ಸುದ್ದಿ

ಮುಚ್ಚುವ ಅಂತದಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ: ರಿಷಬ್ ದತ್ತು ಪಡೆದ ಶಾಲೆ ಈಗ ಹೇಗಿದೆ ಗೊತ್ತ..?

62

ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು” ಸಿನಿಮಾ ಮೂಲಕ ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದರು. ಶೆಟ್ಟರ ಸರ್ಕಾರಿ ಶಾಲೆಗೆ ಎಲ್ಲಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ಮಾಡಿ, ಸಿನಿಮಾ ಸಕ್ಸಸ್ ಆದ ನಂತರ ಸೈಲೆಂಟ್ ಆಗದ ರಿಷಬ್, ಚಿತ್ರೀಕರಣ ಮಾಡಿದ ಶಾಲೆಯನ್ನು ದತ್ತು ಪಡೆದಿದ್ದರು. ಶಾಲೆ ಅಳಿವಿನ ಅಂಚಿನಲ್ಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಶಾಲೆಗೆ ಮರುಜೀವ ನೀಡಲು ಮುಂದಾಗಿದ್ದರು. ಈಗ ಆ ಶಾಲೆಯನ್ನು ಮಾದರಿಶಾಲೆಯಾಗಿ ರೂಪಿಸಿದ್ದಾರೆ.

ಚಿತ್ರೀಕರಣ ಸಮಯದಲ್ಲಿ ಶಾಲೆಯಲ್ಲಿ 42 ಮಕ್ಕಳು ಇದ್ದರಂತೆ. ಆ ನಂತರ ಶಾಲೆಯಲ್ಲಿಕೇವಲ 17 ಮಕ್ಕಳು ಮಾತ್ರ ಉಳಿದ್ದರು. ಇನ್ನೇನು ಶಾಲೆ ಮುಚ್ಚಿ ಹೋಗುತ್ತಿದೆ ಎನ್ನುವಷ್ಟೊತ್ತಿಗೆ ರಿಷಬ್ಶಾಲೆಯನ್ನು ಕಾಪಾಡಿ ಉಳಿಸಿಕೊಂಡಿದ್ದಾರೆ. ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದಾರೆ. ಶಾಲೆಯನ್ನು ಸಂಪೂರ್ಣವಾಗಿನವೀಕರಿಸಿದ್ದಾರೆ. ಅಲ್ಲದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಉತ್ತಮ ಶಿಕ್ಷಕರು ಹೀಗೆ ಸಾಕಷ್ಟು ರೀತಿಯಲ್ಲಿಶಾಲೆಯನ್ನು ಬದಲಾಯಿಸಿದ್ದಾರೆ ರಿಷಬ್ ಮತ್ತು ತಂಡ. 17 ಮಕ್ಕಳಿದ್ದ ಶಾಲೆಯಲ್ಲೀಗ 84 ಜನ ವಿದ್ಯಾರ್ಥಿಗಳಿದ್ದಾರೆ.ಇನ್ನು ಎರಡು ವರ್ಷಗಳಲ್ಲಿ ಮಕ್ಕಳ ಸಂಖ್ಯೆ 300ಕ್ಕೆ ಏರಿಕೆಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆರಿಷಬ್.

ರಿಷಬ್ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದರೀತಿಯಲ್ಲೆ, ನಿಜಜೀವನದಲ್ಲೂ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ರಕ್ಷಿಸಿ ಹೊಸ ರೂಪ ನೀಡಿದ್ದಾರೆ.ಇದೊಂದೆ ಶಾಲೆಯಲ್ಲ ಕರ್ನಾಟಕದಲ್ಲಿ ಇಂತಹ ಸಾಕಷ್ಟು ಕನ್ನಡ ಮಾಧ್ಯಮದ ಶಾಲೆಗಳು ಅಳಿವಿನ ಅಂಚಿನಲ್ಲಿವೆ.ರಿಷಬ್ ಕನ್ನಡ ಶಾಲೆ ಉಳಿಸಿ ಎನ್ನುವ ಅಭಿಯಾನ ಕೂಡ ಶುರುಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೂವರ ಹೆಂಡಿರ ಗಂಡ, ಈ ಕುಬೇರ ಭಿಕ್ಷುಕನ ತಿಂಗಳ ಸಂಪಾದನೆ ಕೇಳಿದ್ರೆ…

    ನಿಮಗೆ ಗೊತ್ತಿರುವ ಹಾಗೆ, ಒಂದು ಒಳ್ಳೆ ಕೆಲಸ ಇದ್ರುನು, ಒಂದು ಮದುವೆ ಆಗಿ, ಒಬ್ಬ ಹೆಂಡತಿಯನ್ನು ಸಾಕುವುದೇ ತುಂಬಾ ಕಷ್ಟ,ಒಬ್ಬ ಹೆಂಡತಿಯ ಬೇಕು ಬೇಡಗಳನ್ನೇ ಇಡೇರಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ, ಇಲ್ಲೊಬ್ಬ ಮಹಾನುಭಾವ, ಅದರಲ್ಲಿ ಅಂಗವೈಕಲ್ಯತೆ ಹೊಂದಿರುವ ಭಿಕ್ಷುಕನೊಬ್ಬ,

