೀತಿದೆ.

ನಾರಾಯಣ ಮೂರ್ತಿ ದಂಪತಿಯ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದು, ಭಾರತದ ಮೊದಲ ಐಟಿ ದಂಪತಿಗಳ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಸ್ಕಿ್ರಪ್ಟ್ ವರ್ಕ್ಗಾಗಿ ರಿಸರ್ಚ್ ಕೆಲಸವನ್ನು ಪ್ರಾರಂಭಿಸಲಾಗಿದೆ. ಸ್ಟೋರಿ ಐಡಿಯಾ ಮತ್ತು ಕಾನ್ಸೆಪ್ಟ್ ಇನ್ನೊಬ್ಬ ನಿರ್ಮಾಪಕ ಸಂಜಯ್ ತ್ರಿಪತಿ ಅವರದಾಗಿದೆ. ದೇಶಕ್ಕೆ ದಂಪತಿಗಳು ನೀಡಿದ ಕೊಡುಗೆಯನ್ನು ಚಿತ್ರದಲ್ಲಿನೋಡಬಹುದಾಗಿದೆಯಂತೆ.

ಈಗ ಪಂಗ ಚಿತ್ರದಲ್ಲಿಬಿಝಿಯಾಗಿರುವ ಅಶ್ವಿನಿ ಚಿತ್ರ ರಿಲೀಸ್ ಆದ ನಂತರ ನಾರಾಯಣ ಮೂರ್ತಿ ಕುರಿತ ಸಿನಿಮಾ ಪ್ರಾರಂಭಿಸಲಿದ್ದಾರೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರ ಹಿಂದಿಯೂ ಸೇರಿದಂತೆ ಬಹುಭಾಷೆಯಲ್ಲಿನಿರ್ಮಾಣವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಲಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.
ಪ್ರತಿಯೊಂದು ದೇಶವೂ ಕೂಡ ತನ್ನ ದೇಶದ ಭೌಗೋಳಿಕ ಸಂಪತ್ತನ್ನು ಹುಡುಕುವ ಪ್ರಯತ್ನವನ್ನು ಯಾವಾಗಲೂ ಕೂಡ ಮಾಡುತ್ತಲೇ ಇರುತ್ತದೆ. ಅದೇ ರೀತಿಯಲ್ಲಿ ಭಾರತದಲ್ಲಿ ಕೂಡ ಅದೆಷ್ಟೋ ಭಾಗಗಲ್ಲಿ ಚಿನ್ನದ ಗಣಿಯನ್ನು ಹುಡುಕುವ ಅದೆಷ್ಟೋ ಪ್ರಯತ್ನಗಳು ನಡೆದಿದ್ದವು. ಆದರೆ ಯಾವುದು ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲ. ಆದರೆ ಸದ್ಯಕ್ಕೆ ಈಗ ಭಾರತದಲ್ಲಿ ಇರುವ ಒಟ್ಟಾರೆ ಚಿನ್ನದ ನಿಕ್ಷೇಪಕ್ಕಿಂತ ಐದು ಪಟ್ಟು ಹೆಚ್ಚು ಚಿನ್ನದ ಗಣಿ ಪತ್ತೆಯಾಗಿದೆ ಎನ್ನುವ ಸುದ್ದಿಯೊಂದು ಇದ್ದಕಿದ್ದಂತೆ ದೇಶದ ಎಲ್ಲ ಮಾಧ್ಯಮಗಳು ಈ ಸುದ್ದಿ…
ಸಾಮಾಜಿಕ ಜಾಲತಾಣ ಫೇಸ್ಬುಕ್’ನ್ನು ಉಪಯೋಗಿಸುವವರ ದಿನೇ ದಿನೇ ಹೆಚ್ಚಾಗುತ್ತಿದೆ.ಇದರ ಜೊತೆಗೆ ಅನೇಕ ಸುಳ್ಳು ಸುದ್ದಿಗಳು ಹರಡುವುದು ಸಾಮಾನ್ಯವಾಗಿದೆ. ಇದಲ್ಲಿ ಇತ್ತೀಚಿಗೆ ಒಂದು ಸುದ್ದಿ ಫೇಸ್ಬುಕ್’ನಲ್ಲಿ ವೈರಲ್ ಆಗುತ್ತಿದೆ.ಇದು ಫೇಸ್ಬುಕ್’ಗೆ ಸಂಬಂದಪಟ್ಟ ವಿಷಯವೇ ಆಗಿದೆ.ಈ ಸುದ್ದಿಯ ನಿಜವಾದ ಸತ್ಯ ತಿಳಿಯದ ಫೇಸ್ಬುಕ್’ಸ್ನೇಹಿತರು ಒಬ್ಬರಿಂದ ಒಬ್ಬರಿಗೆ ಆ ಸಂದೇಶವನ್ನು ಕಳುಹಿಸುತ್ತಿದ್ದಾರೆ. BFF ಮ್ಯಾಜಿಕ್ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್’ರ್ಬರ್ಗ್ ಮತ್ತು ಟೀಮ್ ಅವವರವರ ಫೇಸ್ಬುಕ್ ಖಾತೆಗಳನ್ನು ಸುರಕ್ಷಿತವಾಗಿಡಲು BFF ಕಂಡು ಹಿಡಿದಿದ್ದಾರೆ ಎಂಬ ಸಂದೇಶಗಳು ಫೇಸ್ಬುಕ್ ಜಗತ್ತಿನಲ್ಲಿ ಓಡಾಡುತ್ತಿದ್ದು BFF…
