ಸುದ್ದಿ

ಶಿಯೋಮಿ ಕಂಪೆನಿಯಿಂದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ 108 MP ಕ್ಯಾಮೆರಾ, 1 TB ಸ್ಟೋರೇಜ್,12 ಜಿಬಿ RAM…!

44

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ದರ ಮತ್ತು ಉತ್ತಮ ಫೀಚರ್ಸ್​ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ ಕಂಪೆನಿ ಸೆಪ್ಟೆಂಬರ್​ನಲ್ಲಿ ಮತ್ತೊಂದು ಹೊಸ ಸ್ಮಾರ್ಟ್​ಫೋನ್​ನ್ನು ಬಿಡುಗಡೆ ಮಾಡಲಿದೆ. ಶಿಯೋಮಿ ಮಿಕ್ಸ್ ಸಿರೀಸ್​ನ ಈ ನೂತನ ಸ್ಮಾರ್ಟ್‌ಫೋನ್​ಗೆ ಮಿ ಮಿಕ್ಸ್ 4 ಎಂದು ಹೆಸರಿಡಲಾಗಿದೆ. ಇವೆಲ್ಲಕ್ಕಿಂತ ಈ ಹೊಸ ಫೋನ್ ಎಲ್ಲರ ಗಮನ ಸೆಳೆಯುತ್ತಿರುವುದು ನೂತನ ಮೊಬೈಲ್​ಗೆ ನೀಡಲಾಗಿರುವ  ಕ್ಯಾಮೆರಾ.

ಹೌದು, ಮಿ ಮಿಕ್ಸ್​ 4ನಲ್ಲಿ 108 ಮೆಗಾಪಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆಯಂತೆ. ಚೀನಾದ ವೆಬ್‌ಸೈಟ್ ವೀಬೊದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮಿಕ್ಸ್​4 ಫೋನ್‌ನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ಕ್ವಾಡ್-ಕ್ಯಾಮೆರಾ ಸೆಟಪ್ ಇದರಲ್ಲಿರಲಿದೆ. ಅಂದರೆ 16 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್, 12 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 108 ಮೆಗಾಪಿಕ್ಸೆಲ್‌ಗಳ ಜೊತೆಗೆ ನಾಲ್ಕನೇ ಪೆರಿಸ್ಕೋಪ್ ಲೆನ್ಸ್ ಇರುತ್ತದೆ ಎಂದು ಹೇಳಲಾಗಿದೆ.

ವೀಬೊ ವರದಿಯಂತೆ, ನೂತನ ಸ್ಮಾರ್ಟ್​ಫೋನ್ ಮಾಹಿತಿ ಸೋರಿಕೆಯಾಗಿದ್ದು, ಮಿ ಮಿಕ್ಸ್​ 4ನಲ್ಲಿ AMOLED 2K HDR10 + ಕವರ್ಡ್ ಡಿಸ್​ಪ್ಲೇ ಇರಲಿದ್ದು , ಇದು 2K ರೆಸಲ್ಯೂಶನ್‌ನೊಂದಿಗೆ ಕಾರ್ಯಾಚರಿಸಲಿದೆ. ಇನ್ನು ಮಿ ಮಿಕ್ಸ್ ಫೋರ್ 12 ಜಿಬಿ RAM ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ, ಇದರ ಸ್ಟೋರೇಜ್ ಸಾಮರ್ಥ್ಯ 1 ಟಿಬಿಗೆ ಹೆಚ್ಚಿಸಬಹುದು. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855+ ಚಿಪ್‌ಸೆಟ್ ಹೊಂದಿರಲಿದೆ ಎಂದು ಹೇಳಲಾಗಿದೆ.

ಹಾಗೆಯೇ ಅತ್ಯುತ್ತಮ ಬ್ಯಾಟರಿ ಬ್ಯಾಕಪ್​ಗಾಗಿ 4,500 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿ ನೀಡಲಾಗುತ್ತದೆ. 30W ವೇಗದ ಚಾರ್ಜಿಂಗ್ ಸರ್ಪೋಟ್​ನೊಂದಿಗೆ ಇದನ್ನು ಚಾರ್ಜ್​ ಮಾಡಿಕೊಳ್ಳಬಹುದು. ಇದರಲ್ಲಿ, ನಿಮಗೆ ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಕೂಡ ಸಪೋರ್ಟ್ ಮಾಡುತ್ತದೆ. ಶಿಯೋಮಿಯ ನೂತನ ಸ್ಮಾರ್ಟ್​ಫೋನ್​ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ಆ ಬಳಿಕವಷ್ಟೇ ಭಾರತ ಸೇರಿದಂತೆ ಇತರೆಡೆ ಖರೀದಿಗೆ ಲಭ್ಯವಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತರಕಾರಿ ವ್ಯಾಪಾರಿಯಾ ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರಿ ದುರಂತ….!

    ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ. ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ. ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನು…

  • ಸುದ್ದಿ

    ಮೊಟ್ಟೆ ತಿನ್ನುವವರು ಇದನ್ನು ತಪ್ಪದೇ ಓದಲೇಬೇಕು,.!

