ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತಕ್ರಿಕೆಟ್ ತಂಡದನಾಯಕವಿರಾಟ್ ಕೊಹ್ಲಿ ಪತ್ನಿಹಾಗೂಬಾಲಿವುಡ್ ನಟಿಅನುಷ್ಕಾ ಶರ್ಮಾಕನ್ನಡದಲ್ಲಿ ಪದವೊಂದನ್ನು ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆ ವೆಸ್ಟ್ಇಂಡೀಸ್ ಪ್ರವಾಸದಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕನ್ನಡದಲ್ಲಿ ಒಂದೇ ಒಂದು ಪದವನ್ನು ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಅನುಷ್ಕಾ ಮಾಡಿರುವ ತಾಜಾ ಟ್ವೀಟ್ನಲ್ಲಿ ಧನಾತ್ಮಕತೆಯ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ. ಇಂಟರ್ನೆಟ್ನಲ್ಲಿ ಧನಾತ್ಮಕತೆಯನ್ನು ಪಸರಿಸುವ ಟ್ವೀಟ್ಗಳನ್ನು ಓದುತ್ತಾ ಸಾಗುತ್ತಾರೆ. ಕೊನೆಗೆ ದಟ್ಸ್ ಇಟ್ ಬದಲು ಕನ್ನಡದಲ್ಲೇ ‘ಅಷ್ಟೇ’ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ಅನುಷ್ಕಾ ಕರ್ನಾಟಕದ ಜತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಬೆಂಗಳೂರಿನಲ್ಲೇ ಓದಿರುವ ಅನುಷ್ಕಾ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20ಕ್ರಿಕೆಟ್ ಚಾಂಪಿಯನ್ಶಿಪ್ ವೇಳೆಯಂತೂ ಪತಿ ವಿರಾಟ್ ಕೊಹ್ಲಿ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿರುತ್ತಾರೆ. ಈ ಮೂಲಕ ತಂಡವನ್ನು ಹುರಿದುಂಬಿಸುತ್ತಾರೆ.

ಅನುಷ್ಕಾ ಅಷ್ಟೇ ಎಂಬ ಕನ್ನಡ ಪದ ಬಳಕೆ ಮಾಡಿದ್ದೇ ತಡ ಕನ್ನಡಿಗರೆಲ್ಲರಿಗೂ ಖುಷಿಯೋ ಖುಷಿ. ಅಲ್ಲದೆ ತಮ್ಮ ಸಂತಸವನ್ನು ಟ್ವೀಟ್ ಮೂಲಕ ತೋಡಿಕೊಂಡಿದ್ದಾರೆ. ಅನುಷ್ಕಾ ಮಾಡಿರುವ ಈ ಟ್ವೀಟ್10 ಸಹಸ್ರಕ್ಕೂ ಹೆಚ್ಚು ಬಾರಿ ಟ್ವೀಟ್ ಆಗಿರುವುದು ಗಮನಾರ್ಹವೆನಿಸುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ.
ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ.ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗೆ ಉಳಿದುಬಿಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೇಲ್ಸ್ನ ಬಾರ್ಗೋಡ್ ನಿವಾಸಿಯಾಗಿರುವ ಲಿಂಡಾ ಮುಂಕ್ಲೆ(65) ವೇಲ್ಸ್ ಆನ್ಲೈನ್ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ…
ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಕನ್ನಡದ ಇಂಟರ್ ನ್ಯಾಷನಲ್ ರಾಕ್ ಸ್ಟಾರ್’ ಆಗುವ ಮೂಲಕ ವಿಶ್ವದಾದ್ಯಂತ ಕನ್ನಡ ಕೀರ್ತಿ ಪತಾಕೆ ಹಾರಿಸಿದ್ದಾರೆ.ಇವರು ನಮ್ಮ ಕನ್ನಡದ ಹೆಮ್ಮೆ ಅಂತ ಹೇಳಿದ್ರೆ ತಪ್ಪಾಗಲಾರದು.ಇಂತಹ ಮಹಾನ್ ಸಾಧಕ ಬೆಳೆದು ಬಂದದ್ದೆ ಒಂದು ರೋಚಕ… ರಘು ದೀಕ್ಷಿತ್ ವೈಯುಕ್ತಿಕ ಜೀವನದ ಬಗ್ಗೆ… ನವೆಂಬರ್ 11, 1974ರಂದು, ಮಹಾರಾಷ್ಟ್ರದ ನಾಸಿಕ್’ನಲ್ಲಿ, ರಘು ದೀಕ್ಷಿತ್’ರವರ ಜನನವಾಯಿತು.ಇವರ ಪೂರ್ತಿ ಹೆಸರು ರಘುಪತಿ ದ್ವಾರಕನಾಥ್ ದೀಕ್ಷಿತ್ ಎಂದು. ತಂದೆ ದಿವಂಗತ ಕೆ.ವಿ.ದ್ವಾರಕನಾಥ್…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ನಟ ಎನ್ನುವುದಕ್ಕಿಂತ ಒಂದೊಳ್ಳೆ ಮನಸ್ಸಿರುವ ವ್ಯಕ್ತಿ ಎಂದರೂ ತಪ್ಪಿಲ್ಲ. ಆದ್ದರಿಂದ ಅಭಿಮಾನಿಗಳ ಬಳಿ ಪ್ರೀತಿಯಿಂದ ಯಜಮಾನ, ಡಿ ಬಾಸ್, ಗಜ, ಯೋಧ, ದಚ್ಚು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ.ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದರ್ಶನ್, ಮೈಸೂರು ರಸ್ತೆಯಲ್ಲಿ ದೊಡ್ಡ ಫಾರಂ ಹೌಸ್ ಹೊಂದಿದ್ದಾರೆ. ಸ್ವಲ್ಪ ಬಿಡುವು ದೊರೆತರೆ ಸಾಕು ಫಾರಂ ಹೌಸ್ಗೆ ತೆರಳುವ ಅವರು, ಪ್ರೀತಿಯ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಫಾರಂಹೌಸ್ನಲ್ಲಿ ಪ್ರಾಣಿಗಳಿಗಾಗಿ ಹುಲ್ಲು ಕತ್ತರಿಸುತ್ತಾರೆ,…
ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇನ್ನುಮುಂದೆ ಬಸ್, ರೈಲು ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಿದ್ಯುತ್ ಬಿಲ್ ಪಾವತಿ ಹಾಗೂ ಮೊಬೈಲ್ ರಿಚಾರ್ಜ್ ಸೇವೆಗಳು ಲಭ್ಯವಾಗಲಿವೆ. ರಾಜ್ಯ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಬುಧವಾರ (ಆ. 2) ಚಾಲನೆ ದೊರೆಯಲಿದೆ.