ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ತಮ್ಮ ವರಸೆ ಬದಲಾಯಿಸಿದ್ದಾರೆ. ಎಲ್ಲ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಕಳೆದೆರಡು ದಿನಗಳಲ್ಲಿ ಐದು ಬಾರಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಅಧಿವೇಶನದಲ್ಲಿ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್ ಹಾಗೂ ಶಾಸಕರ ಸಲಹೆ ಪಡೆದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಲು ಸಿದ್ದರಾಮಯ್ಯನವರು ನಡೆಸಿದ ಪ್ರಯತ್ನದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೈಕಮಾಂಡ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಸಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ.
ಇವರ ಆಪ್ತರು ಹಾಗೂ ಹಿರಿಯ ಮುಖಂಡರಾದ ರಮೇಶ್‍ಕುಮಾರ್ ಕೂಡ ಸದಾ ಎಚ್ಚರಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಚರ್ಚೆಗೆ ಮುಂದಾಗುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿಯನ್ನು ಯಾವ ರೀತಿ ಕಟ್ಟಿಹಾಕಬೇಕೆಂಬ ಸಲಹೆಗಳನ್ನು ಪಡೆದು ಹೆಜ್ಜೆ ಇಡುತ್ತಿದ್ದಾರೆ.
ಮುಂಬರುವ ಉಪಚುನಾವಣೆಯ ಹೊಣೆ ಕೂಡ ಇವರ ಹೆಗಲ ಮೇಲಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಸ್ಥಾನಗಳನ್ನು ಪಡೆಯುವುದು ಇವರ ಉದ್ದೇಶವಾಗಿದೆ. ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕರು ಇವರ ವಿರುದ್ಧ ಕತ್ತಿ ಮಸೆದಿದ್ದರು. ಅಲ್ಲದೆ ಹೈಕಮಾಂಡ್‍ಗೆ ದೂರು ಕೂಡ ನೀಡಿದ್ದರು. ಹಾಗಾಗಿ ಅವೆಲ್ಲವನ್ನೂ ಸಿದ್ದು ಮೆಟ್ಟಿ ನಿಲ್ಲಬೇಕಾದ ಹಿನ್ನೆಲೆಯಲ್ಲಿ ಈಗ ತಮ್ಮ ವರಸೆ ಬದಲಿಸಿ ಎಲ್ಲರೊಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಟೀ ಕುಡಿಯುತ್ತೀರಾ…? ಹಾಗಿದ್ದರೆ ನಿಮ್ಮ ಬುದ್ಧಿಮತ್ತೆ ಭಾರಿ ಚುರುಕಾಗಿರುತ್ತೆ. ನಾವು ಇದನ್ನು ಹೇಳುತ್ತಿಲ್ಲ. ಅಧ್ಯಯನ ಒಂದು ಹೇಳುತ್ತಿದೆ. ಚಹಾ ಕುಡಿಯುವವರು ಮತ್ತು ಕುಡಿಯದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಚಹಾ ಕುಡಿಯುವವರ ಮೆದುಳಿನ ಬೆಳವಣಿಗೆ ಚೆನ್ನಾಗಿರುವುದಲ್ಲದೆ, ಅವರ ಬುದ್ಧಿ ಮತ್ತೆ ಸಹ ಚುರುಕಾಗಿರುತ್ತದೆ ಎನ್ನುವ ಅಂಶ ತಿಳಿದು ಬಂದಿದೆ. ‘ನಮ್ಮ ಸಂಶೋಧನೆಯಲ್ಲಿ ತಿಳಿದು ಬಂದ ಮೊದಲ ಸಕಾರಾತ್ಮಕ ಅಂಶವೆಂದರೆ ನಿತ್ಯವೂ ಚಹಾ ಸೇವಿಸುವವರ ಮೆದುಳು ಚುರುಕಾಗಿರುವುದಲ್ಲದೆ, ವಯಸ್ಸಾದ ಬಳಿಕ ಕುಂಠಿತವಾಗುವ ಸಾಮರ್ಥ್ಯವನ್ನು ರಕ್ಷಣೆ ಮಾಡುವಲ್ಲಿ ಸಹಕರಿಸುತ್ತದೆ’ ಎಂದು ಸಿಂಗಾಪುರದ…
ಹುರುಳಿ ಟೀ ಮಾಡುವ ವಿಧಾನ! ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನಿ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ. ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮದುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ…
ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.
ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯ ಅಂಗಸಂಸ್ಥೆಯಾಗಿರುವ ‘ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್’ ರಾಜ್ಯದ ದೇವಸ್ಥಾನಗಳಲ್ಲಿ ಹೊಸ ವರ್ಷ ಆಚರಿಸಿದಂತೆ ಆದೇಶ ಮಾಡಿದೆ.
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.
ಬೈಕಿನಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದರೆ ಟ್ರಾಫಿಕ್ ಪೊಲೀಸರು ದಂಡ ಹಾಕಿದರೆ ಸರಿ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ ದಂಡ ಬೀಳುತ್ತೆ…..ಅದು ಸಹ ಸರಿ. ಆದರೆ ತನ್ನದೇ ಹೊಲದಲ್ಲಿ ನಿಲ್ಲಿಸಿದ್ದ ಎತ್ತಿನ ಬಂಡಿಗೆ ದಂಡ ಹಾಕುವುದೆಂದರೆ…? ಅದೂ ಒಂದು ಸಾವಿರ ರೂಪಾಯಿ…! ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಡೆಡ್ರಾಡೂನ್ ವ್ಯಾಪ್ತಿಯ ಶಹಾಪುರ ಹೊರವಲಯದಲ್ಲಿರುವ ಚಾರ್ಬಾ ಗ್ರಾಮದ ಹಸನ್ ಎಂಬಾತನಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಸಬ್ ಇನ್ಸ್ ಪೆಕ್ಟರ್ ಪಂಕಜ್ ಕುಮಾರ್ ಮತ್ತವರ ತಂಡ ನೂತನ ಸಾರಿಗೆ…