    ಬೆಳಿಗ್ಗೆ ಉಪಹಾರದ ಜೊತೆ ಮೊಟ್ಟೆ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆ ಶಕ್ತಿಯನ್ನು ಹೆಚ್ಚು ಮಾಡುತ್ತೆ. ಹಾಗಾಗಿಯೇ ಅನೇಕರು ಬೆಳಿಗ್ಗೆ, ಸಂಜೆ ಮೊಟ್ಟೆ ಸೇವಿಸ್ತಾರೆ. ಆದ್ರೆ ನೀವು ಸೇವಿಸುವ ಮೊಟ್ಟೆಯಲ್ಲಿ ಶಕ್ತಿ ನೀಡುವಂತ ಅಂಶ ಇರಬೇಕೆಂದೇನೂ ಇಲ್ಲ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗ್ತಾ ಇದ್ದಂತೆ ಕೃತಕವಾಗಿ ಮೊಟ್ಟೆ ತಯಾರಿಸಲಾಗ್ತಾ ಇದೆ. ಈ ಮೊಟ್ಟೆಯನ್ನು ಹೇಗೆ ತಯಾರಿಸಲಾಗುತ್ತೆ ಎನ್ನುವ ವಿಷಯ ಗೊತ್ತಾದ್ರೆ ಕೆಲವರು ಇಂದಿನಿಂದಲೇ ಮೊಟ್ಟೆ ಸೇವನೆಯನ್ನು ನಿಲ್ಲಿಸಿದ್ರೂ ಸಂಶಯವಿಲ್ಲ. ಈಗ ಒಂದು ಕೋಳಿಗೆ ಮೊಟ್ಟೆ ಉತ್ಪಾದಿಸಲು ಸುಮಾರು…

  • ಉಪಯುಕ್ತ ಮಾಹಿತಿ

    ಉಪ್ಪನ್ನು ಹಾಕಿ ಮನೆ ಒರೆಸಿದ್ರೆ ನಿಮ್ಮ ಮನೆಯಲ್ಲಿ ಏನೇನಾಗುತ್ತೆ ಗೊತ್ತಾ! ಈ ಮಾಹಿತಿ ನೋಡಿ.

    ಉಪ್ಪು ಇದರ ಬಗ್ಗೆ ನಿಮಗೆ ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇನೆ ಉಪ್ಪನ್ನು ನಾವು ಅಡುಗೆಗೆ ಮಾತ್ರ ಬಳಸುತ್ತೇವೆ ಎಂದು ತಿಳಿದುಕೊಂಡಿರುತ್ತೇವೆ ಅದು ತಪ್ಪು ಉಪ್ಪಿನ ಋಣವನ್ನು ನಾವು ಯಾವತ್ತೂ ತಿಳಿಸಲು ಸಾಧ್ಯವಿಲ್ಲ ನೀವು ನೋಡಿರಬಹುದು ಅಂಗಡಿಯ ಆಚೆ ಉಪ್ಪನ್ನು ಇಟ್ಟಿರುತ್ತಾರೆ ಆದರೆ ಅದನ್ನು ಯಾರು ಕಲಿಯುವುದಿಲ್ಲ ಏಕೆಂದರೆ ಉಪ್ಪಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಇಲ್ಲಿ ಒಂದು ವಿಷಯ ಏನಂದರೆ ಉಪ್ಪಿನಿಂದ ಆಗುವ ಉಪಯೋಗಗಳು ಯಾವುವು ಎಂಬುದನ್ನು ತಿಳಿಸುತ್ತೇನೆ ನೋಡಿ ಮತ್ತು ಯಾವುದಕ್ಕೆ ಬಳಕೆ ಮಾಡುತ್ತಾರೆ…

  • ಸಿನಿಮಾ

    ದರ್ಶನ್ ಅಭಿಮಾನಿಗಳಿಗೆ ಸಖತ್ ಸಿಹಿ ಸುದ್ದಿ!ಫಿಕ್ಸ್ ಆಯ್ತು ಕುರುಕ್ಷೇತ್ರ ಚಿತ್ರದ ರಿಲೀಜ್ ಡೇಟ್…ಯಾವಾಗ ಗೊತ್ತಾ?

    ಚಂದನವನದಲ್ಲಿ ಸ್ಟಾರ್ ನಟರ ಹೈ ಬಜೆಟ್ ಚಿತ್ರಗಳು ಒಂದರ ಮುಂದೆ ಒಂದು ಬಿಡುಗಡೆಯಾಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಇದೇ ತಿಂಗಳ ಫೆಬ್ರುವರಿ ೧೧ರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ ತೆರೆಗೆ ಅಪ್ಪಳಿಸಲಿದ್ದು ಚಿತ್ರ ರಸಿಕರು ಈ ಚಿತ್ರವನ್ನು ಕಣ್ತುಂಬಿ ಕೊಳ್ಳಲು ತುದಿ ಗಾಲಲ್ಲಿ ನಿಂತಿದ್ದಾರೆ….

  • inspirational, ಜ್ಯೋತಿಷ್ಯ

    ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಶುಭವೋ ಅಶುಭವೋ, ಹೇಗಿದೆ ನೋಡಿ ತಿಳಿಯಿರಿ

    ಭಾನುವಾರ , 1/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ. ವೃಷಭ:- ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗವಾಗಲಿದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ….

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(13 ಡಿಸೆಂಬರ್, 2018) ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ…