ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸದಿಲ್ಲಿ, ಮಹಾತ್ಮಾ ಗಾಂಧಿ ಅವರ 150ನೇ ಹುಟ್ಟುಹಬ್ಬದಂದು ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಮಹಾ ಆಂದೋಲನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.
ದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಂದಿನಿಂದ ಸ್ವಚ್ಛ ಭಾರತ ಮಾದರಿಯ ಆಂದೋಲನ ನಡೆಸುವಂತೆ ಕೇಳಿಕೊಂಡಿರುವ ಪ್ರಧಾನಿ, ಪ್ಲಾಸ್ಟಿಕ್‌ನ ಸುರಕ್ಷಿತ ವಿಲೇವಾರಿಗೆ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ನಗರಸಭೆಗಳು, ಸರಕಾರೇತರ ಸಂಘಟನೆಗಳು ಮತ್ತು ಕಾರ್ಪೊರೇಟ್ ವಲಯಕ್ಕೆ ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್‌ನ್ನು ಒಂದೇ ಬಾರಿ ಬಳಸಿ ಎಸೆಯುವ ಆಭ್ಯಾಸವನ್ನು ಬಿಡುವ ಮೂಲಕ ಪರಿಸರ ರಕ್ಷಣೆಗೆ ಸಹಕರಿಸುವಂತೆ ಸ್ವಾತಂತ್ರ್ಯದಿನದ ಭಾಷಣದಲ್ಲಿ ಕರೆ ನೀಡಿದ್ದ ಪ್ರಧಾನಿ, ಆಗಸ್ಟ್ ತಿಂಗಳ ಮನ್‌ಕಿ ಬಾತ್‌ನಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರವನ್ನೇ ಸಾರಿದ್ದಾರೆ.
ಸೆ.11ರಿಂದ ‘ಸ್ವಚ್ಛತಾ ಹೀ ಸೇವಾ’
ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸಬೇಕೆಂದು ಮನವಿ ಮಾಡಿ ಪ್ರತಿ ವರ್ಷ ನಡೆಸಲಾಗುವ ಸ್ವಚ್ಛತಾ ಹೀ ಸೇನಾ ಕಾರ್ಯಕ್ರಮ ಈ ವರ್ಷ ಸೆಪ್ಟೆಂಬರ್ 11ರಿಂದ ಆರಂಭವಾಗಲಿದೆ ಎಂದು ಮೋದಿ ಹೇಳಿದರು.
ಪ್ಲಾಸ್ಟಿಕ್ ಮುಕ್ತ ಭಾರತ ಮಾತೆ
-ಭಾರತ ಮಾತೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರತಿಜ್ಞೆಯೊಂದಿಗೆ ಎಲ್ಲರೂ ಈ ಬಾರಿ ಗಾಂಧಿ ಜಯಂತಿ ಆಚರಿಸಬೇಕು.
– ಎಲ್ಲಾ ನಗರಾಡಳಿತ ಮತ್ತು ಜಿಲ್ಲಾಡಳಿತಗಳು, ಪಂಚಾಯಿತಿಗಳು, ಸರಕಾರ ಮತ್ತು ಸರಕಾರೇತರ ಸಂಘಟನೆಗಳು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮತ್ತು ಶೇಖರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಸಂಗ್ರಹಿಸಲಾದ ಪ್ಲಾಸ್ಟಿಕ್‌ನ್ನು ಮರುಬಳಕೆ ಮಾಡುವ, ಇಂಧನವಾಗಿ ಪರಿವರ್ತಿಸುವ ಸಾಧ್ಯತೆಗಳ ಬಗ್ಗೆ ಕಾರ್ಪೊರೇಟ್ ವಲಯ ಆವಿಷ್ಕಾರ ಮಾಡಬೇಕು.
ದೀಪಾವಳಿ ಡೆಡ್‌ಲೈನ್
ಪ್ಲಾಸ್ಟಿಕ್ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಅಕ್ಟೋಬರ್ 27ರ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಹುಡುಕುವಂತೆ ಅವರು ಮನವಿ ಮಾಡಿದ್ದಾರೆ.
