ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಕ್ಕಳು ಮೊಬೈಲ್ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ.

ಈ ಬಾಲಕನ ಹೆಸರು ಬೇಸಿಕ್ ಓಕ್ಪರಾ ಜ್ಯೂ. ಲಾಗೋಸ್ ನಿವಾಸಿಯಾಗಿರುವ ಈ ಬಾಲಕನ ತಂದೆ, ಈತನನ್ನು ಬೂಟ್ ಕ್ಯಾಂಪ್‌ಗೆ ಸೇರಿಸಿದ್ದರು. ಅಲ್ಲಿಆತ ಗೇಮ್ ಕೋಡಿಂಗ್ ಕಲಿತಿದ್ದ. ನಾಲ್ಕನೇ ವರ್ಷದಲ್ಲೇ ಬೇಸಿಕ್, ಟ್ಯಾಬ್‌ನಲ್ಲಿಸಾಕಷ್ಟು ಗೇಮ್‌ಗಳನ್ನು ಆಡುತ್ತಿದ್ದ.

7ನೇ ವರ್ಷವಿದ್ದಾಗ ಬೇಸಿಕ್ ಇಡೀ ದಿನ ಗೇಮಿಂಗ್‌ನಲ್ಲೇ ನಿರತನಾಗಿದ್ದ. ಇದನ್ನು ನೋಡಿದ ಆತನ ತಂದೆ, ”ನೀನು ಯಾಕೆ ನಿನ್ನದೇ ಆದ ಸ್ವಂತ ಗೇಮ್ ಮಾಡಬಾರದು. ಅದನ್ನು ಇತರರು ಆಡುವಂತಾಗಲಿ,” ಎಂದು ಬಿಟ್ಟರು. ಬಳಿಕ 9ನೇ ವರ್ಷವಿದ್ದಾಗ ಬೇಸಿಕ್, ಗೇಮ್ ಅಭಿವೃದ್ಧಿಪಡಿಸುವುದನ್ನು ತಿಳಿದುಕೊಂಡ ಬಾಲಕ, ನಾಲ್ಕು ತಿಂಗಳಲ್ಲೇ 30 ಗೇಮ್‌ಗಳನ್ನು ಸೃಷ್ಟಿಸಿದ್ದಾನೆ. ಬಿಜೆಆರ್ ಗೇಮ್ಸ್ ಟ್ಯಾಗ್‌ನಡಿ ಈ ಗೇಮ್‌ಗಳನ್ನು ನೀವು ಗೂಗಲ್ ಪ್ಲೇ ಸ್ಟೋರ್‌ನಲ್ಲಿನೋಡಬಹುದು.

