ಸುದ್ದಿ

ಹೊಸದಾಗಿ ಮದುವೆಯಾಗುವವರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ : ಉಚಿತವಾಗಿ ಸಿಗಲಿದೆ ಬಟ್ಟೆ-ಬಂಗಾರ….!

34

ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಲು ಮುಜರಾಯಿ ಇಲಾಖೆ ಕ್ರಮಕೈಗೊಂಡಿದೆ ಎನ್ನಲಾಗಿದೆ. ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬಡವ ಶ್ರೀಮಂತ ಎಂಬ ಭೇದ ಭಾವ ಬಿಟ್ಟು ಸಮಾತನೆ ಕಾಣಬಹದು.

ಬಡವರು, ಜನಸಾಮಾನ್ಯರಿಗೆಅನುಕೂಲವಾಗುವಂತೆ ಮುಜರಾಯಿ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಹೊಸ ಯೋಜನೆಯನ್ನುಜಾರಿಗೆ ತರಲು ಸರ್ಕಾರ ಮುಂದಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿವಿವಾಹವಾಗಲು ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲಾಗುವುದು.ಇದು ಬಡವರ ಅನುಕೂಲಕ್ಕಾಗಿ ಮಾಡಿದ್ದಾರೆ ಎನ್ನಬಹುದು.

ರಾಜ್ಯದಲ್ಲಿರುವ  100 ಎ ದರ್ಜೆಯ ಮುಜರಾಯಿ ದೇವಾಲಯಗಳಲ್ಲಿ ವರ್ಷಕ್ಕೆ ಒಮ್ಮೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಿದ್ದು, 8 ಗ್ರಾಂ ಚಿನ್ನದಮಾಂಗಲ್ಯ, ವಧು -ವರರಿಗೆ ಬಟ್ಟೆ ನೀಡುವ ಜೊತೆಗೆ ವಿವಾಹ ನೋಂದಣಿ ಮಾಡಿಸಿ ಕೊಡಲಾಗುವುದು.ರಾಜ್ಯದಪ್ರಮುಖ ದೇವಾಲಯಗಳಾಗಿರುವ ಮಲೆಮಹದೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ ದೇವಾಲಯ,ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸುವಚಿಂತಿದೆ.

ದೇವಾಲಯದಲ್ಲಿ ಸಂಗ್ರಹವಾಗುವ ಆದಾಯ ಮತ್ತು ಸರ್ಕಾರದ ಅನುದಾನದಿಂದ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುವುದು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಶೀಘ್ರವೇ ಯೋಜನೆ ಜಾರಿಗೆ ಬರಲಿ ಎಂದು ಹೇಳಲಾಗಿದೆ.3

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