ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್‌ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್‌ನಿಂದ ಬಚಾವ್ ಆಗಬಹುದು.

ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ ಒಯ್ಯಲು ಸಾಧ್ಯವೆ. ಹೀಗಾಗಿ ಮೊಬೈಲ್‌ನಲ್ಲಿ ಡಿಜಿಲಾಕರ್ ಅಥವಾ ಪರಿವಾಹನ ಆ್ಯಪ್ ಡೌನ್‌ಲೋಡ್ ಮಾಡಿ, ನಿಮ್ಮ ದಾಖಲೆಗಳ ಪ್ರತಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು. ಇದನ್ನು ತೋರಿಸಿದರೆ ಸಾಕು ದುಬಾರಿ ದಂಡದಿಂದ ಪಾರಾಗಬಹುದು.

ಡಿಜಿಲಾಕರ್ ಅಥವಾ mಪರಿವಾಹನ ಆ್ಯಪ್ ಡೌನ್‌ಲೋಡ್ ಮಾಡಿ ನಿಮ್ಮ ಆಧಾರನ್ನು ಲಿಂಕ್ ಮಾಡಬೇಕು. ಬಳಿಕ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್, ಎಮಿಶನ್, ರಿಜಿಸ್ಟ್ರೇಶನ್ ಸೇರಿದಂತೆ ಎಲ್ಲಾ ದಾಖಲೆಗಳು ಅಧೀಕೃತ ಇಲಾಖೆಯಿಂದ ನಿಮ್ಮ ಆ್ಯಪ್ಗೆ ವರ್ಗಾಯಿಸಬೇಕು. ಉದಾಹರಣೆಗೆ ಕರ್ನಾಟಕ ಸಾರಿಗೆ ಇಲಾಖೆ ಆಯ್ಕೆ ಮಾಡಿ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ನಮೂದಿಸಿದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಆ್ಯಪ್‌ಗೆ ವರ್ಗಾಣವಣೆಯಾಗಲಿದೆ.

ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಪರಿಗಣಿಸುವುದಿಲ್ಲ. ಪೊಲೀಸರು ಕೇಳಿದಾಗ ಡಿಜಿಲಾಕರ್ ಅಥವಾ mಪರಿವಾಹನ ಆ್ಯಪ್ ನಲ್ಲಿ ಸೇವ್ ಮಾಡಿದ ದಾಖಲೆಗಳನ್ನು ತೋರಿಸಿದರೆ ಸಾಕು. ಇದು ಆಧೀಕೃತ. ಟೆಕ್ನಾಲಜಿ ಆ್ಯಕ್ಟ್ 2000 ಪ್ರಕಾರ ಡಿಜಿಲಾಕರ್ ಅಥವಾ mಪರಿವಾಹನ ಆ್ಯಪ್‌ನಲ್ಲಿ ಸೇವ್ ಮಾಡಿದ ದಾಖಲೆಗಳನ್ನು ಮೂಲ ಪ್ರತಿ ಎಂದು ಪರಿಗಣಿಸಲಾಗುತ್ತೆ ಎಂದು ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾಲಿನಿಂದ ಬೆಳಕಾಗುವ ಪರಿ. ಇದೇನಿದು ಹಾಲಿನಿಂದ ಬೆಳಕೇ? ಸಂಸ್ಕೃತದಲ್ಲಿ ಒಂದು ಕಥೆ ಇದೆ. ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ. ಆಗ ಹಾಲು ಹೇಳಿತಂತೆ. ದೇವರೇ ನಾನು ಹಾಲು ಆಕಳು ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ. ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ. ನನಗೆ ಹಾಲಾಗೇ ಇರುವಂತೆ ವರ ಕೊಡು ಎಂದು ಬೇಡಿಕೊಂಡಿತಂತೆ. ಆಗ ದೇವರು ನಕ್ಕು ಎಲೈ ಹಾಲೇ…
ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ…
ಮುಖದ ಮೇಲೆ ಒಂದು ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ಮುಖವೆಲ್ಲ ಕಲೆಯಾದ್ರೆ ಸೌಂದರ್ಯ ಹಾಳಾಗುತ್ತದೆ. ಕಲೆ ಹೋಗಲಾಡಿಸಿ ಸುಂದರ ಮುಖಕ್ಕಾಗಿ ಜನರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಅದ್ರ ಬದಲು ದಿನದಲ್ಲಿ 5 ನಿಮಿಷ ಈ ಮನೆ ಔಷಧಿ ಬಳಸಿದ್ರೆ ಮುಖ ಸುಂದರವಾಗಿ, ಆಕರ್ಷಕವಾಗಿ ಕಾಣುತ್ತದೆ. ಮೂಲಂಗಿ :- ಮುಖದ ಮೇಲಿರುವ ಕಪ್ಪು ಕಲೆಗಳನ್ನು ಮೂಲಂಗಿ ದೂರ ಮಾಡುತ್ತದೆ. ಪ್ರತಿ ದಿನ ಮೂಲಂಗಿ ರಸವನ್ನು ಮುಖಕ್ಕೆ ಹಚ್ಚಿ. ಕೆಲ ಸಮಯ ಬಿಟ್ಟು ಮುಖ ತೊಳೆಯಿರಿ. ಮಜ್ಜಿಗೆ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, 17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. 4 ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ…
ಗಾಯಕ ಚಂದನ್ ಶೆಟ್ಟಿ ಅವರು ಯುವದಸರಾ ವೇದಿಕೆಯಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಭಾರಿ ವಿರೋಧಕ್ಕೆ ಗುರಿಯಾಗಿತ್ತು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಿಗ್ ಮನೆಯಲ್ಲಿ ಇಬ್ಬರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಫ್ರೆಂಡ್ ಷಿಪ್ ಮುಂದುವರಿಸಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರುಕನ್ನಡ ರ್ಯಾಪರ್,…
ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ…