ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೈದರಾಬಾದ್, ಮಕ್ಕಳು ಪಡೆಯಬೇಕೆಂಬ ಬಯಕೆ ಸಾಮಾನ್ಯವಾಗಿ ಎಲ್ಲಾ ತಾಯಿಯರಿಗೂ ಇರುತ್ತದೆ. ಆದರೆ ಒಂದು ವಯಸ್ಸಿನ ಮಿತಿಯಿರುತ್ತದೆ. ಸಾಮಾನ್ಯವಾಗಿ 50 ವಯಸ್ಸಿನ ನಂತರ ಮೆನೋಪಾಸ್ ಹಂತ ತಲುಪಿದ ಬಳಿಕ ಮಹಿಳೆಯರಿಗೆ ಗರ್ಭ ಧರಿಸುವುದು ಸಾಧ್ಯವಾಗುವುದಿಲ್ಲ. ಮೊಮ್ಮಕ್ಕಳು, ಮುಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದ್ರಾಕ್ಷಾರಾಮಮ್ ಬ್ಲಾಕ್ನ ನೆಲಪಾರ್ತಿಪಾಡು ಗ್ರಾಮದ ಈರಮಟ್ಟಿ ಮಂಗಯಮ್ಮ ಎಂಬ 74ರ ಅಜ್ಜಿ ಮದುವೆಯಾದ 54 ವರ್ಷಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಅತೀ ಹಿರಿಯ ವಯಸ್ಸಿನಲ್ಲಿ ಮಕ್ಕಳನ್ನು ಹಡೆದರೆಂಬ ಖ್ಯಾತಿಗೆ ಈ ಅಜ್ಜಿ ಪಾತ್ರರಾಗಿದ್ದಾರೆ. ಈ ಮೊದಲು ಪಂಜಾಬಿನ ಅಮೃತ್ ಸರದ 72ರ ವಯಸ್ಸಿನ ದಾಲ್ಜಿಂದರ್ ಕೌರ್ ಎಂಬುವವರು ಮಗುವಿಗೆ ಜನ್ಮ ನೀಡಿದ್ದರು. ಈರಮಟ್ಟಿ ಮಂಗಯಮ್ಮ ಆ ದಾಖಲೆಯನ್ನು ಮುರಿದಿದ್ದಾರೆ.ಇ. ರಾಜಾರಾವ್ (80) ಜತೆ 57 ವರ್ಷಗಳ ಹಿಂದೆ ಮಂಗಮ್ಮ ಮದುವೆಯಾಗಿದ್ದರು. ಅಂದಿನಿಂದ ಇವರಿಗೆ ಮಕ್ಕಳನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಹಲವು ವರ್ಷಗಳಿಂದ ಈ ದಂಪತಿ ಹರಕೆ ಹೊರದ ದೇವರಿಲ್ಲ, ಹೋಗದ ಆಸ್ಪತ್ರೆಗಳಿಲ್ಲ. ಏನೆ ಮಾಡಿದರೂ ಮಕ್ಕಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

74ರಲ್ಲಿ ಕನಸು ನನಸಾಯ್ತು
ವಯಸ್ಸು 70 ದಾಟಿದರೂ ಮಕ್ಕಳನ್ನು ಪಡೆಯುವ ಆಸೆ ಕೈಬಿಟ್ಟಿರಲಿಲ್ಲ.ಇದೇ ಕೊರಗಿನಲ್ಲಿರುವಾಗ ತಮ್ಮ ಮನೆಯ ಬಳಿಯ ಮಹಿಳೆಯೊಬ್ಬರು ಇನ್ವರ್ಟೋ ಫರ್ಟಿಲೈಷೇಷನ್ (ಐವಿಎಫ್) ಮೂಲಕ ಮಗು ಪಡೆದ ಸುದ್ದಿ ಕೇಳಿದ ಮಂಗಯಮ್ಮ ಇದೇ ಪದ್ಧತಿಯಲ್ಲಿ ಮಗುವನ್ನು ಹೊಂದಲು ಆಸೆ ಚಿಗುರೊಡೆಸಿಕೊಂಡಿದ್ದಾರೆ.ಈಗಿನ ಆಧುನಿಕ ತಂತ್ರಜ್ಞಾನವಿರುವ ವಿಟ್ರೊ ಫಲೀಕರಣ (ಐವಿಎಫ್), ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯಾಣು ಇಂಜೆಕ್ಷನ್ (ಐಸಿಎಸ್ಐ), ಕ್ರಯೋಪ್ರೆಸರ್ವೇಶನ್ ಚಿಕಿತ್ಸೆಯ ಮೂಲಕ ಅವಧಿ ಮೀರಿದ ನಂತರವು ಮಕ್ಕಳನ್ನು ಪಡೆಯಬಹುದು ಎಂದು ಹೈದರಾಬಾದ್ನ ಕೊತ್ತಾಪೇಟ್ನ ಅಹಲ್ಯಾ ಹಾಸ್ಪಿಟಲ್ನ ನಿರ್ದೇಶಕ ಡಾ. ಸನಕಯ್ಯಾಲ ಉಮಾಶಂಕರ್ ಮಾಹಿತಿ ನೀಡಿದ್ದಾರೆ.

