ಸುದ್ದಿ

ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್‌ಪಿಜಿ ಡೀಲರ್ಬಳಿಯೇ ಹೋಗುತ್ತಿದ್ದಿರಾ ;ಇನ್ಮುಂದೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು,ಇಲ್ಲಿದೆ ನೋಡಿ ಮಾಹಿತಿ,.!!

82

ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್‌ಪಿಜಿ ಡೀಲರ್ಬಳಿಯೇ ಹೋಗಬೇಕೆಂದೇನಿಲ್ಲ. ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ಜತೆಗೆ ಈ ಪ್ರಕ್ರಿಯೆಯನ್ನುಪೂರ್ತಿಯಾಗಿ ಡಿಜಿಟಲೀಕರಣ ಮಾಡಿರುವುದರಿಂದ, ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆಡೀಲರ್ ಬಳಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸುವುದು ಕಿರಿಕಿರಿ ಪ್ರಕ್ರಿಯೆ ಎನ್ನಿಸಿದರೆ, ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು.

ದೇಶದ ಪ್ರಮುಖ 3 ಎಲ್‌ಪಿಜಿ ಪೂರೈಕೆದಾರ ಕಂಪನಿಗಳ ವೆಬ್‌ಸೈಟ್ ಮೂಲಕ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಜತೆಗೆ ಪ್ರತಿ ಕಂಪನಿಗಳು ಕೂಡ ಪ್ರತ್ಯೇಕ ಆ್ಯಪ್‌ ಹೊಂದಿದ್ದು, ಅದರ ಮೂಲಕವೂ ಹೊಸ ಸಂಪರ್ಕಕ್ಕೆ ಅರ್ಜಿ, ರಿಫಿಲ್ ಬುಕಿಂಗ್, ಇತರ ಸಂಬಂಧಿತ ಸೇವೆಗಳನ್ನು ಬಳಸಬಹುದು.

ಹೊಸ ಎಲ್‌ಪಿಜಿ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಈ ವಿಧಾನ ಅನುಸರಿಸಿ;
.ನಿಮ್ಮ ಆಯ್ಕೆಯ ಎಲ್‌ಪಿಜಿಪೂರೈಕೆದಾರರನ್ನು ಆರಿಸಿಕೊಳ್ಳಿ
ಎಚ್‌ಪಿ ಗ್ಯಾಸ್:https://myhpgas.in/myHPGas/NewConsumerRegistration.aspx
ಭಾರತ್ ಗ್ಯಾಸ್:https://my.ebharatgas.com/LPGServices/ApplyNewConnection
ಇಂಡೇನ್ ಗ್ಯಾಸ್:https://cx.indianoil.in/webcenter/portal/Customer

ಮೇಲಿನ ಲಿಂಕ್ ತೆರೆದ ಬಳಿಕ, ನಿಮ್ಮ ಸಮೀಪದ ಎಲ್‌ಪಿಜಿ ಡೀಲರ್ ಅನ್ನು ಹುಡುಕಿ, ಅಲ್ಲಿ ಸರ್ಚ್ ಆಯ್ಕೆಯಿದೆ. ನಿಮಗೆ ಈಗಾಗಲೇ ಡೀಲರ್ ಗೊತ್ತಿದ್ದರೆ, ಅಲ್ಲಿ ನಮೂದಿಸಬಹುದು. ಬಳಿಕ, ನಿಮ್ಮ ಸಮೀಪದ ಡೀಲರ್ ಆಯ್ಕೆ ಮಾಡಿ. ಎಲ್‌ಪಿಜಿ ಸಿಲಿಂಡರ್ ಡೆಲಿವರಿಗೆ ಏರಿಯಾ ಮಿತಿ ಇರುವುದರಿಂದ, ಸಮೀಪದ ಡೀಲರ್ ಆಯ್ಕೆ ಸೂಕ್ತ. ಬಳಿಕ, ಅಲ್ಲಿರುವ ಫಾರ್ಮ್‌ನಲ್ಲಿ ನಿಮ್ಮ ವಿವರ, ವಿಳಾಸ, ಸಬ್ಸಿಡಿ ನಗದು ವರ್ಗಾವಣೆ-ಬ್ಯಾಂಕ್ ವಿವರ, ಎಷ್ಟು ಸಿಲಿಂಡರ್ ಮತ್ತು ಯಾವ ವಿಧ, ಸಿಲಿಂಡರ್ ಸಾಮರ್ಥ್ಯ ಎನ್ನುವುದನ್ನು ಎಂಟರ್ ಮಾಡಿ. ಬಳಿಕ ನಿಮ್ಮ ಐಡೆಂಟಿಟಿ ಹಾಗೂ ವಿಳಾಸದ ದೃಢೀಕರಣವನ್ನು ಆಯ್ಕೆ ಮಾಡಿ.

