ಸುದ್ದಿ

ರೈಲ್ವೇ ಆಸ್ಪತ್ರೆಯಲ್ಲಿ ಕೇವಲ ಒಂದು ರೂಪಾಯಿಗೆ ಹೆರಿಗೆ ಮಾಡಿದ ವೈದ್ಯರು..ನಿಜಕ್ಕೂ ಅಚ್ಚರಿಯೇ ಹೌದು….!

29

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಿಗ್ಗೆ ಮುಂಬೈನಲ್ಲಿ ನಡೆದಿದೆ. ಮುಂಬೈನ 1 ರೂಪಾಯಿ ಕ್ಲಿನಿಕ್ ಮಹಿಳೆಯ ನೆರವಿಗೆ ಬಂದಿದೆ. ಕರ್ಜನತ್ ನಿಂದ ಪರೇಲ್ ಗೆ ಹೊರಟಿದ್ದ ಸುಭಂತಿ ಪಾತ್ರಾ ಅವರಿಗೆ ಥಾಣೆಯ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಒಂದು ರೂಪಾಯಿ ಚಿಕಿತ್ಸಾಲಯದ ಕಾರ್ಯನಿರ್ವಹಣಾಧಿಕಾರಿ  ಡಾ ರಾಹುಲ್ ಗುಳೆ ತಿಳಿಸಿದ್ದಾರೆ.

ಸುಮಾರು 35 ಕಿ.ಮೀ. ದೂರದ ಊರಿಗೆ ಪ್ರಯಾಣಿಸುವಷ್ಟರಲ್ಲಿ ಸುಭಂತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ರೈಲ್ವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ರೈಲ್ವೆ ಅಧಿಕಾರಿಗಳು ಕೂಡಲೇ ಪ್ಲಾಟ್‌ಫಾರಂನಲ್ಲಿರುವ  ಚಿಕಿತ್ಸಾಲಯಕ್ಕೆ ಕರೆತಂದರು.  ಅರ್ಧ ಗಂಟೆಯಲ್ಲಿ ಸುಸೂತ್ರವಾಗಿ ಹೆರಿಗೆಯಾಗಿ, ತಾಯಿ ಹಾಗೂ ಗಂಡು ಮಗು ಆರೋಗ್ಯವಾಗಿದ್ದಾರೆ.ಹೆಚ್ಚುವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಥಾಣೆ ರೈಲ್ವೇ ನಿಲ್ದಾಣದಲ್ಲಿರುವ 1 ರೂ. ಕ್ಲಿನಿಕ್ ಅನ್ನು ಖಾಸಗಿಯವರು ನಡೆಸುತ್ತಿದ್ದಾರೆ. ಈ ಕ್ಲಿನಿಕ್‍ನಲ್ಲಿ ಇದುವರೆಗೂ 10 ಮಂದಿಗೆ ಹೆರಿಗೆ ಮಾಡಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿರುವ ಒಂದು ರೂಪಾಯಿ ಆಸ್ಪತ್ರೆಗೆ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸೆಗಾಗಿ ಈ ಒಂದು ರೂಪಾಯಿ ಚಿಕಿತ್ಸಾಲಯವನ್ನು ತೆರೆಯಲಾಯಿತು.  ಇದರ ಮೂಲ ಅಗತ್ಯ ಸೇವೆ ಒದಗಿಸಲು ನಮಗೆ ಅವಕಾಶ ನೀಡಿದ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದ. ಈ ಹೆರಿಗೆಯ ಮೂಲಕ ಒಂದು ರೂಪಾಯಿ ಚಿಕಿತ್ಸಾಲಯದ ಮಹತ್ವ ಹಾಗೂ ರೈಲು ನಿಲ್ದಾಣದಲ್ಲಿ ಇಂತಹ ಚಿಕಿತ್ಸಾಲಯದ ಅಗತ್ಯವಿದೆ ಎಂಬುದು ಸಾಬೀತಾಗಿದೆ ಎಂದು ಡಾ ಗುಳೆ ಹೇಳಿದ್ದಾರೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health

    ಕಿತ್ತಳೆ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಕಿತ್ತಳೆ ಒಂದು ರೀತಿಯ ಕಡಿಮೆ ಕ್ಯಾಲೋರಿ, ಹೆಚ್ಚು ಪೌಷ್ಟಿಕ ಸಿಟ್ರಸ್ ಹಣ್ಣು. ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರದ ಭಾಗವಾಗಿ, ಕಿತ್ತಳೆ ಹಣ್ಣುಗಳು ಬಲವಾದ, ಸ್ಪಷ್ಟವಾದ ಚರ್ಮಕ್ಕೆ ಕೊಡುಗೆ ನೀಡುತ್ತವೆ ಮತ್ತು ವ್ಯಕ್ತಿಯ ಅನೇಕ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳು ಅವುಗಳ ನೈಸರ್ಗಿಕ ಮಾಧುರ್ಯ, ಲಭ್ಯವಿರುವ ಹಲವು ವಿಧಗಳು ಮತ್ತು ಬಳಕೆಯ ವೈವಿಧ್ಯತೆಯಿಂದಾಗಿ ಜನಪ್ರಿಯವಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅವುಗಳನ್ನು ರಸ ಮತ್ತು ಮಾರ್ಮಲೇಡ್‌ಗಳಲ್ಲಿ ಸೇವಿಸಬಹುದು, ಅವುಗಳನ್ನು ಸಂಪೂರ್ಣವಾಗಿ ತಿನ್ನಬಹುದು, ಅಥವಾ ಕೇಕ್…

  • ಸುದ್ದಿ

    ಶಾಸಕರ ರಾಜಿನಾಮೆ : ಸಂವಿಧಾನ ತಿದ್ದುಪಡಿ ಮಾಡಿ ಎಂದು ರವಿಗೌಡ ಪ್ರಧಾನ ಮಂತ್ರಿಗೆ ಬರೆದ ಪತ್ರ …ಏನೆಂದು ತಿಳಿಯಿರಿ ?

