ಸುದ್ದಿ

ಕಾಲೇಜುಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,..!!

392

ಇಸ್ಲಾಮಾಬಾದ್,  ಇನ್ನುಮುಂದೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಸುತ್ತೋಲೆ ಹೊರಡಿಸಿದೆ. ಸದಾ ಹೊಸ ಹೊಸ ಕಾನೂನು ಕಟ್ಟಳೆಗಳಿಂದ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ತಲೆನೋವಾಗಿದೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು ಇಸ್ಲಾಮಿಕ್ ಸಂಸ್ಕೃತಿಯಲ್ಲ ಹೀಗಾಗಿವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಲೇಜ್ಕ್ಯಾಂಪಸ್‍ನಲ್ಲಿ ಜೋಡಿಯಾಗಿ ಓಡಾಡಿದರೆ ಭಾರೀ ಮೊತ್ತದ ದಂಡ ಹಾಗೂ ಪೋಷಕರಿಗೆ ದೂರು ನೀಡಲಾಗುವುದುಎಂದು ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ. ಬಚಾ ಖಾನ್ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಚೀಫ್ಪ್ರೊಕ್ಟರ್ ಫರ್ಮಾನುಲ್ಲಾಹೋನ್ ಸೆ.23ರಂದು ಈ ವಿಚಿತ್ರ ಸುತ್ತೋಲೆ ಹೊರಡಿಸಿದ್ದಾರೆ.

ಕ್ಯಾಂಪಸ್‍ನಲ್ಲಿ ಹುಡುಗ ಹಾಗೂ ಹುಡುಗಿ ಜೋಡಿಯಾಗಿ ಕಂಡು ಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಲ್ಲಿ ಕಾಲೇಜ್ ಕ್ಯಾಂಪಸ್‍ನಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಜೋಡಿಯಾಗಿ ಸಂಚರಿಸಕೂಡದು ಎಂದು ನೋಟಿಸ್‍ನಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

 ಅನಗತ್ಯ ಹಾಗೂ ಇಸ್ಲಾಮಿಕ್ ಸಂಸ್ಕೃತಿಗೆ ವಿರುದ್ಧವಾಗಿರುವ ಇಂತಹ ಸಂಬಂಧಗಳಿಗೆ ಕಡಿವಾಣ ಹಾಕಬೇಕಿದೆ. ಹುಡುಗ ಮತ್ತು ಹುಡುಗಿ ಒಟ್ಟಾಗಿ ಓಡಾಡುವುದನ್ನು ವಿಶ್ವವಿದ್ಯಾಲಯ ಅನುಮತಿಸುವುದಿಲ್ಲ. ವಿದ್ಯಾರ್ಥಿಗಳು ಇದನ್ನು ಮುಂದುವರಿಸಿದಲ್ಲಿ ಪೋಷಕರನ್ನು ವಿಶ್ವವಿದ್ಯಾಲಯಕ್ಕೆ ಕರೆಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ಆದ್ದರಿಂದ ಅಹಿತಕರ ಘಟನೆಗಳು ನಡೆಯದಂತೆ ವಿದ್ಯಾರ್ಥಿಗಳು ವರ್ತಿಸಬೇಕು. ಹುಡುಗ ಹಾಗೂ ಹುಡುಗಿ ಇಬ್ಬರೂ ಒಟ್ಟಿಗೆ ಓಡಾಡಬಾರದು ಹಾಗೂ ಪತ್ರ ವ್ಯವಹಾರ ನಡೆಸಬಾರದು ಎಂದೂ ತಿಳಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