ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿವೆ.

ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಒಳಗೆ ಕುಟುಂಬದ ಆದಾಯ ನಿಗದಿಪಡಿಸಿದೆ. ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ.

ನೌಕರರು, ವರ್ತಕರು, ಅಂಗಡಿಗಳ ಮಾಲೀಕರು, ಗುತ್ತಿಗೆದಾರರು ಹೀಗೆ ಆರ್ಥಿಕವಾಗಿ ಸಬಲರಾದವರು ಕೂಡ ನಕಲಿ ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆನ್ನಲಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಸದೃಢರು 2019ರ ಸೆಪ್ಟೆಂಬರ್ 30ರ ಒಳಗೆ ಕಾರ್ಡ್ ವಾಪಸ್ ಮಾಡಬೇಕು. ಇಲ್ಲವೇ ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆಮಾಡಿ ಅವರು ಎಷ್ಟು ದಿನದಿಂದ ಅಕ್ಕಿ ಪಡೆದಿದ್ದಾರೆ ಎಂಬುದನ್ನು ಲೆಕ್ಕಹಾಕಿ ಮುಕ್ತ ಮಾರುಕಟ್ಟೆ ದರ ಒಂದು ಕೆಜಿಗೆ 35 ರೂ. ನಂತೆ ದಂಡ ವಸೂಲಿ ಮಾಡಲಾಗುವುದು. ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತವು ಚೀನಾದ ಒಪ್ಪೋ, ಷಿಯಾಮಿ, ಜಿಯೋನಿ, ಕಂಪನಿಗಳಿಗೆ ನೋಟಿಸ್ ನೀಡಿದೆ. ಮತ್ತು ಕೇಂದ್ರ ಸರ್ಕಾರವು , ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ಕಂಪನಿಗಳಲ್ಲಿ ವಿವರಣೆ ಕೇಳಿದೆ.
ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಿಡುಗಡೆ ಪೂರ್ವದಲ್ಲಿ ಯಾವ ಖದರಿನೊಂದಿಗೆ ಸಾಗಿ ಬಂದಿತ್ತೋ ಅದನ್ನೇ ಮೀರಿಸುವಂತೆ ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ. ಈ ಮೂಲಕ ನಾಯಕ ಶ್ರೀಮುರಳಿ ಮತ್ತು ಶ್ರೀಲೀಲಾ ಜೋಡಿ ದೊಡ್ಡ ಮಟ್ಟದಲ್ಲಿಯೇ ಕಮಾಲ್ ಮಾಡಿದೆ. ಓರ್ವ ನಿರ್ದೇಶಕನಾಗಿ ಚೇತನ್ ಕುಮಾರ್ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ನಿರ್ಮಾಪಕ ಸುಪ್ರೀತ್ ಅವರ ಕಣ್ಣುಗಳಲ್ಲಿಯೂ ಮಹಾ ಗೆಲುವಿನ ಖುಷಿ ಸ್ಪಷ್ಟವಾಗಿಯೇ ಫಳ ಫಳಿಸುತ್ತಿದೆ.ಇದು…
ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…
ಪರಿಸರದ ಎದುರು ಯಾರೂ ದೊಡ್ಡವರಲ್ಲ. ಈ ಮಾತು ಮನುಷ್ಯರಿಗಲ್ಲ ದೇವರಿಗೂ ಅನ್ವಯಿಸುತ್ತೆ. ವಾಯು ಮಾಲಿನ್ಯಕ್ಕೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಮನೆಯಿಂದ ಹೊರ ಬರುವುದಕ್ಕೂ ಮೊದಲು ಮುಖಕ್ಕೆ ಮಾಸ್ಕ್ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಉತ್ತರ ಭಾರತದಲ್ಲಂತೂ ಇದೊಂದು ಸಂಪ್ರದಾಯದಂತೆ ಆಗಿ ಬಿಟ್ಟಿದೆ. ಉತ್ತರ ಪ್ರದೇಶದಲ್ಲಿ ದೇವರಿಗೂ ಪರಿಸರ ಮಾಲಿನ್ಯದ ಪ್ರಭಾವ ತಟ್ಟಿದೆ. ಇಂಥದೊಂದು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿದ್ದೇ ವಾರಣಾಸಿಯಲ್ಲಿ ನಡೆದಿರುವ ಈ ಘಟನೆ. ನವದೆಹಲಿಯಲ್ಲಿ ಪರಿಸರ ಹದಗೆಟ್ಟು ಹೋಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ದೆಹಲಿಯಲ್ಲಿ ಜನರು ಮುಖಕ್ಕೆ…
ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.
ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ 1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ. ಆದಾಯ ತೆರಿಗೆ ಕಾಯ್ದೆ 139 ಎಎ…