ಸುದ್ದಿ

ಹೈಕೋರ್ಟ್ ಮಹತ್ವದ ತೀರ್ಪು:LLR ಇದ್ದರೂ ಅಪಘಾತವಾದ ವೇಳೆ ಪರಿಹಾರ ನೀಡಬೇಕು…!

57

ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ.

ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ ಅನ್ವಯಿಸಬೇಕು ಎಂದು ನ್ಯಾಯಪೀಠ ಹೇಳಿದ್ದು, ಎಲ್ಎಲ್ಆರ್ ಅಧಿಕೃತ ದಾಖಲೆ ಎಂದು ಪರಿಗಣಿಸಿ ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಕಂಪನಿ ಪರಿಹಾರ ನೀಡಬೇಕು ಎಂದು ಸೂಚಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೊಂದು ಸಂತಸದ ಸುದ್ದಿ…!

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ಐ ಲವ್ ಯು’ ಭರ್ಜರಿ ಯಶಸ್ಸು ಕಂಡಿದೆ. ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ. ಈ ಹಿಂದೆ ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ಬ್ರಹ್ಮ, ನಂತರ ‘ಐ ಲವ್ ಯು’ ಯಶಸ್ಸು ಕಂಡಿದ್ದು, ಮುಂದಿನ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಅಂದ ಹಾಗೆ, ಈ ಹೊಸ ಚಿತ್ರ ಭೂಗತ ಜಗತ್ತಿನ ಕಥಾಹಂದರವನ್ನು ಹೊಂದಿದ್ದು, ಘಟಾನುಘಟಿ ಕಲಾವಿದರು ಅಭಿನಯಿಸಲಿದ್ದಾರೆ. ಹೈಬಜೆಟ್ ನಲ್ಲಿ…

  • ಜೀವನಶೈಲಿ

    ತನ್ನ ಸಂಗಾತಿ ಜೋತೆಗಿದ್ರೂ ಬೇರೆ ಹುಡುಗಿಯರನ್ನು ನೋಡುವ ಅಭ್ಯಾಸ ಏಕೆ ಗೊತ್ತಾ..?

    ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ ತೆಗೆದುಕೊಂಡ್ರೆ ಓಕೆ, ಇಲ್ಲದೇ ಇದ್ರೆ ಬ್ರೇಕಪ್ ಕೂಡ ಆಗಿಬಿಡಬಹುದು. ಎಂಥಾ ಸುದೀರ್ಘ ಕಾಲದ ಪ್ರೇಮಮಯ ಸಂಬಂಧವಾಗಿದ್ರೂ ಇತರರ ಕಡೆಗೆ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಸಂಶೋಧಕರು. ಯಾಕೆ ಎಲ್ಲರೂ ಈ ರೀತಿ ಮಾಡ್ತಾರೆ ಅನ್ನೋದಕ್ಕೆ ಕೂಡ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಹಜ. ಮಹಿಳೆ ಸಾಮಾನ್ಯವಾಗಿ…

  • ಸುದ್ದಿ

    ಅನಾಮಧೇಯ 40 ಲಕ್ಷ ರೂ. ಬ್ಯಾಂಕಿಗೆ ಬಂತೆಂದು ಎಗ್ಗಿಲ್ಲದೆ ಖರ್ಚು ಮಾಡಿದ ದಂಪತಿಗೆ ಮುಂದೆ ಕಾದಿತ್ತು ಶಿಕ್ಷೆ!

    ಚೆನ್ನೈ,  ತಮ್ಮ ಬ್ಯಾಂಕ್ ಖಾತೆಗೆ ಅನಾಮಧೇಯವಾಗಿ ಬಂದ 40 ಲಕ್ಷ ರೂ. ಹಣವನ್ನು ಖರ್ಚು ಮಾಡಿದ ಕಾರಣಕ್ಕಾಗಿ ಸ್ಥಳೀಯ ಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿದ ಘಟನೆ ತಮಿಳುನಾಡಿನ ತಿರುಪೂರಿನಲ್ಲಿ ನಡೆದಿದೆ. ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ. ಗುಣಶೇಖರನ್ ಹಾಗೂ ಆತನ ಪತ್ನಿ ರಾಧಾ ಶಿಕ್ಷೆಗೆ ಒಳಗಾಗಿರುವ ದಂಪತಿ. 2012ರಲ್ಲಿ ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ.ಗುಣಶೇಖರನ್ ಎಂಬುವವರ ಅಕೌಂಟಿಗೆ ಅನಾಮಧೇಯವಾಗಿ 40 ಲಕ್ಷ ರೂ. ಜಮೆಯಾಗಿತ್ತು. ಹಣ ಬಂದ ಖುಷಿಗೆ ಎಲ್ಲಿಂದ…

  • ಆಧ್ಯಾತ್ಮ, ಉಪಯುಕ್ತ ಮಾಹಿತಿ

    ದೇವರಿಗೆ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು ಏಕೆ ಗೊತ್ತಾ?ಇದರ ಹಿಂದೆ ಕಾರಣ…

    ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…

  • ಸುದ್ದಿ

    29 ವರ್ಷದ ಯುವಕನ ದೇಹದಲ್ಲಿತ್ತು ಗರ್ಭಕೋಶ …ನಂತರ ಏನಾಯ್ತು?

    ಮುಂಬಯಿಯ ಜೆ.ಜೆ. ಹಾಸ್ಪಿಟಲ್‌ಗೆ ಕಳೆದ ತಿಂಗಳು 29 ವರ್ಷದ ಯುವಕನೊಬ್ಬ ಬಂದಿದ್ದ. ಅವನ ಸಮಸ್ಯೆ ಬಂಜೆತನ. ಪರೀಕ್ಷೆ ವೇಳೆ ಆತನ ವೃಷಣ ಹೊಟ್ಟೆಯೊಳಗಿರುವುದು ಕಂಡುಬಂತು! ಯಾಕೆ ಹೀಗಿದೆ ಎಂದು ಎಂಆರ್‌ಐ ನಡೆಸಿದಾಗ ಕಂಡದ್ದೇ ಬೇರೆ! ಯುವಕನ ದೇಹದಲ್ಲಿ ಸ್ತ್ರೀಯರಲ್ಲಿ ಇರುವ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳೆಲ್ಲವೂ ಇದ್ದವು! ಅಂದರೆ, ಗರ್ಭಕೋಶ, ಫ್ಯಾಲೋಪಿಯನ್‌ ನಳಿಗೆಳು, ಗರ್ಭಾಶಯ ಮಾತ್ರವಲ್ಲ ಅರೆಬರೆಯಾದ ಮರ್ಮಾಂಗವೂ ಇತ್ತು! ಹಾಗಂತ ಇವ್ಯಾವುವೂ ಕೆಲಸ ಮಾಡುತ್ತಿರಲಿಲ್ಲ. ಮೂತ್ರ ಸಂಬಂಧಿ ಸಮಸ್ಯೆಗಳ ವಿಭಾಗದ ಸರ್ಜನ್‌ ಡಾ. ವೆಂಕಟ್‌ ಗೀತೆ ಅವರಲ್ಲಿಗೆ…

  • ಸುದ್ದಿ

    ಅಸ್ಸಾಂನ 700 ಹಳ್ಳಿ ಜಲಾವೃತ-ಅಪಾಯದ ತುದಿ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ…..ಜನ ಜೀವನ ಅಸ್ತ ವ್ಯಸ್ತ….!

    ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ…