ತಂತ್ರಜ್ಞಾನ

ನಿಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೋ ಬಗ್ಗೆ, ಇನ್ಮೇಲೆ ನೀವು ತಲೆ ಕೆಡಿಸ್ಕೋಬೇಡಿ!ಏಕೆ ಗೊತ್ತಾ….

747

ಫೇಸ್‌ಬುಕ್ನಲ್ಲಿ  ಪ್ರೊಫೈಲ್ ಚಿತ್ರವನ್ನು ನಾವು ಹಾಕುವುದಕ್ಕೆ ಮುಂಚೆ ಹಿಂಜರಿಯುವುದು ಸಹಜ.ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವರು ಪ್ರೊಫೈಲ್ ಫೋಟೋಗಳನ್ನು ದುರುಪಯೋಗ ಮಾಡಿಕೊಳ್ಳುವ ತುಂಬಾ ಘಟನೆಗಳು ನಡೆಯುತ್ತಿರುತ್ತವೆ.

ಈ ರೀತಿಯ ದುರ್ಬಳಕೆ ತಡೆಗೆ ಹೊಸ ಟೂಲ್ ಒಂದನ್ನು ಫೇಸ್‌ಬುಕ್ ಪರಿಚಯಿಸಿದೆ.

  ಫೇಸ್ ಬುಕ್ ಬಳಕೆದಾರರ ಪ್ರೊಫೈಲ್ ಪೋಟೋಗಳು ದುರ್ಬಳಕೆ  ಆಗದಂತೆ ರಕ್ಷಣೆ ಒದಗಿಸಲು ಫೇಸ್ ಬುಕ್ ನೂತನ ಭದ್ರತ ವ್ಯವಸ್ಥೆಯನ್ನು ಪರಿಚಯಿಸಿದೆ. ಹೊಸದಾಗಿ ಸೆಟ್ಟಿಂಗ್ಸ್ ಟೂಲ್ ಒಂದನ್ನು ಅಭಿವೃದ್ಧಿಪಡಿಸಿಲಾಗಿದ್ದು, ಅದು ಪ್ರೊಫೈಲ್ ಪೋಟೋಗಳನ್ನು ಡೌನ್ ಲೋಡ್ ಮಾಡದಂತೆ, ಶೇರ್ ಮಾಡದಂತೆ  ನಿರ್ಬಂದಿಸಲಿದೆ.

ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರ ಪ್ರೊಫೈಲ್ ಪೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ನ ಪ್ರೊಫೈಲ್ ಪ್ರೊಟೆಕ್ಷನ್ ಟೂಲ್ ಮಹತ್ವದ್ದಾಗಿರಲಿದೆ.

ಈ ಟೂಲನ್ನು ಎನೇಬಲ್ ಮಾಡಿಕೊಂಡರೆ ಪ್ರೊಫೈಲ್ ಚಿತ್ರವನ್ನು ಯಾರಿಂದಲೂ ಡೌನ್ ಲೋಡ್ ಮಾಡುವುದು, ಶೇರ್ ಮಾಡುವುದು ಸಾಧ್ಯವಾಗಲಾರದು.

ಈ ಪ್ರೊಟೆಕ್ಷನ್ ಟೂಲನ್ನು ಫೇಸ್ ಬುಕ್ ಭಾರತದಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೆಮಾಡಲಾಗುತಿದ್ದು, ಇದರ ಫಲಿತಾಂಶ ನೋಡಿಕೊಂಡು ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಇತರ ದೇಶಗಳಲ್ಲಿ ಜಾರಿಮಾಡುವ ಕುರಿತು ನಿರ್ಧರಿಸಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