    ಸಿಂಧನೂರು : ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಇಚ್ಛೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಕಾನೂನು ತಿದ್ದುಪಡಿ ಮಾಡಬೇಕು ಎಂದು ರೈತ ಯುವ ಮುಖಂಡ ರವಿಗೌಡ ಮಲ್ಲದಗುಡ್ಡ ಆಗ್ರಹಿಸಿದ್ದಾರೆ ರಾಜ್ಯದಲ್ಲೂ ಸಂವಿಧಾನಾತ್ಮಕವಾಗಿ ವಜಾಗೊಳಿಸುವ ಕೆಲಸ ಆಗಬೇಕು. ಕ್ಷೇತ್ರದ ಅಭಿವೃದ್ದಿ ಮರೆತು ಸೀಟಿಗಾಗಿ ಪ್ರತಿದಿನ ಕಚ್ಚಾಡುತ್ತಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾದ  ಕ್ಷೇತ್ರದಲ್ಲಿ ಅವರ ವಿರುದ್ದ ಎರಡನೇ ಸ್ತಾನದಲ್ಲಿ ಸೋತಿರುವ ಅಭ್ಯರ್ಥಿಯನ್ನು ಆ ಕ್ಷೇತ್ರದ ಮುಂದಿನ ಶಾಸಕರು ಎಂದು ಕಾನೂನು ಜಾರಿಗೆ ಬರಬೇಕು. ಆಗ ಮಾತ್ರ ಪಕ್ಷೆ ನಿಷ್ಠೆ ಹಾಗು ಕ್ಷೇತ್ರದ…

  • ಸಿನಿಮಾ

    ದಂಡುಪಾಳ್ಯ-2 ಟ್ರೈಲರ್ ನೋಡಿದ್ರೆ, ಶಾಕ್ ಆಗ್ತೀರಾ !!!

    ದಂಡುಪಾಳ್ಯ ತಂಡ ಮತ್ತೊಮ್ಮೆ ಬೆಳ್ಳಿತೆರೆಗೆ ಅಪ್ಪಳಿಸಲಿಕ್ಕೆ ಸಿದ್ಧವಾಗಿದೆ. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್‍ಗಳಿಂಗ ಸಿನಿರಸಿಕರನ್ನು ಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿರಿಸಲಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ದಿನನಿತ್ಯ ಈ ಒಂದು ಹಣ್ಣು ತಿಂದರೆ ಸಾಕು. ನಿಮ್ಮ ಅತ್ತಿರ ಯಾವ ಕಾಯಿಲೆಯು ಸುಳಿವುದಿಲ್ಲ. ಈ ಅರೋಗ್ಯ ಮಾಹಿತಿ ನೋಡಿ.

    ಸೀತಾಫಲ ಭಾರತೀಯರಿಗೆ ಚಿರಪರಿಚಿತ, ಆದರೆ ಎಷ್ಟೋ ಜನರಿಗೆ ಇದರ ನಿಜವಾದ ಪೌಷ್ಟಿಕತೆಯ ಬಗ್ಗೆ ತಿಳಿದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೀತಾಫಲ ನಮ್ಮ ದೇಹಕ್ಕೆ ಬರುವ ಎಲ್ಲ ರೋಗಗಳಿಗೂ ಫುಲ್ ಸ್ಟಾಪ್ ಇಡುವ ಅದ್ಬುತ ಶಕ್ತಿ ಹೊಂದಿದೆ. ದಿನಾಲೂ ಒಂದು ಸೀತಾಫಲದ ಸೇವನೆ ದೇಹಕ್ಕೆ ಬಲಶಾಲಿ ಮದ್ದು. ಕಸ್ಟರ್ಡ್ ಆಪಲ್, ಶುಗರ್ ಆಪಲ್, ಚೆರಿಮೋಯಾ ಮೊದಲಾದ ಇತರ ಹೆಸರುಗಳಿಂದಲೂ ಕರೆಯಲ್ಪಡುವ ಈ ಸೀತಾಫಲವನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲವಾಗಿದೆ. ತೂಕ ಹೆಚ್ಚಿಸಬೇಕಾದವರಿಗೆ…

  • ಆರೋಗ್ಯ

    ಸೌತೆಕಾಯಿಯ ಜೂಸ್ ಕುಡಿಯೋದ್ರಿಂದ, ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗಗಳು ಇವೆ ಗೊತ್ತಾ..?

    ದಿನನಿತ್ಯ ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಒ೦ದು ಲೋಟದಷ್ಟು ತಾಜಾ ಸೌತೆಕಾಯಿಯ ರಸವನ್ನು ಕುಡಿಯಲು ಪ್ರಯತ್ನಿಸಿದರೆ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹಾಗು ನಿಮ್ಮ ಶರೀರದ ತೂಕನು ಕಡಿಮೆ ಮಾಡಿಕೊಳ್ಳಬಹುದು.