ಸ್ಮಾರ್ಟ್‌ಫೋನ್ ಆ್ಯಪ್ ಮತ್ತು ಗೇಮಿಂಗ್ ಬಹಳ ಬೇಡಿಕೆಯ ಕ್ಷೇತ್ರವಾಗಿದ್ದು, ಉದ್ಯೋಗ ಮತ್ತು ಹವ್ಯಾಸಕ್ಕೂ ದಾರಿಯಾಗಿದೆ. ಜತೆಗೆ ಹೊಸ ಅಯ್ಕೆಗಳ ಅನ್ವೇಷಣೆಗೂ ದಾರಿಮಾಡಿಕೊಡುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಬಿರುಗಾಳಿಯಂತೆ ಮುನ್ನುಗ್ಗುತ್ತಿದೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಕನ್ನಡ ಚಿತ್ರರಂಗವನ್ನು ಮತ್ತೊಂದು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡುಹೋಗಿರುವುದು ಸುಳ್ಳಲ್ಲ. ಈಗ ಕನ್ನಡ ಚಿತ್ರರಂಗದ ಸುದೀಪ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ನೂತನ ದಾಖಲೆ ಬರೆಯಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಐದು ಭಾಷೆಗಳಲ್ಲಿ ತೆರೆಕಂಡು ಧೂಳೆಬ್ಬಿಸುತ್ತಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರಕ್ಕೆ ಹೊಸ ಮಾರುಕಟ್ಟೆಯನ್ನು ಕೆಜಿಎಫ್ ಚಿತ್ರ ತೋರಿಸಿಕೊಟ್ಟಿದೆ….
ದೆಹಲಿಯಲ್ಲಿ ಸತತ 18ನೇ ದಿನವೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಪರಿಣಾಮ ಪೆಟ್ರೋಲ್ ದರ ಹಾಗೆ ಉಳಿದರೆ ಡೀಸೆಲ್ ಬೆಲೆ ದಾಖಲೆಯನ್ನು ಬರೆದಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ದೇಶದ ರಾಜಧಾನಿಯಲ್ಲಿ ಡೀಸೆಲ್‍ಗೆ ಪೆಟ್ರೋಲ್‍ಗಿಂತ ಹೆಚ್ಚಿನ ಬೆಲೆ ನಿಗದಿಯಾಗಿದೆ. ಡೀಸೆಲ್ ಬೆಲೆಯಲ್ಲಿ ಇಂದು 48 ಪೈಸೆ ಹೆಚ್ಚಿಸಲಾಗಿದೆ. ಹೀಗಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಈಗ 79.88 ರೂ. ಇದ್ದರೆ, ಪ್ರತಿ ಲೀಟರ್ ಪೆಟ್ರೋಲ್‍ಗೆ 79.76 ರೂ. ನಿಗದಿಯಾಗಿದೆ. ಈ ಮೂಲಕ ಪೆಟ್ರೋಲ್‍ಗಿಂತ ಡೀಸೆಲ್ ಬೆಲೆ 12 ಪೈಸೆ…
ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ. ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ…
ಮನಸ್ಸಿನಲ್ಲಿ ದೃಢವಾದ ನಿರ್ಣಯವು ಇದ್ದಲ್ಲಿ ಯಾವುದೇ ಕೆಲಸ ಕಷ್ಟವಲ್ಲ .ನಿಮ್ಮಲ್ಲಿ ಪ್ರತಿಭೆ ಇದ್ದು,ಗುರಿ ಅನ್ನುವ ಛಲ ಹೊಂದಿದ್ದರೆ ನಿಮ್ಮನ್ನು ಜಗತ್ತಿನ ಯಾವುದೇ ಶಕ್ತಿಯು ತಡೆಯಲಾರದು ಎಂಬ ಮಾತಿದೆ. ಆದ್ರೆ ಎಷ್ಟೇ ತೊಂದರೆಗಳು ಬರ್ರ್ಲಿ ಯಾವುತ್ತು ನಮ್ಮ ಧೈರ್ಯವನ್ನು ನಾವು ಬಿಡಬಾರದು ಎಂಬ ಮಾತಿದೆ. ಈ ಮಾತಿಗೆ ಉದಾಹರಣೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ‘ಪದ್ಮಶಿಲಾ ತಿರುಪಡೆ’. ಇವರು ತಮ್ಮ ಕಷ್ಟದ ದಿನಗಳಲ್ಲೂ, ಸೋಲನ್ನು ಒಪ್ಪಿಕೊಳ್ಳದೆ,ದೇಶದ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ. ಯಾರು ಈ ಮಹಿಳೆ… ಸಾಧನೆ ಅನ್ನುವುದು ಸಾಮಾನ್ಯವಾದ ಕೆಲಸವಲ್ಲ,…
ಈಗಾಗಲೇ ಕೊರೊನ ವೈರಸ್ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿವೆ, ಈ ಬಗ್ಗೆ ಹಲವು ನ್ಯೂಸ್ ಚಾನೆಲ್ ಗಳು ಒಂದೊಂದು ರೀತಿಯ ವರದಿ ಮಾಡುತ್ತಿವೆ. ದೇಶದಲ್ಲಿ ಈಗಾಗಲೇ ಈ ವೈರಸ್ ಬಗ್ಗೆ ಭಾರಿ ಪ್ರಮಾಣದ ಜಾಗ್ರತೆ ವಹಿಸಲಾಗಿದೆ, ಏಕೆಂದರೆ ಈ ಮಹಾಮಾರಿ ವೈರಸ್ ಈಗಾಗಲೇ ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರ ಪ್ರಾಣ ತೆಗೆದುಕೊಂಡಿದೆ. ಕೊರೋನಾ ವೈರಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ವಿಶ್ವದಾದ್ಯಂತ 100,000 ಮೀರಿದೆ ಎಂದು ಶನಿವಾರ ಬಿಡುಗಡೆಯಾದ ಅಧಿಕೃತ ಮಾಹಿತಿ ತಿಳಿಸಿದೆ. ಇನ್ನು…
ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಯೊಬ್ಬರು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ ಘೋಷ್ ಎಂಬವರು ಬೆಂಗಳೂರು ತಂಡವನ್ನು ಧ್ವಜ ಹಿಡಿದು ಬೆಂಬಲಿಸುತ್ತಿದ್ದರು. ಇವರು ಧ್ವಜ ಹಿಡಿದು ಬೆಂಬಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದೇ ತಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‍ಸ್ಟಾಗ್ರಾಮ್‍ನಲ್ಲಿ 6 ಸಾವಿರ ಮಂದಿ ಫಾಲೋ ಮಾಡುತ್ತಿದ್ದರೆ ದಿನ ಬೆಳಗಾಗುವುದರ ಒಳಗಡೆ ಒಂದು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ. ದೀಪಿಕಾ ತಮ್ಮ…