ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭೂ ವ್ಯವಹಾರ ಪ್ರಕ್ರಿಯೆಯನ್ನು ಸರಳ ಹಾಗೂ ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಜಮೀನಿನ ಎಲ್ಲಾ ಮಾಹಿತಿಯನ್ನೊಳಗೊಂಡ ಆಧಾರ್ ರೀತಿಯ ವಿಶಿಷ್ಟಗುರುತಿನ ಸಂಖ್ಯೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಿರಾಸ್ತಿಗೂ ಬರಲಿದೆ ಆಧಾರ್ ರೀತಿ ವಿಶಿಷ್ಟಗುರುತಿನ ಸಂಖ್ಯೆ| ವಿಶಿಷ್ಟಗುರುತಿನ ಸಂಖ್ಯೆಯಲ್ಲಿ ಜಾಗದ ಎಲ್ಲಾ ಮಾಹಿತಿ| ಭೂ ವ್ಯವಹಾರ ಸುಲಭ ಹಾಗೂ ಪಾರದರ್ಶಕಕ್ಕೆ ನೆರವು| ಬೆರಳ ತುದಿಯಲ್ಲಿ ಭೂ ದಾಖಲೆ, ಬೇನಾಮಿ ಆಸ್ತಿಗೆ ಬ್ರೇಕ್| ರೈತರಿಗೆ ಸುಲಭ ಸಾಲ ಸೌಲಭ್ಯ, ಭೂ ತಕರಾರುಗಳ ಶೀಘ್ರ ಇತ್ಯರ್ಥ ಸಾಧ್ಯ| ವಿಕೋಪ ಸಂದರ್ಭ ಪರಿಹಾರ ಹಂಚಿಕೆಯೂ ಸರಳ.

ಈ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಹಾಗೂ ಕಂದಾಯ ನ್ಯಾಯಾಲಯ ವ್ಯವಸ್ಥೆ ಸಂಖ್ಯೆಯನ್ನು ಜೋಡಣೆಗೊಳಿಸುವುದರಿಂದ, ಭೂ ಮಾಲಿಕ, ವಿಳಾಸ, ವಿಸ್ತೀರ್ಣ ಸೇರಿ ಜಮೀನಿನ ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆ ಈಗಾಗಲೇ ಕೆಲಸ ಆರಂಭಿಸಿದೆ. ಸರ್ಕಾರದ ಈ ಯೋಜನೆಯಿಂದ ಭೂ ದಾಖಲೆಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುವುದರಿಂದ ಭೂ ಮಾಲಿಕರ ಮಾಹಿತಿ ಪತ್ತೆ ಹಚ್ಚುವುದು ಸುಲಭವಾಗಲಿದೆ. ಜತೆಗೆ ಭೂ ವ್ಯವಹಾರ, ಆಸ್ತಿ ತೆರಿಗೆ ಸಂಗ್ರಹ, ಸಾರ್ವಜನಿಕ ಯೋಜನೆಗಳಿಗೆ ಭೂ ಸ್ವಾಧೀನ, ಆಸ್ತಿ ತೆರಿಗೆ ಸಮಸ್ಯೆಗಳ ಪರಿಹಾರ ಹಾಗೂ ಪ್ರಾಕೃತಿಕ ವಿಕೋಪದ ವೇಳೆ ಪರಿಹಾರ ಹಂಚಿಕೆಯೂ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಶಿಷ್ಟಸಂಖ್ಯೆ ಮೂಲಕ ಜಮೀನಿನ ಹಿಂದಿನ ಮಾಲೀಕರ ಮಾಹಿತಿಯೂ ದೊರೆಯಲಿದ್ದು, ಭೂ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿದೆ. ಮಾಲಿಕತ್ವ ವಿವಾದದಿಂದ ಹೂಡಿಕೆಗೆ ಹಿಂಜರಿಯುವ ಸಮಸ್ಯೆ ಕೂಡ ಇದರಿಂದ ಪರಿಹಾರವಾಗಲಿದ್ದು, ಹೆಚ್ಚಿನ ವಿದೇಶಿ ಬಂಡವಾಳ ಆಕರ್ಷಿಸಲಿದೆ. ಅಲ್ಲದೇ ಬೇನಾಮಿ ಆಸ್ತಿಗಳ ಬಗ್ಗೆಯೂ ಸರ್ಕಾರಕ್ಕೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ. ಜತೆಗೆ ಜಮೀನು ಅಡವಿಟ್ಟು ಸಾಲ ಪಡೆಯಲು ರೈತರ ಬವಣೆಯನ್ನು ಇದು ಕಡಿಮೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೇಶದೆಲ್ಲೆಡೆ ಕಳೆದ 20 ವರ್ಷಗಳಿಂದ ಭೂ ವಿವಾದ ಸಂಬಂಧ ಎರಡನೇ ಮೂರರಷ್ಟುಪ್ರಕರಣಗಳು ನ್ಯಾಯಾಲಯದಲ್ಲಿ ಕೊಳೆಯುತ್ತಿದ್ದು, ಈ ಯೋಜನೆಯಿಂದ ಅವುಗಳ ಶೀಘ್ರ ವಿಲೆ ಕೂಡ ನಡೆಯಲಿದೆ. ಸರ್ಕಾರ ಈಗಾಗಲೇ ಡಿಜಿಟಲ್ ಇಂಡಿಯಾ ಯೋಜನೆಯಡಿ ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರೀಯೆ ಆರಂಭಿಸಿದ್ದರೂ, ಅದಕ್ಕೆ ಮಿಶ್ರ ಪ್ರಕ್ರೀಯೆ ವ್ಯಕ್ತವಾಗಿತ್ತು. ಇದೀಗ ಈ ಹೊಸ ಯೋಜನೆಯಿಂದ ಭೂ ವ್ಯವಹಾರ ಸಂಬಂಧ ಎಲ್ಲಾ ಪ್ರಕ್ರೀಯೆಗಳು ಸರಳವಾಗಲಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಟ್ಟವಾದ ರೇಷಿಮೆಯಂತಹ ಕೂದಲು ನೋಡಿದರೆ ಕಣ್ಮನ ಸೆಳೆಯುತ್ತದೆ. ಸುಂದರ ಕೇಶ ಯಾವ ಮೇಕಪ್ ಮತ್ತು ಆಭರಣಗಳು ನೀಡದಂತಹ ಮೆರುಗನ್ನು ನೀಡುತ್ತದೆ. ನಿದಾನವಾಗಿ ತಲೆಬಾಚಲು ಸಹ ಸಮಯ ಸಿಗದ ಇಂದಿನ ದಿನಗಳಲ್ಲಿ ಕೇಶಕ್ಕಾಗಿ ಆರೈಕೆ ತುಸು ಕಷ್ಟವೇ.
ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.
ಅಷ್ಟವಿನಾಯಕ ದೇವಾಲಯಗಳಲ್ಲಿ ಪನ್ವೆಲ್ನಲ್ಲಿರುವ ಬಲ್ಲಾಲೇಶ್ವರ ದೇವಾಲಯವು ಪ್ರಮುಖವಾದದ್ದು, ಬ್ರಾಹ್ಮಣ ರೂಪದಲ್ಲಿರುವ ಗಣೇಶನ ವಿಶೇಷತೆ ಬಗ್ಗೆ ತಿಳಿಯಿರಿ. ಮುಂಬೈಯಲ್ಲಿರುವ ಪನ್ವೆಲ್ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ ನೀಲಿ ಮತ್ತು ಹಳದಿ ರಚನೆಯು ದೇವಾಲಯವನ್ನು ಹೋಲುವಂತಿಲ್ಲ, ಆದರೆ ಗಣೇಶ ಭಕ್ತರು ಮತ್ತು ನಿವಾಸಿಗಳು ಇದನ್ನು ಪನ್ವೆಲ್ನ ಅತ್ಯಂತ ಹಳೆಯ, ವಿಶೇಷ ಪೂಜಾ ಸ್ಥಳವೆಂದು ಪರಿಗಣಿಸಿದ್ದಾರೆ. ಮುಂಬೈಯಲ್ಲಿರುವ ಪನ್ವೆಲ್ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ…
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
ಬೆಂಗಳೂರು, ಟಿಪ್ಪು ಜಯಂತಿ ಪ್ರತಿ ವರ್ಷವೂ ಒಂದಲ್ಲಾ ಒಂದು ವಿವಾದದಿಂದ್ಲೇ ಸುದ್ದಿಯಾಗೋ ವಿಷ್ಯವಿದು. ಇದನ್ನೇ ಮುಂದಿಟ್ಕೊಂಡು ಹಲವರು ವೋಟ್ ಬ್ಯಾಂಕ್ ರಾಜಕೀಯ ಮಾಡಿದ್ದೂ ಇದೆ. ಮೂರು ವರ್ಷದ ಹಿಂದೆ ಆಚರಣೆಗೆ ಬಂದಿದ್ದ ಟಿಪ್ಪು ಜಯಂತಿಗೀಗ ಬ್ರೇಕ್ ಬಿದ್ದಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೇರ್ತಿದ್ದಂತೆ ವಿವಾದಿತ ಟಿಪ್ಪು ಜಯಂತಿಗೆ ಬ್ರೇಕ್ಹಾಕಿದ್ದಾರೆ. ಇನ್ಮುಂದೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಅಂತಾ ಹುಕುಂ ಹೊರಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿಗೆ ಮುನ್ನುಡಿ ಇಟ್ಟಿತ್ತು. ಇದ್ರಂತೆಯೇ…
ಹಗಲಿಡಿ ಸ್ಮಾರ್ಟ್ ಫೋನ್ ಬಳಸಿ ಮತ್ತು ರಾತ್ರಿ ಹೊತ್ತು ಮಲಗುವ ಮುಂಚೆಯೂ ಸ್ಮಾರ್ಟ್ ಫೋನ್ ಬಳಸುವುದರಿಂದ ನಿಮ್ಮ ಸುಖ ನಿದ್ದೆಗೆ ಭಂಗ ಖಂಡಿತ ಬರುತ್ತದೆ. ನಮ್ಮ ಜೀವನ ಶೈಲಿಯೇ ಹಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ ಅತ್ಯುತ್ತಮವಾದ ನಿದ್ದೆ ಬೇಕು. ಆದರೆ,ಹೆಚ್ಚುತ್ತಿರುವ ಸ್ಮಾರ್ಟ್ಫೋನ್ ಬಳಕೆಯಿಂದ ನಮ್ಮ ನಿದ್ರೆಯ ಪ್ಯಾಟರ್ನ್ ಕೂಡ ಬದಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 9 ಗಂಟೆಯಾದರೂ ನಿದ್ರೆ ಮಾಡಬೇಕು. ಕೆಲಸ ಮಾಡುವಾಗ ನಾವು ಬಹುತೇಕ ಸಮಯವನ್ನು ಕಂಪ್ಯೂಟರ್ ಸ್ಕ್ರೀನ್ ನೋಡಿಕೊಂಡೇ ಇರುತ್ತೇವೆ ಮತ್ತು ಕೆಲಸ ಇಲ್ಲದಿದ್ದಾಗ…