  • ಉಪಯುಕ್ತ ಮಾಹಿತಿ

    ಇಂತಹದೆನಾದ್ರು ನಿಮ್ಮ ಮನೆಯಲ್ಲಿ ಕಂಡುಬಂದ್ರೆ ಅವುಗಳಿಂದ ತುಂಬಾ ಹುಷಾರಾಗಿರಿ..!ತಿಳಿಯಲು ಮುಂದೆ ಓದಿ…

    ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ

  • ಸುದ್ದಿ

    ಬೈಕ್ ಚಾಲನೆ ಮಾಡಿಕೊಂಡು ‘ಸೆಲ್ಯೂಟ್’ ಮಾಡಿದ್ರೆ ಭಾರಿ ದಂಡ ಗ್ಯಾರಂಟಿ…!

    ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…

  • ಸುದ್ದಿ

    ಹಾವು ಕಚ್ಚಿ ಸ್ಮಶಾನ ಸೇರಿದವರ ಮನೆಯಲ್ಲಿ ನಾಗ-ನಾಗಿಣಿ ನೃತ್ಯ….ನಂತರ ಏನಾಯ್ತು ಗೊತ್ತ..?ತಪ್ಪದೆ ಇದನ್ನು ಓದಿ…!

    ಸತ್ತ ವ್ಯಕ್ತಿ ಜೀವಂತವಾಗಿ ಬರುವುದಿಲ್ಲ ಎನ್ನುವ ಮಾತಿದೆ. ಆದ್ರೆ ರಾಜಸ್ಥಾನದ ಭಾರತ್ಪುರದಲ್ಲಿ ಚಮತ್ಕಾರಿ ಘಟನೆ ನಡೆದಿದೆ. ಹಾವು ಕಚ್ಚಿ ಸ್ಮಶಾನ ಸೇರಿದ್ದವಳು ಮನೆಗೆ ವಾಪಸ್ ಆಗಿದ್ದಾಳೆ. ಆಕೆಗೆ ಚಿಕಿತ್ಸೆ ಮುಂದುವರೆದಿದೆ. 21 ವರ್ಷದ ಶ್ವೇತಾಗೆ ಹಾವು ಕಚ್ಚಿತ್ತು. ವೈದ್ಯರು ಶ್ವೇತಾ ಸಾವನ್ನಪ್ಪಿದ್ದಾಳೆ ಎಂದಿದ್ದರು. ದುಃಖದಲ್ಲಿದ್ದ ಕುಟುಂಬಸ್ಥರು ಶ್ವೇತಾ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಸ್ಮಶಾನಕ್ಕೆ ಶ್ವೇತಾ ಶವವನ್ನು ತೆಗೆದುಕೊಂಡು ಹೋಗ್ತಿದ್ದಂತೆ ಮನೆಯಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿತ್ತು. ಶ್ವೇತಾ ಮನೆಯಲ್ಲಿ ನಾಗ-ನಾಗಿಣಿ ನೃತ್ಯ ಮಾಡಿದ್ದಾರೆ. ಈ ವಿಷ್ಯವನ್ನು ಸ್ಮಶಾನಕ್ಕೆ…

  • ಸುದ್ದಿ

    ಇದೇನಿದು ಶಾಕ್; ಬಿಗ್ ಬಾಸ್ ಮನೆಯಲ್ಲಿ ಎಂದು ನಡೆದಿಲ್ಲ,ಸ್ಪರ್ಧಿಗಳಿಬ್ಬರ ರೊಮ್ಯಾನ್ಸ್ ಯಾರು ಗೊತ್ತೇ?

     ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು…

  • ಸುದ್ದಿ

    ಕರ್ನಾಟಕಕ್ಕೆ ಮೊಟ್ಟ ಮೊದಲ ಬಾರಿಗೆ ಸಿಗಲಿದೆ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ….!

    ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುತೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ. ಪ್ರಸ್ತುತ ಕೆ.ಆರ್ ಪುರಂ ನಲ್ಲಿರುವ ಡೀಸೆಲ್ ಲೋಕೋ ಶೆಡ್ ನ್ನು ಎಲೆಕ್ಟ್ರಿಕ್ ಲೋಕೋ ಶೆಡ್ ನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಸ್ಥಾಪನೆಯಾಗಲಿದೆ. ಬೆಂಗಳೂರು ಮೂಲದ ಬಾಲಾಜಿ ಬಿಲ್ಡರ್ಸ್ ಗೆ ಈ ಗುತ್ತಿಗೆ ಲಭ್ಯವಾಗಿದ್ದು, ವರ್ಷಾಂತ್ಯ ಅಥವಾ 2020 ರ ಜನವರಿಗೆ ಕಾಮಗಾರಿ…