ದೇಶ-ವಿದೇಶ

ಇದು ಪ್ರಪಂಚದ ಮೊದಲ ಅರಣ್ಯ ನಗರ!ಎಲ್ಲಿದೆ ಗೊತ್ತಾ?ಈ ಲೇಖನಿ ಓದಿ …

618

ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

ಚೀನಾದಲ್ಲಿ ಕಾಂಕ್ರೀಟ್ ಕಟ್ಟಡ, ಕೈಗಾರಿಕೆಗಳು ಹೆಚ್ಚಾಗಿ ಮಾಲಿನ್ಯ ಜಾಸ್ತಿಯಾಗುತ್ತಿದೆ. ಹೀಗಾಗಿ ವಿಶ್ವದ ಮೊದಲ ಫಾರೆಸ್ಟ್ ಸಿಟಿಯ ನಿರ್ಮಾಣಕ್ಕೆ ಚೀನಾ ಕೈ ಹಾಕಿದ್ದು ಕಾಮಗಾರಿಗಳು ಆರಂಭಗೊಂಡಿದೆ.

ಇದು ನಿರ್ಮಾಣ ಆಗುತ್ತಿರುವುದಾದರೂ ಎಲ್ಲಿ.

ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದ ಲಿಝೌನಲ್ಲಿ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 30,000 ಜನರು ಇಲ್ಲಿ ವಾಸವಾಗುವಂತೆ ಈ ಸಿಟಿ ನಿರ್ಮಾಣವಾಗಲಿದೆ.

ಇದರ ವಿಶೇಷತೆ ಏನು ಗೊತ್ತಾ:-
100ಕ್ಕೂ ಅಧಿಕ ಜಾತಿಯ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಇಲ್ಲಿ ನೆಡಲು ಉದ್ದೇಶಿಸಲಾಗಿದೆ. ಈ ಎಲ್ಲ ಸಸಿಗಳು ಒಟ್ಟು 10,000 ಟನ್ಗತಳಷ್ಟು ಇಂಗಾಲದ ಡೈ ಆಕ್ಸೈಡ್ ಮತ್ತು 57 ಟನ್ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ವಾರ್ಷಿಕವಾಗಿ ಈ 10 ಲಕ್ಷ ಮರಗಳಿಂದ ಸುಮಾರು 900 ಟನ್ಗಳಳಷ್ಟು ಆಮ್ಲಜನಕ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಫಾರೆಸ್ಟ್ ಸಿಟಿಯಲ್ಲಿ ನಿರ್ಮಾಣವಾಗುವ ಮನೆಯಲ್ಲಿಯೂ ಮರಗಳನ್ನೂ ಬೆಳೆಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಿಟಿಯಲ್ಲಿ ವೇಗವಾಗಿ ಓಡುವ ರೈಲು, ಕಾರುಗಳು ಎಲ್ಲವೂ ಇರುತ್ತೆ. ಈ ನಗರದಲ್ಲಿ ವಿದ್ಯುತ್ಗೆ ಸೋಲಾರ್ ಶಕ್ತಿ ಬಳಕೆಯಾದರೆ ಜನರು ಎಲೆಕ್ಟ್ರಿಕ್ ಕಾರುಗಳನ್ನು ಬಳಸಲಿದ್ದಾರೆ.

ಒಟ್ಟಿನಲ್ಲಿ 175 ಹೆಕ್ಟೇರ್ ಪ್ರದೇಶದಲ್ಲಿ ಈ ಫಾರೆಸ್ಟ್ ಸಿಟಿಯನ್ನು ನಿರ್ಮಾಣವಾಗುತ್ತಿದ್ದು, ಈ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದೆ. ಪೂರ್ಣಗೊಂಡ ಬಳಿಕ ವಿಶ್ವದ ಮೊದಲ ಹಸಿರು ನಗರವನ್ನು ನಿರ್ಮಿಸಿದ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಾಲಿನಿಂದಲೇ ಮತದಾನ ಮಾಡಿ ಎಲ್ಲರಿಗೂ ಸ್ಪರ್ತಿಯಾದ ಲಕ್ಷ್ಮೀ…