ಜನ, ವರ್ತಕರುಏನು ಮಾಡಬಹುದು?
* ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಎಸೆಯುವ ಅಭ್ಯಾಸ ಬಿಟ್ಟು ಬಿಡಿ
* ಅಂಗಡಿಗೆ ಹೋಗುವಾಗ ಬಟ್ಟೆ ಚೀಲ ಒಯ್ಯುವುದನ್ನು ಮರೀಬೇಡಿ
* ಗ್ರಾಹಕರು ತಾವೇ ಚೀಲ ತರಬೇಕೆಂದು ಅಂಗಡಿಗಳಲ್ಲಿ ಬೋರ್ಡ್ ಹಾಕಬಹುದು.
* ಅಂಗಡಿಗಳಲ್ಲೇ ಬಟ್ಟೆ,, ಪೇಪರ್ ಚೀಲ ಒದಗಿಸುವ ವ್ಯವಸ್ಥೆ ಮಾಡಬಹುದು.
ಪ್ಲಾಸ್ಟಿಕ್ ಸಮಸ್ಯೆಯಅಗಾಧತೆ
25,940 ಟನ್
ದೇಶದಲ್ಲಿ ಪ್ರತಿದಿನ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯ
ಇದು 9,000 ಏಷ್ಯನ್ ಆನೆಗಳ ತೂಕಕ್ಕಿಂತಲೂ ಹೆಚ್ಚು!
10,376ಟನ್ ಪ್ರತಿದಿನಸಂಗ್ರಹಿಸಲಾಗದೆಉಳಿಯುವಪ್ಲಾಸ್ಟಿಕ್
ದಿಲ್ಲಿ, ಮುಂಬಯಿ, ಬೆಂಗಳೂರು, ಚೆನ್ನೈ, ಕೋಲ್ಕೊತಾ
ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ನಡೆಯುವ ನಗರಗಳು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗಿದೆ.ಈಗಾಗಲೆ ಚಿತ್ರಕ್ಕೆ ‘ಮೂರ್ತಿ’ ಎಂದು ಟೈಟಲ್ ಇಡಲಾಗಿದೆ. ಆದರೆ ಈಗ ಪ್ರೇಕ್ಷಕರಲ್ಲಿ ಸುಧಾ ಮೂರ್ತಿ ಪಾತ್ರದಲ್ಲಿಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸುಧಾಮೂರ್ತಿ ಜೀವನವನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿರುವುದು ಬಾಲಿವುಡ್ ನ ಖ್ಯಾತನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ. ಈಗಾಗಲೆ ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡಿರುವ ಅಶ್ವಿನಿ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ…
ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಅವರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಈಗ ಆ ಕಾಲ ಮುಗಿದಿದೆ.
ಚಿಕ್ಕಮಗಳೂರು: ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದ ಜ್ಯೋತಿಷಿಯೊಬ್ಬನ ಮಾತು ಕೇಳಿ 1.5 ತಿಂಗಳ ಹೆಣ್ಣು ಹಸುಗೂಸನ್ನು ಸ್ವತಃ ತಂದೆಯೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. 27 ವರ್ಷದ ಮಂಜುನಾಥ್ ನವಜಾತ ಕಂದಮ್ಮನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿ ಹೇಳಿದ್ದರಿಂದ ಅದನ್ನು ಕುರುಡಾಗಿ ನಂಬಿದ ತಂದೆ ಮಗುವನ್ನು ಕತ್ತು…
ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ. ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ…
ನಮ್ಮ ದೇಹದ ಸೂಕ್ಷ್ಮ ಭಾಗವಾಗಿರುವ ಕಣ್ಣಿನ ಬಗೆಗಿನ ಈ 10 ವಿಷಯಗಳು ನಮ್ಮ ಕಣ್ಣನ್ನ ನಾವೇ ನಂಬದ ಹಾಗೆ ಮಾಡ್ತವೆ
ಶಾಪಿಂಗ್ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.