ಸುದ್ದಿ

ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

18

‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ!

ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ ಬೇರೆ ಆವೃತ್ತಿಗಳ ಶೂಟಿಂಗ್‌ನಲ್ಲಿ ಬಿಜಿ ಆಗಿರುತ್ತೇವೆ. ಅವರಿಲ್ಲಿ ಬರಲು ಸಾಧ್ಯವಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಆದರೆ, ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದೇನೆಂದರೆ, ಕನ್ನಡದ ಬಿಗ್‌ಬಾಸ್‌ಗೆ ಸುದೀಪ್ ನಿರೂಪಕರಾದರೆ, ಹಿಂದಿ ಬಿಗ್‌ಬಾಸ್‌ಗೆ ಸಲ್ಮಾನ್‌ ನಿರೂಪಕರು. ಸದ್ಯ ಅವರ ಸಾರಥ್ಯದಲ್ಲೀಗ ಬಿಗ್‌ಬಾಸ್‌ ಸೀಸನ್ 13 ಆರಂಭಗೊಂಡಿದೆ. ಇಬ್ಬರಿಗೂ ಬಿಗ್‌ಬಾಸ್‌ ವೇದಿಕೆ ಹೊಸದೇನಲ್ಲ.

ಜತೆಗೆ ‘ದಬಾಂಗ್ 3’ ಚಿತ್ರದ ಮೂಲಕ ಸಲ್ಮಾನ್‌ ಖಾನ್‌ ಚೊಚ್ಚಲ ಬಾರಿಗೆ ಕನ್ನಡಕ್ಕೂ ಕಾಲಿಡಲಿದ್ದಾರೆ. ಹೌದು, ಆ ಚಿತ್ರ ಕನ್ನಡಕ್ಕೆ ಡಬ್ ಆಗಿ ಡಿ.20ಕ್ಕೆ ತೆರೆಕಾಣಲಿದೆ. ಅದರಲ್ಲಿ ಸಲ್ಮಾನ್‌ ಜತೆ ಸುದೀಪ್ ಕೂಡ ನಟಿಸಿದ್ದಾರೆ. ಒಂದುವೇಳೆ, ಸಲ್ಮಾನ್‌ ಕನ್ನಡ ಬಿಗ್‌ಬಾಸ್‌ಗೆ ಬಂದರೆ ಸಿನಿಮಾಕ್ಕೆ ಸಾಕಷ್ಟು ಲಾಭಗಳಿವೆ ಎಂಬುದು ಕನ್ನಡದ ಅಭಿಮಾನಿಗಳ ಲೆಕ್ಕಾಚಾರ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದಯಮಾಡಿ ಬಿಟ್ಟುಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೇಳಿಕೊಂಡ ನಟ ಪ್ರಕಾಶ್ ರೈ ಪತ್ನಿ..!

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ, ಖಳನಟ ಪ್ರಕಾಶ್ ರೈ ಅವರ ಪತ್ನಿ ದಯಮಾಡಿ ಬಿಟ್ಟುಬಿಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ-ನಟಿಯರನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಕಾಶ್ ರೈ ಪತ್ನಿ ಪೋನಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯೊಂದಿಗೆ ಮಾಡಿದ ರಾಜಕಿಯೇತ್ತರ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೋನಿ ಪ್ರಧಾನಿಗೆ ಟ್ವೀಟ್…

  • ಸುದ್ದಿ

    ಕೀನ್ಯಾ ನಿಂದ 200 ರೂ ಸಾಲ ತೀರಿಸಲು 30 ವರ್ಷಗಳ ಬಳಿಕ ಭಾರತಕ್ಕೆ ಬಂದ ಭೂಪ…!

    ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ…

  • ಸುದ್ದಿ

    ಆನ್‍ಲೈನ್ ಫುಡ್ ಪ್ರಿಯರೆ ದಯವಿಟ್ಟು ಇದನ್ನೊಮ್ಮೆ ಓದಿ, ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,.!