    ಮತದಾನ ಪ್ರತಿಯೊಬ್ಬರ ಹಕ್ಕು. ಆದರೆ ಎಲ್ಲಾ ಸರಿಯಿದ್ದರೂ ತಮ್ಮ ಹಕ್ಕು ಚಲಾಯಿಸದೇ ಅವರು ಸರಿ ಇಲ್ಲ ಇವರು ಸರಿ ಇಲ್ಲ ಅಂತ ಮಾತನಾಡುವವರೇ ಹೆಚ್ಚು. ಆದರೆ ತನ್ನ ಎರಡೂ ಕೈ ಇಲ್ಲದಿದ್ದರೂ ಕಾಲಿನಿಂದಲೇ ಯುವತಿಯೊಬ್ಬರು ಮತದಾನ ಮಾಡಿದ್ದಾರೆ.  ಹೌದು, ಕಾನಹೊಸಳ್ಳಿಯ ಲಕ್ಷ್ಮಿಯವರಿಗೆ ಎರಡೂ ಕೈಗಳಿಲ್ಲ. ಆದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳದ ಲಕ್ಷ್ಮಿ ಕಾಲುಗಳಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಂಡಮುಣುಗಿಯ ಮತಗಟ್ಟೆ ಸಂಖ್ಯೆ 118 ರಲ್ಲಿ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಎರಡೂ ಕೈಯಿಲ್ಲದ ಲಕ್ಷ್ಮಿಯವರಿಗೆ ಚುನಾವಣಾ ಸಿಬ್ಬಂದಿ…

  • ಉಪಯುಕ್ತ ಮಾಹಿತಿ

    ರಥಸಪ್ತಮಿ ಮಹತ್ವ?

    *ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?* ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(15 ಡಿಸೆಂಬರ್, 2018) ದಿನದಲ್ಲಿ ನಂತರಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನಿಮ್ಮಪ್ರಿಯತಮೆಯ ಜೊತೆ…

  • ಸುದ್ದಿ

    ಹಸಿದ ಜಿಂಕೆಮರಿಗೆ ಎದೆಹಾಲುಣಿಸಿದ ಮಹಾತಾಯಿ…!

    ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಬಿಷ್ಣೋಯಿ ಸಮುದಾಯದ ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಸಾಮಾಜಿ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಫೋಟೊವನ್ನು ಐಎಫ್​​​ಎಸ್​ ಅಧಿಕಾರಿ ಪ್ರವೀಣ್​​​​​​​ ಕಾಸ್ವಾನ್​​ ಎಂಬುವವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಷ್ಣೋಯಿ ಸಮುದಾಯದ ಮಹಿಳೆಯರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಸಹೃದಯವುಳ್ಳಂತವರು. ಅವರು ತಮ್ಮ ಮಕ್ಕಳಂತೆ ಪ್ರಾಣಿ ಹಾಗೂ ಪಕ್ಷಿಗಳನ್ನು ಪೋಷಣೆ ಮಾಡುತ್ತಾರೆ ಎಂದು…

