ಸುದ್ದಿ

ಗುರುವಾರದಂದು ತಪ್ಪದೇ ಈ ನಿಯಮ ಪಾಲಿಸಿದರೆ ಸಾಕು ನೀವು ಶ್ರೀಮಂತರಾಗುವುದು ಖಚಿತ,..!!

97

ಎಲ್ಲರು ಶ್ರೀಮಂತರಾಗಬೇಕು, ಇನ್ನಷ್ಟು ಹೆಚ್ಚು  ಹಣ ಗಳಿಸಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿಯೇ  ಶ್ರಮ ಪಡುವವರೇ, ಶ್ರಮದ ಹೊರತಾಗಿಯೂ, ಎಷ್ಟೇ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ನೀವು ಪಡೆದ ಹಣ ನೀರಿನಂತೆ ಕರಗಿ ಹೋಗಬಹುದು. ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿಯೂ ಮನುಷ್ಯನನ್ನು ಆರ್ಥಿಕವಾಗಿ ಜರ್ಝರಿತಗೊಳಿಸಬಹುದು. ಇದನ್ನು ಜಗದ ನಿಯಮದಿಂದಲೂ ಬಗೆಹರಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆ ಬಗೆಹರಿಸಬಹುದು.

ಗುರುವಾರವನ್ನು ದೇವಗುರುವಿನ ದಿನವೆಂದು ಕರೆಯಲಾಗಿದೆ. ಗುರುವು ವಿಷ್ಣುವಿನ ಅಂಶವೂ ಆಗಿದ್ದಾನೆ. ಜ್ಯೋತಿಷ್ಯಶಾಸ್ತ್ರದಲ್ಲಿ ಹಾಗೂ ಧರ್ಮಗ್ರಂಥಗಳಲ್ಲಿಯೂ ಗುರುವನ್ನು ಸಂಪತ್ತು ಹಾಗೂ ಸಂತೋಷದ ಅಂಶವೆಂದು ಪರಿಗಣಿಸಲಾಗುತ್ತದೆ. ಗುರುವಾರದಂದು ಈ ನಿಯಮಗಳನ್ನು ಪಾಲಿಸಿದರೆ ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಬಹುದು.

ದಕ್ಷಿಣ ದಿಕ್ಕಿನಲ್ಲಿ ಧ್ಯಾನ : ಬ್ರಹ್ಮ ಪುರಾಣದಲ್ಲಿ ಬರುವ ದೇವರಾಜ ಇಂದ್ರ ಹಾಗೂ ಬ್ರಹ್ಮನ ಸಂಭಾಷಣೆಯಂತೆ, ಯಾರು ಪ್ರತಿ ಗುರುವಾರ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿವ ಕುಳಿತು ಬಲಿಚಕ್ರವರ್ತಿಯ ತ್ಯಾಗದ ಕುರಿತಾಗಿ ಧ್ಯಾನ ಮಾಡುತ್ತಾರೋ ಅವರ ಮನೆಯು ಆಹಾರ, ಧನ-ಕನಕಗಳಿಂದ ತುಂಬುತ್ತದೆ ಎನ್ನಲಾಗುತ್ತದೆ. ಬಲಿ ಚಕ್ರವರ್ತಿಯನ್ನು ಅಷ್ಟೈಶ್ವರ್ಯ ದೇವತೆ ಲಕ್ಷ್ಮಿಯ ಸಹೋದರನೆಂದು ಪರಿಗಣಿಸಲಾಗುತ್ತದೆ. ಬಲಿಯ ನಿವಾಸವು ದಕ್ಷಿಣ ದಿಕ್ಕಿನಲ್ಲಿದ್ದ ಕಾರಣ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಕುಳಿತು ಧ್ಯಾನ ಮಾಡಬೇಕು.

ಬಾಳೆ ಗಿಡದ ಪೂಜೆ:  ಪ್ರತಿ ಗುರುವಾರ ಬಾಳೆಗಿಡದ ಬುಡದಲ್ಲಿ ತುಪ್ಪದ ದೀಪವನ್ನು ಹಚ್ಚಿ, ”ಓಂ ಭ್ರಾಂ ಭ್ರೀ ಭ್ರೋ ಸ: ಬ್ರಹಸ್ಪತೆಯೇ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಬೇಕು

ಹಿರಿಯನ್ನು ಗೌರವಿಸಿ : ಶುಕ್ಲಪಕ್ಷದ ಗುರುವಾರದಂದು ಬಾಳೆ ಗಿಡದ ಬೇರನ್ನು ಅರಿಶಿಣವನ್ನು ಹಚ್ಚಿದ ಬಟ್ಟೆಯಲ್ಲಿ ಸುತ್ತಿ ಅದನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ಇದು ನೀಲಮಣಿ ಧರಿಸಿದಷ್ಟೇ ಪರಿಣಾಮಕಾರಿಯಾದುದು. ಇದನ್ನು ಧರಿಸಿದ ನಂತರ ಗುರು ಹಿರಿಯರಿಗೆ ಗೌರವ ನೀಡಿ. ಬೆಳಗ್ಗೆ ವಿಷ್ಣುವನ್ನು ಧ್ಯಾನ ಮಾಡಿ.

ವಿಷ್ಣು ಸಹಸ್ರನಾಮ ಪಠಿಸಿ : ಗುರುವಾರ ಬೆಳಗ್ಗೆ ಶುಚೀರ್ಭೂತರಾಗಿ, ವಿಷ್ಣು ಸಹಸ್ರನಾಮವನ್ನು ಪಠಿಸಿ. ಸಾಧ್ಯವಾದರೆ ಸಿಹಿ ನೈವೇದ್ಯವನ್ನು ಮಾಡಿ ಬ್ರಾಹ್ಮಣರಿಗೆ ಅಥವಾ ಹಸುವಿಗೆ ನೀಡಿ.

ಆರ್ಥಿಕವಾಗಿ ಮೇಲಕ್ಕೇರುವಂತಹ ನಿಮ್ಮ ಕನಸನ್ನು ನನಸು ಮಾಡಲು ಜ್ಯೋತಿಷ್ಯ ಶಾಸ್ತ್ರದ ಪ್ರಮುಖ ಗ್ರಂಥ ‘ಲಾಲ್‌ ಕಿತಾಬ್‌’ ನಲ್ಲಿರುವ ಕೆಲವೊಂದು ಪರಿಹಾರಗಳನ್ನು ಪಾಲಿಸಬಹುದು. ಈ ನಿಯಮಗಳು ಲಕ್ಷ್ಮಿಯ ಆಶೀರ್ವಾದ ಹಾಗೂ ಅನುಗ್ರಹದೊಂದಿಗೆ ಜ್ಯೋತಿಷ್ಯ ಶಾಸ್ತ್ರಜ್ಞರು ರಚಿಸಿದವುಗಳಾಗಿದ್ದು, ಇದನ್ನು ಪಾಲಿಸಿದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಹೆಸರು, ಸಂಪತ್ತನ್ನು ಗಳಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