ಪಾಸ್‌ಪೋರ್ಟ್ ಸೈಜ್‌ನ ಫೋಟೋ ಮತ್ತು ವಿಳಾಸದ ದೃಢೀಕರಣಕ್ಕೆ ಸಂಬಂಧಿಸಿದ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ. ಬಳಿಕ ಅಲ್ಲಿ ನೀಡಿರುವ ನಿಬಂಧನೆಗಳನ್ನು ಓದಿ, ಸಬ್‌ಮಿಟ್ ಕೊಡಿ. ಅದಾದ ನಂತರ, ನಿಮ್ಮನ್ನು ಪಾವತಿ ಪೇಜ್‌ಗೆ ಕರೆದೊಯ್ಯುತ್ತದೆ. ಅಲ್ಲಿ, ನೆಟ್‌ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಅಥವಾ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸಬಹುದು. ಅದಾದ ಬಳಿಕ, ನಿಮಗೆ ರೆಫರೆನ್ಸ್ ನಂಬರ್ ಒಂದು ದೊರೆಯುತ್ತದೆ. ನಿಮ್ಮ ಮೊಬೈಲ್ ಮತ್ತು ಇ ಮೇಲ್‌ಗೆ ಅರ್ಜಿ ಸಲ್ಲಿಸಿದ ದೃಢೀಕರಣ ಬರುತ್ತದೆ. ರೆಫರೆನ್ಸ್ ನಂಬರ್ ಉಪಯೋಗಿಸಿ, ನಿಮ್ಮ ಬುಕಿಂಗ್ ಸ್ಥಿತಿಗತಿ, ಸಿಲಿಂಡರ್ ಡೆಲಿವರಿ ದಿನಾಂಕವನ್ನು ತಿಳಿದುಕೊಳ್ಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಕರೋನಾ ವೈರಸ್ COVID – 19

    MAYOON N/ BIOTECHNOLOGIST / KOLAR ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್…

  • ಸುದ್ದಿ

    ಗುಡ್ ನ್ಯೂಸ್ ; ಅಂತೂ ಇಂತು ರಾಜ್ಯಕ್ಕೆ ನೆರೆ ಪರಿಹಾರವನ್ನು ಘೋಷಿಸಿದ ಕೇಂದ್ರ ಸರ್ಕಾರ…!!

    ಕೇಂದ್ರ ಸರ್ಕಾರ ಅಂತೂ ಇಂತೂ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಘೋಷಿಸಿದೆ. ಬಿಹಾರದ ಜತೆ ಕರ್ನಾಟಕಕ್ಕೂ ನೆರೆಪರಿಹಾರ ಹಣವನ್ನು ಇಂದು  [ಶುಕ್ರವಾರ] ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪ್ರವಾಹ ಪೀಡಿತ ಬಿಹಾರ ಮತ್ತು ಕರ್ನಾಟಕ ರಾಜ್ಯಗಳಿಗೆ ಮಧ್ಯಂತರ ಪರಿಹಾರ ಹಣವನ್ನಾಗಿ ಬಿಹಾರಕ್ಕೆ 400 ಕೋಟಿ ರೂ. ಮತ್ತು  ಕರ್ನಾಟಕಕ್ಕೆ1200 ಕೋಟಿ ರೂ. ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್​ಡಿಆರ್​ಎಫ್​) ಒಟ್ಟು1813.75 ಕೋಟಿ…

  • ಸಿನಿಮಾ

    ರೊಬೋ-2.0 ಚಿತ್ರದ ಆ್ಯಮಿ ಜಾಕ್ಸನ್ ಫಸ್ಟ್ ಲುಕ್ ಬಿಡುಗಡೆ…! ತಿಳಿಯಲು ನೋಡಿ…

    ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ

  • ಸುದ್ದಿ

    ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ರಮ್ಯಾ.!ಆ ದೂರಿನಲ್ಲಿ ಏನಿದೆ ಗೊತ್ತಾ..?

    ಮಾಜಿ ಸಂಸದೆ ನಟಿ ರಮ್ಯ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ, ‘ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಫೇಸ್ಬುಕ್ ಖಾತೆ ಮೂಲಕ ಬ್ಯಾಡ್ಜ್, ಟೀ ಶರ್ಟ್, ಫೋನ್ ಕವರ್, ಟೋಪಿ ಮೊದಲಾದ ಉಚಿತ ಉಡುಗೊರೆಗಳಿಗಾಗಿ ನರೇಂದ್ರ ಮೋದಿಯವರಿಗೆ ವೋಟ್ ಮಾಡಿ ಎಂದು ಮತದಾರರಿಗೆ ಆಮಿಷ ಒಡ್ಡಲಾಗಿದೆ. ಅಲ್ಲದೆ ವೆಬ್ ಸೈಟ್ ಒಂದರ ಮೂಲಕ ಈ ವಸ್ತುಗಳನ್ನು…

  • ಸಿನಿಮಾ

    ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ರೂ,ಈ ನಟನ ಜನಪರ ಕಾಳಜಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!ತಿಳಿಯಲು ಈ ಲೇಖನಿ ಓದಿ…

    ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…