  • inspirational, ಸಂಬಂಧ

    ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಅವನನ್ನು ತಿರಸ್ಕರಿಸುವುದಕ್ಕೆ ತೆಗೆದುಕೊಳ್ಳುವ ಸಮಯ ಕೇವಲ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ.ಆದ್ರೆ ಈಗಂತೂ ಜೀವನ ಸಂಗಾತಿ ಹುಡುಕುವುದು ಅಷ್ಟೋಂದು ಸುಲಭವಲ್ಲ. ಜೀವನ ಸಂಗಾತಿಯ ಆಯ್ಕೆಗೆ ತಲೆಕೆಡಿಸಿಕೊಳ್ಳುವವರು ಎಷ್ಟು ಜನರಿಲ್ಲ? ಸುಂದರವಾಗಿದ್ದರೆಅನುಕೂಲವಿಲ್ಲ, ಅನುಕೂಲತೆಯಿದ್ದರೆ ಹುಡುಗ ಚೆನ್ನಾಗಿಲ್ಲ, ಎರಡೂ ಇದ್ದರೂ ಕುಟುಂಬದ ಹಿನ್ನೆಲೆಸರಿಯಿಲ್ಲ, ಎಲ್ಲವೂ ಸರಿ ಇದ್ದರೆ ಜಾತಕ ಆಗಿ ಬರೋಲ್ಲ… ಮದುವೆ ಮಾಡೋದಂದ್ರೆ ಸುಲಭಾನಾ? ಎಲ್ಲವೂ ಸರಿ ಇರಬೇಕಂದ್ರೆ ಮದುವೆನೇ ಆಗಲ್ಲ, ರಾಜಿ ಆಗ್ಲೇ ಬೇಕು ಎಂದುಕೊಂಡೇ ಯಾರೋ ಒಬ್ಬರನ್ನು ಒಪ್ಪಿಕೊಳ್ಳುವುದುನಂತರದ ಮಾತು. ಆದರೆ ಹೀಗೆ ವರಾನ್ವೇಷಣೆಯ ಪ್ರಕ್ರಿಯೆಯಲ್ಲಿ ಹುಡುಗಿಯರು ಹಾಕುವ ಷರತ್ತುಳು, ವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಹುಡುಗನನ್ನು ಹುಡುಕುವ ಪಾಲಕರ ಗೋಳನ್ನು ನೋಡಿದರೆ ಅಯ್ಯೋ ಎನ್ನಿಸಬಹುದು! ಆದರೆ ಸಾಕಷ್ಟು ಷರತ್ತು, ಬೇಡಿಕೆಗಳೆಲ್ಲ ಇದ್ದಾಗ್ಯೂ ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಅವನ್ನು ತಿರಸ್ಕರಿಸು ವುದಕ್ಕೆತೆಗೆದುಕೊಳ್ಳುವ ಸಮಯ ಕೇವಲ ಹದಿನೈದು ನಿಮಿಷವಂತೆ! ಭವಿಷ್ಯ ಪೂರಾ ಜೊತೆಯಾಗಿರಬೇಕಾದ ವ್ಯಕ್ತಿಯ ಬಗ್ಗೆ ಹದಿನೈದು ನಿಮಿಷ ಮಾತ್ರವೇ ಯೋಚಿಸ್ತಾರಾ? ಹೌದು ಎನ್ನುತ್ತದೆ ವಾಷಿಂಗ್ಟನ್ನಿನ ಮನಃಶಾಸ್ತ್ರಜ್ಞರ ತಂಡ. ಮನಸ್ಸಿನಲ್ಲಿತನ್ನನ್ನು ವರಿಸುವ ಹುಡುಗನ ಬಗ್ಗೆ ಎಷ್ಟೇ ಕನಸುಗಳಿದ್ದರೂ, ಗಂಭೀರವಾಗಿ ಜೀವನ ಸಂಗಾತಿಯ ಆಯ್ಕೆಯ ಬಗ್ಗೆ ಯೋಚಿಸುವಾಗ ಮಾತ್ರ ಮಹಿಳೆ ಹೆಚ್ಚುಯೋಚಿಸುವುದಿಲ್ಲವಂತೆ. ತನ್ನೆಲ್ಲ ನಿರೀಕ್ಷೆಯೊಂದಿಗೆ ಕ್ರಮೇಣ ಕೊಂಚ ರಾಜಿಯಾಗುತ್ತ, ತನ್ನಿಂದಲೂ ತನ್ನ ಸಂಗಾತಿ ಇಂಥವನ್ನೆಲ್ಲ ನಿರೀಕ್ಷಿಸು ತ್ತಾನಲ್ಲ ಎಂಬ ಸತ್ಯವನ್ನು ಅರಿಯುತ್ತಾಳಂತೆ.ಕೊರತೆಗಳನ್ನು ಸರಿಪಡಿಸಿಕೊಂಡು, ಪರಸ್ಪರರ ಅಭಿರುಚಿಗಳನ್ನು ಗೌರವಿಸಿಕೊಂಡು ಬದುಕಿದರೆ ಇಬ್ಬರ ನಿರೀಕ್ಷೆಯೂ ನಿಜವಾಗುತ್ತೆ ಎಂಬುದು ಕ್ರಮೇಣಅರ್ಥವಾಗುತ್ತದೆಯಂತೆ. ಆದರೆ ಈ ಎಲ್ಲ ಜ್ಞಾನೋದಯಕ್ಕೂ ಮುನ್ನ ಆಕೆ ಭವಿಷ್ಯದ ಬಗ್ಗೆ ಯೋಚಿಸಲು ತೆಗೆದುಕೊಳ್ಳುವ ಸಮಯ ಮಾತ್ರ ತೀರಾ ಕಡಿಮೆ ಎನ್ನಿಸುತ್ತದಲ್ಲವೇ!?