ಸುದ್ದಿ

ಮತ್ತೆ ಪ್ಲೇ ಸ್ಟೋರ್‌ನಲ್ಲಿ ನಕಲಿ ಆ್ಯಪ್ಸ್ ಕಾಟ,ಯಾವ ಆ್ಯಪ್ಸ್ ಮಾಹಿತಿ ಕದಿಯುತ್ತಿವೆ,ತಿಳಿದುಕೊಳ್ಳಿ…!

233

ಗೂಗಲ್‌ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಆ್ಯಪ್ಸ್ಒದಗಿಸುವ ಪ್ಲೇ ಸ್ಟೋರ್ ಈಬಾರಿ ಮತ್ತೆ ಸುದ್ದಿಯಾಗಿದೆ. ಪ್ಲೇಸ್ಟೋರ್ ತುಂಬಾ ಇರುವ ಆ್ಯಪ್‌ಗಳ ಪೈಕಿ ಬಹುತೇಕಆ್ಯಪ್ಸ್ ನಕಲಿ ಮತ್ತು ಮಾಹಿತಿಕದಿಯುವ ಕೆಲಸ ಮಾಡುತ್ತಿವೆ. ಮಾಲ್ವೇರ್ಮತ್ತು ವೈರಸ್ ಹೊಂದಿರುವ ಆ್ಯಪ್ಸ್ಬಗ್ಗೆ ಗೂಗಲ್ ಪ್ಲೇ ಸ್ಟೋರ್ ಮತ್ತೆಸುದ್ದಿಯಲ್ಲಿದೆ. 

ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಭದ್ರತೆ, ಸುರಕ್ಷತೆ ಒದಗಿಸುವ ಸೈಮಂಟೆಕ್ ಸಂಸ್ಥೆ ಹೊಸದಾಗಿ ಪ್ರಕಟಿಸಿರುವ ವರದಿಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಕೆಲವೊಂದು ಆ್ಯಪ್ಸ್ ನಕಲಿಯಾಗಿದ್ದು, ಗ್ರಾಹಕರ ಮಾಹಿತಿ ಕದಿಯುವ ಕೆಲಸದ ಜತೆಗೆ, ಪಾಪ್‌ ಅಪ್‌ ಜಾಹೀರಾತಿನ ಮೇಲೆ ಕ್ಲಿಕ್ ನೀಡುವ ಕೆಲಸ ಮಾಡುತ್ತಿವೆ ಎಂದು ಬಹಿರಂಗಪಡಿಸಿದೆ.  ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿರುವ ಕೆಲವು ಆ್ಯಪ್ಸ್, ಅವರ ಅರಿವಿಗೆ ಬಾರದೆಯೇ ಅಲ್ಲಿ ಆ್ಯಡ್ ಕ್ಲಿಕ್ಸ್ ನೀಡುತ್ತಿರುವ ಜತೆಗೆ ಮಾಹಿತಿ ಕದಿಯುತ್ತವೆ ಎಂದಿದೆ. ಈ ಬಗ್ಗೆ ಗೂಗಲ್‌ಗೆ ಸ್ವತಃ ಯಾವುದೇ ಮಾಹಿತಿಯಿರಲಿಲ್ಲ. 


ಯಾವ ಆ್ಯಪ್ಸ್ ಮಾಹಿತಿ ಕದಿಯುತ್ತಿವೆ? ಐಡಿಯಾ ಮಾಸ್ಟರ್ ಎಂಬ ಡೆವಲಪರ್ ಅಭಿವೃದ್ಧಿಪಡಿಸಿದ, ಐಡಿಯಾ ನೋಟ್:OCR Text Scanner, GTD, Color Notes ಎಂಬ ಆ್ಯಪ್ ಮತ್ತು ಬ್ಯೂಟಿ ಫಿಟ್‌ನೆಸ್‌: daily workout, best HIIT coach ಆ್ಯಪ್ ಕೂಡ ಗ್ರಾಹಕರ ಅರಿವಿಲ್ಲದೆಯೆ ಆ್ಯಡ್ ಕ್ಲಿಕ್‌ ನೀಡುತ್ತಿವೆ. 

ಅದರ ಜತೆಗೆ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿನ ಮಾಹಿತಿ ಕದಿಯುವ ಕೆಲಸ ಮಾಡುತ್ತಿವೆ. ಅದರಲ್ಲೂ ಹಿಡನ್ ವ್ಯೂ ಆಯ್ಕೆ ಮೂಲಕ ಜಾಹೀರಾತಿಗೆ ಕ್ಲಿಕ್ಸ್ ಒದಗಿಸುತ್ತಿವೆ. ಹೀಗಾಗಿ ಅಂತಹ ಆ್ಯಪ್ ಕುರಿತು ಬಳಕೆದಾರರು ಎಚ್ಚರಿಕೆ ವಹಿಸಬೇಕಿದ್ದು, ಉಚಿತ ಮತ್ತು ಆಫರ್ ಕೊಡುಗೆಯ ಬಲೆಗೆ ಬೀಳದಿರುವುದು ಉತ್ತಮ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಗಂಡನಂತೆ ಬಟ್ಟೆ ಧರಿಸಿ ಟ್ರೋಲ್ ಆದ ದೀಪಿಕಾ ಪಡುಕೋಣೆ…..

    ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್‍ರಂತೆ ಉಡುಪು ಧರಿಸಿ ಟ್ರೋಲ್ ಆಗುತ್ತಿದ್ದಾರೆ.ದೀಪಿಕಾ ಪಡುಕೋಣೆ ತನ್ನ ಪತಿ ರಣ್‍ವೀರ್ ಸಿಂಗ್‍ರನ್ನು ಭೇಟಿ ಆಗಲು ಲಂಡನ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ವಿಮಾನ ನಿಲ್ದಾಣದಲ್ಲಿ ವಿಭಿನ್ನ ಗೆಟಪ್‍ನಲ್ಲಿ ಮಿಂಚಿದ್ದಾರೆ. ದೀಪಿಕಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ವಿಮಾನ ನಿಲ್ದಾಣಕ್ಕೆ ದೀಪಿಕಾ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ನಿಯಾನ್ ಪ್ಯಾಂಟ್ ಹಾಗೂ ಲಾಂಗ್ ಜಾಕೆಟ್ ಧರಿಸಿದ್ದರು….

  • inspirational

    ವಯಸ್ಸನ್ನು ಕಡಿಮೆ ಮಾಡುವ ಹಿಪ್ಪುನೇರಳೆ ಹಣ್ಣು, ಕಂಡರೆ ಬಿಡಬೇಡಿ. ಈ ಮಾಹಿತಿ ನೋಡಿ.

    ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ . ಪ್ರತಿ ನಿತ್ಯ ಹಲವು ರೀತಿಯ ಹಣ್ಣುಗಳನ್ನು ತಿನ್ನುತಾ ಇರ್ತೇವೆ. ನಾವು ಈಗ ತಿಳಿಸುವ ಹಣ್ಣು ಹೌದು ಹಿಪ್ಪುನೇರಳೆ ಹಣ್ಣು ಎಂದು ಕರೆಯುವ ಮಲ್ಬರಿ ಹಣ್ಣು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಈ ಹಿಪ್ಪುನೇರಳೆ ಹಣ್ಣುಗಳನ್ನು ತಿನ್ನುವುದರಿಂದಾಗಿ ಮನುಷ್ಯರ ನಾಲಗೆ ಕೆಂಪಾಗುವಂತೆ ಅವುಗಳ ಕೊಕ್ಕು ಕೆಂಬಣ್ಣಕ್ಕೆ ತಿರುಗಿರುತ್ತವೆ. ರುಚಿ ಮಾತ್ರ ಹುಳಿ ಮಿಶ್ರಿತ ಸಿಹಿ, ಮತ್ತೆಮತ್ತೆ ತಿನ್ನಬೇಕೆಂಬ ರುಚಿಯುಳ್ಳ ಹಿಪ್ಪುನೇರಳೆಯಲ್ಲಿ ಬಹಳಷ್ಟು ಔಷಧಿ ಗುಣಗಳಿವೆ ರಕ್ತದಲ್ಲಿನ ಸಕ್ಕರೆ ಪ್ರಮಾಣ…

  • ಉಪಯುಕ್ತ ಮಾಹಿತಿ

    ವೋಟರ್ ಕಾರ್ಡ್ ನಿಮ್ಮಲ್ಲಿ ಇಲ್ಲವೇ?ಚಿಂತೆ ಬೇಡ!ವೋಟರ್ ಐಡಿ ಇಲ್ಲದಿದ್ದರೂ ವೋಟ್ ಹಾಕೋದು ಹೇಗೆ ಗೊತ್ತಾ?

    ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಚುನಾವಣೆ ಹತ್ತಿರ ಬರ್ತಿದ್ದಂತೆ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ಜೊತೆ ಮತದಾರರು ತಯಾರಿ ಶುರು ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನೂ ತನ್ನ ಹಕ್ಕು ಚಲಾಯಿಸಬೇಕಾಗುತ್ತದೆ. ಆದ್ರೆ ಅನೇಕರು ವೋಟರ್ ಐಡಿ ಇಲ್ಲ ಎನ್ನುವ ಕಾರಣಕ್ಕೆ ಮತದಾನ ಮಾಡಲು ಹೋಗುವುದಿಲ್ಲ. ಸಾಮಾನ್ಯವಾಗಿ ವೋಟರ್ ಐಡಿ ಹಾಗೂ ಸ್ಲಿಪ್ ಮತದಾನಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದ್ರೆ ಚಿಂತೆ ಬೇಡ. ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಸಾಕು. ವೋಟರ್ ಲಿಸ್ಟ್ ನಲ್ಲಿ…

  • ದೇಶ-ವಿದೇಶ

    ಮೋದಿ ಸರ್ಕಾರದ ಹೊಸ ಶಾಕ್ !!!

    ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

  • ಆಧ್ಯಾತ್ಮ

    ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಮಾಡಿದ್ರೆ ಹೆಚ್ಚು ಫಲ ಸಿಗುತ್ತೆ ಗೊತ್ತಾ ನಿಮ್ಗೆ?

    ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.

  • ಉಪಯುಕ್ತ ಮಾಹಿತಿ

    ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ‘ಸಿಹಿ ಸುದ್ದಿ’…ಇದನ್ನೊಮ್ಮೆ ಓದಿ…!

    ಬಲು ದುಬಾರಿಯಾಗಿದ್ದ ಅಂಗಾಂಗ ಕಸಿ ಚಿಕಿತ್ಸೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಅಂಗಾಂಗ ಕಸಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಮತ್ತು ಔಷಧ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು ಸುಲಭವಾಗಿ ಹೃದಯ, ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಬಹುದು. ಈ ಯೋಜನೆ ಅಡಿ ಕಿಡ್ನಿ ಕಸಿಗೆ 3 ಲಕ್ಷ ರೂ., ಹೃದಯ ಕಸಿಗೆ 11 ಲಕ್ಷ ರೂ., ಲಿವರ್ ಕಸಿಗೆ 12 ಲಕ್ಷ ರೂ. ನೆರವು ನೀಡಲಾಗುವುದು. ಕಳೆದ…