ಸ್ಟುಪಿಡ್ ಎಂದು ಹೇಳಿದಕ್ಕೆ ಮದುವೆ ಆಗಿ ಮೂರೇ ನಿಮಿಷಕ್ಕೆ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಘಟನೆ ಕುವೈಟ್ನಲ್ಲಿ ನಡೆದಿದೆ. ನಗರದ ನ್ಯಾಯಾಲಯದಲ್ಲಿ ವರ ಹಾಗೂ ವಧು ಮದುವೆ ಆಗಲು ತೆರಳಿದ್ದರು. ಮದುವೆ ಪತ್ರದ ಮೇಲೆ ಸಹಿ ಹಾಕಿ ಹೊರಗೆ ಬರುವಾಗ ವಧು ಕಾಲು ಜಾರಿ ಕೆಳಗೆ ಬಿದಿದ್ದಾಳೆ. ಮಹಿಳೆ ಕೆಳಗೆ ಬಿದ್ದಿದ್ದನ್ನು ನೋಡಿದ ವರ ಆಕೆಗೆ ಸಹಾಯ ಮಾಡುವ ಬದಲು ಸ್ಟುಪಿಡ್ ಎಂದು ಬೈದಿದ್ದಾನೆ. ವರ ಈ ರೀತಿ ಬೈದಿದ್ದರಿಂದ ವಧು ಮನನೊಂದಿದ್ದಳು. ಅಲ್ಲದೇ ಮದುವೆ…
ಮಕ್ಕಳ ಶೈಕ್ಷಣಿಕ ಅಡಿಪಾಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ನಾವು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ, ಆದರೆ ತಮಿಳುನಾಡಿನ ತಿರುವನೆಲ್ಲಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಶಿಲ್ಪಾ ಪ್ರಭಾಕರ್ ಸತೀಶ್ ವಿಭಿನ್ನವಾಗಿ ನಿಂತಿದ್ದಾರೆ, ತಮ್ಮ ಮಗಳನ್ನು ಪಲಾಯಕಮೊಟ್ಟಿಯಲ್ಲಿರುವ ಅಂಗನವಾಡಿಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂಗನವಾಡಿಗೆ ಸೇರಿಸಿದ ಮೇಲೆ ತಮ್ಮ ಮಗಳ ತಮಿಳು ಸುಧಾರಿಸಿದೆ, ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು, ಅವರ ಜೊತೆ ಸೇರಿ ಕಲಿಯಬೇಕು, ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ…
ದೇಶದಲ್ಲಿ ಜಾರಿಯಾದ ಹೊಸ ಟ್ರಾಫಿಕ್ ದಂಡದ ಕುರಿತಾಗಿ ಸಾಕಷ್ಟು ಚರ್ಚೆಗಳು, ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವ ಜವಾಬ್ದಾರಿ ಕೂಡಾ ಸರ್ಕಾರಕ್ಕೆ ಇದೆ. ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರರು, ವಾಹನಗಳ ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟಿ ಸೋನು ಗೌಡ ಸವಾಲು ಹಾಕಿದ್ದಾರೆ. ಜನಸಾಮಾನ್ಯರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಅಧಿಕ ದಂಡ ವಿಧಿಸಿ ಅವರ ಜೀವನವನ್ನು…