ವೈದ್ಯರ ಸಲಹೆ ಮೆರೆಗೆ ಮಗು ಪಡೆಯಲು ನಿರ್ಧರಿಸಿದ್ದಾರೆ. ಆದರೆ 50 ವರ್ಷದ ನಂತರ ಮಹಿಳೆಯರಲ್ಲಿ ಮುಟ್ಟಿನ ಋತುಚಕ್ರವು ಕೊನೆಗೊಳ್ಳುತ್ತದೆ.ಆಗ ಬೇರೊಬ್ಬರ ಅಂಡಾಣು ಪಡೆದು, ಪತಿ ರಾಜಾರಾವ್ ಅವರ ವೀರ್ಯದೊಂದಿಗೆ ಸಮ್ಮಿಳನಗೊಳಿಸಲಾಯಿತು. ಇದಾದ ನಂತರ ಮಂಗಮ್ಮ ಮೊದಲ ತಿಂಗಳಲ್ಲೇ ಗರ್ಭಧರಿಸಿದರು.ಗರ್ಭ ಧರಿಸಿದ ನಂತರದಲ್ಲಿ ಹೃದ್ರೋಗ, ಶ್ವಾಸಕೋಶ, ಹೆರಿಗೆ ಮತ್ತು ಸ್ತ್ರೀರೋಗ ಹಾಗೂ ಪೋಷಣ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಈರಾಮತ್ತಿ ಅವರ ಆರೋಗ್ಯವನ್ನು ಗಮನಿಸಲಾರಂಭಿಸಿತು. ಅವರಿಗೆ 74 ವರ್ಷವಾದ್ದರಿಂದ ಸಹಜ ಹೆರಿಗೆ ಸಾಧ್ಯವಿಲ್ಲದ ಕಾರಣ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು.
ಪ್ರಸವದ ನಂತರದಲ್ಲಿ ಗುರುತರವಾದ ಆರೋಗ್ಯ ಸಮಸ್ಯೆಗಳಿರುವಂತೆ ಕಾಣುತ್ತಿಲ್ಲ. ಆದರೆ ಇಳಿವಯಸ್ಸು ಆಗಿರುವುದರಿಂದ ಅವರಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾವು ಹಾಲಿನ ಬ್ಯಾಂಕ್ನಿಂದ ಮಕ್ಕಳಿಗೆ ಹಾಲನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.‘ನನಗೆ ತುಂಬ ಖುಷಿಯಾಗಿದೆ. ಪತ್ನಿ ಗರ್ಭ ಧರಿಸಿದ ನಂತರ 9 ತಿಂಗಳು ಆಸ್ಪತ್ರೆಯಲ್ಲೇ ಇದ್ದೆವು.ಹಿಂದೆಯಲ್ಲ ಮಕ್ಕಳಿಗಾಗಿ ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ದೊರಕಿದೆ. ಇಬ್ಬರು ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ಪತಿ ರಾಜಾರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಕಳೆದ ಮೂರು ವರ್ಷಗಳಲ್ಲಿ 2,14,160ರಷ್ಟು ಕುಸಿತವಾಗಿದೆ.
ಬಾಲ್ಯ, ಯೌವ್ವನ, ಮುಪ್ಪು ಇವೆಲ್ಲ ಬೇಡ ಅಂದ್ರೂ ನಮ್ಮನ್ನು ಬಿಡೋದಿಲ್ಲ. ವಯಸ್ಸಾದಂತೆ ನಮ್ಮ ದೇಹದಲ್ಲಿ ಬದಲಾವಣೆಗಳು ಸಹಜ. 50 ವರ್ಷ ಆಯ್ತು ಅಂದ್ರೆ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತೆ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಳು ಪ್ರಕೃತಿಯ ನಿಯಮಕ್ಕೇ ಸೆಡ್ಡು ಹೊಡೆದಿದ್ದಾಳೆ.
ಮೇಷ ರಾಶಿ ಭವಿಷ್ಯ (Tuesday, November 30, 2021) ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇಂದಿನ ದಿನ ನೀವು ನಿಮ್ಮ ವ್ಯಾಪಾರಕ್ಕೆ ಹೊಸ ಎತ್ತರವನ್ನು ನೀಡಬಹುದು. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ನಿಮ್ಮ ಸಂಗಾತಿಗೆ ಸಾಕಷ್ಟು ಗಮನ ನೀಡಲಾಗದಿದ್ದಲ್ಲಿ ಅದು ಅವರ ಅಸಮಾಧಾನಕ್ಕೆ ಕಾರಣವಾಗಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ಇದ್ದಕ್ಕಿದ್ದಂತೆ ಇಂದು…
ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು, ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…
ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ.. ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು…
ಸಾದಿಸುವವನಿಗೆ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸುತ್ತಾರೆ ಅನ್ನೋದಕ್ಕೆ ಈ ನಂದಿನಿಯವರೇ ಸಾಕ್ಷಿ. ಇವರು ಓದಿದ್ದು ಕೇವಲ ಪಿಯುಸಿ. ಬಡತನದ ಕಾರಣದಿಂದ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಆಗಲಿಲ್ಲ. ಆದ್ರೆ ಬರಿ ಪಿಯುಸಿ ಓದಿ ತಿಂಗಳಿಗೆ ಲಕ್ಷ ಸಂಪಾದನೆ. ಹೆಸರು ನಂದಿನಿ, ಬೆಂಗಳೂರು ಗ್ರಾಮಾಂತರ ಪ್ರದೇಶದವರು. ತಂದೆ ದೇವಸ್ಥಾನದ ಪೂಜಾರಿ, ತಾನು ಡಾಕ್ಟರ್ ಆಗಬೇಕು ಎಂಬ ಸುಂದರ ಕನಸನ್ನು ಹೊತ್ತಿದ್ದರು, ಆದ್ರೆ ಬಡತನ ಆ ಕನಸನ್ನ ಕನಸಾಗಿಗೆ ಉಳಿಸಿತು. ಪಿ ಯು ಸಿ ಆದಮೇಲೆ ನಂದಿನಿಗೆ ಮದುವೆ ಮಾಡಿದರು. ನಂದಿನಿಯ…