ಸುದ್ದಿ

ಆನ್‍ಲೈನ್ ಫುಡ್ ಪ್ರಿಯರೆ ದಯವಿಟ್ಟು ಇದನ್ನೊಮ್ಮೆ ಓದಿ, ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,.!

71

ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ.

ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ ಕಿಚನ್ ಹಾಗೂ ಈಟ್‍ವೆಲ್ ಎಂಬ ಹೋಟೆಲ್  ಅಲ್ಲಿ ವರ್ಷಗಟ್ಟಲೇ ಪೇಂಟ್ ಬಳಿಯದ ಗೋಡೆ, ಸಿಕ್ಕಸಿಕ್ಕ ಕಡೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರೋ ಪಾತ್ರೆ ಪಗಡೆ, ಕೊಳಚೆ ನೀರಿನ ನಡುವೆ ಹರಿದಾಡ್ತಿರೋ ಜಿರಳೆ, ಹುಳಹುಪ್ಪಟೆಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿಯೇ ನೀವು ಆರ್ಡರ್ ಮಾಡೋ ವೈರೆಟಿ ವೈರೆಟಿ ಫುಡ್ ತಯಾರಾಗುತ್ತದೆ.

ಅನರ್ವ್ ಎಂಬವರು ಆನ್‍ಲೈನ್ ಮೂಲಕ ಇಲ್ಲಿಯ ಊಟವನ್ನು ಆರ್ಡರ್ ಮಾಡಿದ್ದರು. ಕೈ ಬಂದ ಪಾರ್ಸೆಲ್ ತೆಗೆದಾಗ ಅನರ್ವರಿಗೆ ಜಿರಳೆ ಕಾಣಿಸಿಕೊಂಡಿದೆ. ಕರಾವಳಿ ಕಿಚ್ಚನ್ ಹೆಸರಿನ ಹೋಟೆಲ್‍ನಿಂದ ತರಿಸಿದ್ದ ಕೊಳಕು ಆಹಾರ ಹಿಡಿದು ಹೋಟೆಲ್ ನತ್ತ ಹೆಜ್ಜೆ ಹಾಕಿದ್ದರು. ತಮ್ಮ ಹಣವನ್ನ ವಾಪಾಸ್ಸು ನೀಡುವಂತೆ ಕೇಳಿ ಹೋಟೆಲ್ ಅಡುಗೆ ಕೋಣೆ ಒಳಗೆ ಹೋದಾಗ ಅನರ್ವ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಕೊಳಕಿನಲ್ಲೇ ಕೊಳಕು ಕೈಯ ಅಡುಗೆ ಭಟ್ಟ ಅಲ್ಲಿಲ್ಲಿ ಮುಟ್ಕೊಂಡು ಪರೋಟದ ಉಂಡೆಯನ್ನ ಕಟ್ಟುತ್ತಿದ್ದ ಎಂದು ಅನರ್ವ್  ಅವರು ಹೇಳಿದ್ದಾರೆ.

ಅದಲ್ಲದೆ  ವಸಂತನಗರದಲ್ಲಿರುವ ಪ್ಯಾಸೂಸ್ ಫುಡ್ ಸರ್ವಿಸಸ್ ಕಂಪನಿಯ ತಡ್ಕವಾಲಾ ಕಿಚನ್‍ನಲ್ಲಿ ಸ್ವಚ್ಛತೆ ಅನ್ನೋದೆ ಇಲ್ಲ. ಫ್ರಿಜ್‍ನಲ್ಲಿ ಹೆಪ್ಪುಗಟ್ಟಿರುವ ಮಟನ್, ಚಿಕನ್ ಪೀಸ್‍ಗಳು, ಟಾಯ್ಲೆಟ್ ರೂಮಿನಲ್ಲಿ ಕಬಾಬ್ ಹಾಗೂ ರೈಸ್ ಬೇಯಿಸುವ ಕಡಾಯಿಗಳು ಹಾಗೂ ಕೊಳೆತ ಸ್ಥಿತಿಯಲ್ಲಿರುವ ಸೊಪ್ಪು ಪದಾರ್ಥಗಳು ಕಂಡು ಬಂದಿವೆ. ಫ್ಯಾಸೂಸ್ ಫುಡ್ ಸರ್ವಿಸಸ್ ಕಂಪನಿ ಮೂಲಕ ನಗರದ ಮಾರತಹಳ್ಳಿ, ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ರಾಜಾಜಿನಗರ, ಬೊಮ್ಮನಹಳ್ಳಿ, ಕೆಂಗೇರಿ ಸೇರಿ20 ರಿಂದ 25 ಹೋಟೆಲ್‍ಗಳನ್ನ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಆನ್‍ಲೈನ್ ಫುಡ್ ಡೆಲಿವರಿಯ ಹೆಸರಲ್ಲಿ ಹೋಟೆಲ್ ಮಾಲೀಕರು ಸ್ವಚ್ಛತೆಯನ್ನೇ ಮರೆತಿದ್ದಾರೆ. ನೇಪಾಳಿ, ಬೆಂಗಾಳಿ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡು ಡರ್ಟಿ ಕಿಚನ್‍ಗಳಿಂದ ಫುಡ್ ಡಿಸ್ಟ್ರೂಬ್ಯೂಟ್ ಮಾಡುತ್ತಿದ್ದಾರೆ. ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದೆಗೆ ಕ್ಯಾರೇ ಅಂತಿಲ್ಲ. ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‍ಗಳಿಗೆ ಬಿಬಿಎಂಪಿಯ ಆಹಾರ ಇಲಾಖೆ ಅಧಿಕಾರಿಗಳು ಹೇಗೆ ಲೈಸನ್ಸ್ ನ್ನು ರಿನಿವಲ್ ಮಾಡಿಕೊಟ್ಟರು ಅನ್ನೋ ಪ್ರಶ್ನೆ ಕಾಡುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಮೋದಿ ಅಭಿಮಾನಿಗಳಿಗೆ ಸವಾಲು ಹಾಕಿದ, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು!ಏನದು ಸವಾಲು ಗೊತ್ತಾ?

    ಸೋಲಿಲ್ಲದ ಸರದಾರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಪ್ರಧಾನಿ ಮೋದಿ ಅವರ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. ‘ಬಿಜೆಪಿಯ ನಕಲಿ, ಮೋದಿಯ ಫೇಕ್ ಅಕೌಂಟ್ ಭಕ್ತರೇ’ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಲೇವಡಿ ಮಾಡಿದ್ರಿ ಈಗ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಯಾರೊಬ್ಬರು ಚಕಾರವೆತ್ತುತ್ತಿಲ್ಲ. ಈಗ ಸ್ವಾಭಿಮಾನಿ ಮೋದಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ: ನಿಮ್ಮದೇ ಆದ ಭಾವನಾಲೋಕದಲ್ಲಿನ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆ ತರಬಲ್ಲವು. ಎಚ್ಚರ.    .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121 ಮಿಥುನ ಸೂಕ್ಷ್ಮವಾಗಿ ಯೋಚಿಸಿ, ವಿಷಯವೊಂದನ್ನು…

  • ಉಪಯುಕ್ತ ಮಾಹಿತಿ

    ಕನ್ನಡ ಡಿಜಿಟಲ್ ಗ್ರಂಥ ಭಂಡಾರ.ನಿಮ್ಗೆ ಬೇಕಾದ ಮಾಹಿತಿಗಾಗಿ ಈ ಲೇಖನಿ ಓದಿ…

    ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಮಾರ್ಚ್, 2019) ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ…

  • ಜ್ಯೋತಿಷ್ಯ

    ಬೆಳಿಗ್ಗೆ ಎದ್ದ ತಕ್ಷಣ ನೀವು ಇವುಗಳನ್ನು ನೋಡಲೆಬೇಡಿ!ನೋಡಿದ್ರೆ ದಾರಿದ್ರ ಖಂಡಿತ…

    ಪ್ರತಿದಿನದ ಬೆಳಗು ನಮ್ಮ ಬದುಕಿನ ಶುಭಾರಂಭವಿದ್ದಂತೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಯಾವುದೇ ವಿಘ್ನಗಳು ಎದುರಾಗಬಾರದು. ಅದಕ್ಕಾಗಿ ಕೆಲವೊಂದು ಕೆಲಸಗಳಿಂದ ನೀವು ದೂರವಿರಬೇಕು. ಯಾಕಂದ್ರೆ ಅವು ನಮ್ಮ ಕೆಲಸವನ್ನೇ ಬಿಗಡಾಯಿಸಿಬಿಡುತ್ತವೆ. ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ : ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಏಳ್ತಿದ್ದಂತೆ ಕನ್ನಡಿ ನೋಡುವುದರಿಂದ ರಾತ್ರಿಯ ನಕಾರಾತ್ಮಕತೆ ಪುನಃ ಸ್ಥಾಪಿತವಾಗುತ್ತದೆ. ಇಡೀ ದಿನ ನಿಮ್ಮ ಮನಸ್ಸು ಅದೇ ರೀತಿಯಾಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಸ್ವಲ್ಪ ಸಮಯದ ನಂತರ ಕನ್ನಡಿಯಲ್ಲಿ ಮುಖ ದರ್ಶನ ಮಾಡಿ. ಬೆಳಗ್ಗೆ…

  • ಉಪಯುಕ್ತ ಮಾಹಿತಿ

    ‘ಪೊಲೀಯೋ ಡ್ರಾಪ್ಸ್’ ನೀಡಲಾದ ಆ ಹುಡುಗನಿಗೆ ಆದ ದಾರುಣ ಘಟನೆ ಏನು..? ತಿಳಿಯಲು ಇದನ್ನು ಓದಿ ..

    ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.