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ…

  • ಸಿನಿಮಾ

    ಕೆಜಿಎಫ್ ಸಿನಿಮಾ ಈಗ ಎರಡು ಭಾಗಗಳಾಗಿ ತೆರೆಮೇಲೆ ಕಾಣಲಿದೆ …! ತಿಳಿಯಲು ಇದನ್ನು ಓದಿ….

    ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಕೆಜಿಎಫ್ ಸಿನಿಮಾಇತ್ತೀಚಿನ ಸುದ್ದಿ ಆಗಿದೆ.ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.

  • ವೀಡಿಯೊ ಗ್ಯಾಲರಿ

    ಕೇವಲ 3 ನಿಮಿಷದ ಈ ವಿಡಿಯೋ ಆಸ್ಕರ್ ಗೆದ್ದಿದೆ.!ನಾವು ಮಾಡುವ ಒಂದು ಚಿಕ್ಕ ಸಹಾಯ ನಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.!ನೋಡಿ ಹೆಚ್ಚೆಚ್ಚು ಶೇರ್ ಮಾಡಿ…

    ಕೇವಲ ಮೂರೂ ನಿಮಿಷದ ಈ ಅನಿಮೇಟೆಡ್ ವಿಡಿಯೋ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ನಾವು ಮಾಡುವ ಒಂದು ಚಿಕ್ಕ ಸಹಾಯ ನಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಪ್ಯಾಶನ್’ಸ್ ಕೆಯ್ರ & ಕಾನ್ಸ್ಟಂಟೈನ್ ಅನ್ನುವವರು ಈ ಅದ್ಭುತವಾದ ವಿಡಿಯೋ ನಿರ್ದೇಶನ ಮಾಡಿದ್ದಾರೆ. ತಪ್ಪದೆ ಕೊನೆಯವರೆಗೂ ನೋಡಿ… ಒಂದು ಒಳ್ಳೆ ಮೆಸೇಜ್ ಹೊಂದಿರೋ ಈ ವಿಡಿಯೋವನ್ನು ನೋಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…

  • ಸುದ್ದಿ

    ಅಳಿಯ ಚಿರು ಸರ್ಜಾ ಕುರಿತು ಅರ್ಜುನ್ ಸರ್ಜಾ ಅವರ ನೋವಿನ ಮಾತು.

    ನಟ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ಇಡೀ ಚಿತ್ರರಂಗವೇ ಕಂಬನಿಗರೆದಿದೆ. ಚಿಕ್ಕ ವಯಸ್ಸಿನಲ್ಲೇ ಅವರು ನಿಧನರಾಗಿದ್ದು ನಿಜಕ್ಕೂ ದುರದೃಷ್ಟಕರ. ಸರ್ಜಾ ಕುಟುಂಬದ ಮುದ್ದಿನ ಮಗನಾಗಿದ್ದ ಚಿರು ಅವರನ್ನು ಕಂಡರೆ ಅವರ ಮಾವ, ನಟ ಅರ್ಜುನ್ ಸರ್ಜಾ ಅವರಿಗೆ ಅಪಾರ ಪ್ರೀತಿ. ಇದೀಗ ತಮ್ಮ ಪ್ರೀತಿಯ ಅಳಿಯನ ಕುರಿತು ನೋವಿನ ಮಾತೊಂದನ್ನು ಹೇಳಿಕೊಂಡಿದ್ದಾರೆ ಅರ್ಜುನ್. ಜೂನ್‌ 7ರ ಭಾನುವಾರ ಮಧ್ಯಾಹ್ನ ಚಿರು ನಿಧನರಾದಾಗ ಅರ್ಜುನ್‌ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು, ಕುಟುಂಬದೊಂದಿಗೆ ಹೊರಟು ಬಂದಿದ್ದರು. ತಮ್ಮ ಕಣ್ಣ ಮುಂದೆ ಬೆಳೆದಿದ್ದ…