ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಸಿಲಿಕಾನ್ ಸಿಟಿ ಉದ್ಯೋಗಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದ್ದ ಪೀಣ್ಯ ಕೈಗಾರಿಕಾ ಪ್ರದೇಶದ 10 ಸಾವಿರ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಆಗಮಿಸದ 80,90ರ ದಶಕದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲದೆ, ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುತ್ತಿದ್ದರು. ಅವರೆಲ್ಲರಿಗೂ ಪೀಣ್ಯ ಕೈಗಾರಿಕಾ ಪ್ರದೇಶ ಆಸರೆಯಾಗಿತ್ತು.
ಆರ್ಥಿಕ ಹಿಂಜರಿತದ ಎಫೆಕ್ಟ್ : ಪೀಣ್ಯದ ಕೈಗಾರಿಕೆಗಳ ಮೇಲೆ ಸುನಾಮಿಯಂತೆ ಆರ್ಥಿಕ ಹಿಂಜರಿತ ಅಪ್ಪಳಿಸಿದ್ದು ಭಾರಿ ಸಂಕಷ್ಟ ಎದುರಾಗಿದೆ. ಅಕ್ಷರಶಃ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಐಸಿಯು ಸ್ಥಿತಿಗೆ ತಲುಪಿವೆ. ಎರಡು ತಿಂಗಳಲ್ಲಿ ಕೈಗಾರಿಕಾ ವಹಿವಾಟು ಶೇ.70ರಷ್ಟು ಕುಸಿತ ಕಂಡಿದೆ.
ದೊಡ್ಡ ಕೈಗಾರಿಕೆಗಳಲ್ಲಿ ಶೇ.60ರಷ್ಟು ಮಾರಾಟ ಕುಸಿತವಾಗಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇ. 90ರಷ್ಟು ವ್ಯವಹಾರ ಕಡಿಮೆಯಾಗಿದೆ. 4 ತಿಂಗಳ ಹಿಂದೆ ದಿನಕ್ಕೆ 15 ಲಕ್ಷ ವಹಿವಾಟು ಮಾಡುತ್ತಿದ್ದವರು ಈಗ 3 ಲಕ್ಷಕ್ಕೆ ಇಳಿಕೆ ಕಂಡಿದ್ದಾರೆ. ಗಾರ್ಮೆಂಟ್ಸ್, ಆಟೋ ಮೊಬೈಲ್ಸ್ ಬಿಡಿಭಾಗ, ಫ್ಯಾಬ್ರಿಕೇಷನ್-ಪ್ಯಾಕೇಜಿಂಗ್ ಇಂಡಸ್ಟ್ರಿ, ಪೌಡರ್ ಕೋಟಿಂಗ್, ಎಲೆಕ್ಟ್ರೋ ಪ್ಲೇಟಿಂಗ್ ಸೇರಿದಂತೆ 10 ಸಾವಿರ ಕಾರ್ಖಾನೆಗಳಿಗೆ ನಷ್ಟ ಉಂಟಾಗುತ್ತಿದೆ.
ದಿನಕ್ಕೆ 6 ಗಂಟೆ ಕೆಲಸ ಮಾತ್ರ : ಮೂರು ಪಾಳಿ ಬದಲು ಈಗ ದಿನಕ್ಕೆ 5 ರಿಂದ 6 ಆರು ಗಂಟೆ ಕೆಲಸ ಮಾತ್ರ ಸಿಗುತ್ತಿದೆ. ಶನಿವಾರ ಮತ್ತು ಭಾನುವಾರ ಕಡ್ಡಾಯ ರಜೆ ನೀಡಲಾಗುತ್ತಿದೆ. ಉತ್ಪಾದನೆ ಹೆಚ್ಚಿ ಮಾರಾಟ ಕುಸಿತವಾಗಿರುವುದರಿಂದ ಭಾರೀ ಸಂಕಷ್ಟ ಎದುರಾಗಿದೆ.ಯಾವುದೇ ಕ್ಷಣದಲ್ಲೂ ಈ ಕಾರ್ಖಾನೆಗಳು ಮುಚ್ಚಿ ಹೋಗುವುದು ನಿಜವಾಗಲಿದೆ. ಉದ್ಯೋಗ ಕಳೆದುಕೊಳ್ಳೋ 15 ಲಕ್ಷ ಮಂದಿಯಲ್ಲಿ 4 ಲಕ್ಷ ಮಹಿಳೆಯರಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕೈಗಾರಿಕೆಗಳನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಮುಂದಿನ ದಿನಗಳು ಹೇಗೆ ಎಂಬ ಚಿಂತೆಯಲ್ಲಿ ದಿನ ದೂಡುವ ಸ್ಥಿತಿ ಎದುರಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ…
ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಕೆಲವು ದೇವಾಲಯಗಳ ರಹಸ್ಯಗಳನ್ನು ಇಲ್ಲಿಯವರೆಗೆ ಯಾರೂ ಬಹಿರಂಗಪಡಿಸಿಲ್ಲ. ಇಂದು ನಾವು ನಿಮಗೆ ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಾಲಯವನ್ನು ನೀವು ನೋಡಿರದಿದ್ದರೂ, ಅದರ ಹೆಸರನ್ನು ಖಂಡಿತ ಕೇಳಿರುತ್ತೀರಿ. ಏಕೆಂದರೆ ಈ ದೇವಾಲಯವು ಕೆಲವು ನಿಗೂಢತೆಗಳಿಗೆ ಮತ್ತು ಅದರ ಸಂಪತ್ತಿಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಆದ್ದರಿಂದ ಇದನ್ನು ಭಾರತದ ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಅನೇಕ ರಹಸ್ಯ ನೆಲಮಾಳಿಗೆಗಳಿವೆ. ಅವುಗಳಲ್ಲಿ ಕೆಲವು ತೆರೆದಿವೆ. ಆ ಮಳಿಗೆಗಳಿಂದ ಕೋಟ್ಯಂತರ…
ನಾವು ಮನುಷ್ಯರು ತಾವು ವಾಸವಿರುವ ಮನೆಯನ್ನೇ ಸ್ವಚ್ಚವಾಗಿಡುವುದಕ್ಕೆ, ಸೋಮಾರಿತನ ತೋರುತ್ತಾರೆ. ಇನ್ನು ಅಕ್ಕ ಪಕ್ಕದ ಜಾಗ ಅಥವಾ ಬೇರೆ ಜಾಗಗಳನ್ನು ಸ್ವಚ್ಚವಾಗಿದುವುದರ ಬಗ್ಗೆ ಯೋಚಿಸೋದು ತಂಬಾ ದೂರ ಬಿಡಿ.
ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಆರು ವರ್ಷದ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.ಪಶುವೈದ್ಯರ ತಂಡವೊಂದು ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ ಪಶುವೈದ್ಯ ಹಾಗೂ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸರ್ಜನ್ ಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಆರು ವರ್ಷದ ಹಸುವಿನ ಹೊಟ್ಟೆಯಿಂದ ಆಹಾರವನ್ನು ಪ್ಯಾಕ್ ಮಾಡಲು ಬಳಸುವ 52 ಕೆಜಿ…
ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು ವೃದ್ಧಿಗೆ ನೀವೂ ಬಯಸಿದ್ದರೆ ಈ ಸುಲಭ ಉಪಾಯವನ್ನು ಅನುಸರಿಸಿ. ರಾಶಿಗೆ ಅನುಗುಣವಾಗಿ ಯಾವುದೇ ಮಹಿಳೆ ತನ್ನ ಬಳೆಯ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಆಕೆಯ ಪತಿ ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು…
ಮೆಟ್ರೋ ರೈಲು ಪ್ರಯಾಣಿಕರು ಇನ್ನು ಮುಂದೆ 25 ಕೆಜಿವರೆಗೂ ಲಗೇಜ್ ಕೊಂಡೊಯ್ಯಬಹುದಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಲಗೇಜ್ ತೂಕ ಮಿತಿಯನ್ನು 25 ಕೆಜಿ ಗೆ ಹೆಚ್ಚಳ ಮಾಡಿದೆ. ಪ್ರಸ್ತುತ ಮೆಟ್ರೋ ರೈಲುಗಳಲ್ಲಿ 15 ಕೆಜಿ ತೂಕದ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಅದನ್ನು 25 ಕೆಜಿಗೆ ಹೆಚ್ಚಿಸಲಾಗಿದೆ. ಆದರೆ ಇಷ್ಟು ತೂಕದ ಒಂದು ಬ್ಯಾಗ್ ಗೆ ಮಾತ್ರ ಅನುಮತಿ ಇರುತ್ತದೆ. ಮೊದಲಿಗೆ ಮೆಟ್ರೋ ರೈಲ್ವೆ ಅಧಿಕಾರಿಗಳಿಂದಲೂ ಪೂರ್ವ ಅನುಮತಿ ಪಡೆಯಬೇಕಿದೆ. ವಿಮಾನ ನಿಲ್ದಾಣಗಳಿಗೆ ಸಂಪರ್ಕ…