ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡಿಜಿಟಲ್ ವ್ಯಾಲೆಟ್‌ಗಳಿಗೆ ಕೆವೈಸಿ ಅಳವಡಿಸಲು ಆರ್‌ಬಿಐ ನೀಡಿದ್ದ ಗಡುವು ಮುಕ್ತಾಯಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇದ್ದು, ಆಗಸ್ಟ್‌ಅಂತ್ಯಕ್ಕೆ ಈ ಗಡುವು ಮುಗಿಯಲಿದೆ. ಅದಕ್ಕಾಗಿಯೇ ಪ್ರಮುಖ ಡಿಜಿಟಲ್ ವ್ಯಾಲೆಟ್ ಕಂಪನಿ ಫೋನ್‌ಪೇಕೆವೈಸಿ ಸೇವೆ ಪೂರೈಸಲು ಗ್ರಾಹಕರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದೆ. ಬಳಕೆದಾರರ ದಾಖಲೆಗಳನ್ನುಭೌತಿಕವಾಗಿ ಪರಿಶೀಲಿಸುವುದು ದುಬಾರಿಯಾಗಿದೆ. ಆದರೆ ಇ-ಕೆವೈಸಿಗಾಗಿ ಆಧಾರ್ ಬಳಕೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ನಂತರ ವ್ಯಾಲೆಟ್ ಕಂಪನಿಗಳಿಗೆ ಹೆಚ್ಚಿನ ಆಯ್ಕೆ ಉಳಿದಿಲ್ಲ. ಗ್ರಾಹಕರು ತಮ್ಮಸಂಪೂರ್ಣ ಕೆವೈಸಿ ಮಾಡಿಸುವ ಗಡುವನ್ನು ಆರ್‌ಬಿಐ ಆಗಸ್ಟ್‌ವರೆಗೆ ವಿಸ್ತರಿಸಿತ್ತು, ಮೊದಲ ಗಡುವು ಫೆಬ್ರವರಿ28ಕ್ಕೆ ಅಂತ್ಯವಾಗಿತ್ತು.

ಪೂರ್ಣ ಕೆವೈಸಿ ಅನಿವಾರ್ಯ : ಈ ಮೊದಲು ಮೊಬೈಲ್ಸಂಖ್ಯೆಗೆ ಒಟಿಪಿ ಆಧರಿಸಿ ಭಾಗಶಃ ಕೆವೈಸಿ ಮಾಡಬಹುದಿತ್ತು. ಆದರೆ, ಆರ್‌ಬಿಐ ಕಾನೂನುಗಳ ಪ್ರಕಾರವ್ಯಾಲೆಟ್‌ಗಳು ಸಕ್ರಿಯವಾಗಿರಲು ಪೂರ್ಣ ಕೆವೈಸಿ ಮಾಡಬೇಕಾಗಿದೆ. ಐಡಿ ಪ್ರೂಫ್ ಮತ್ತು ವಿಳಾಸಪುರಾವೆ ಸೇರಿದಂತೆ ವಿವಿಧ ದಾಖಲೆಗಳ ಸಲ್ಲಿಕೆಯನ್ನು ಕೆವೈಸಿ ಒಳಗೊಂಡಿದೆ.
ಭೌತಿಕ ಕೆವೈಸಿ : ಅಸ್ತಿತ್ವದಲ್ಲಿರುವ ನಮ್ಮ8,000 ಜನರ ಏಜೆಂಟ್‌ಗಳನ್ನು ಬಳಸಿಕೊಂಡು ನಮ್ಮ ಗ್ರಾಹಕರ ಭೌತಿಕ ಕೆವೈಸಿ ಮಾಡಲು ಯೋಜನೆಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದೇವೆ ಎಎಂದು ಫೋನ್‌ಪೇ ಸಹ-ಸಂಸ್ಥಾಪಕ ಮತ್ತು ಸಿಇಒ ಸಮೀರ್ನಿಗಮ್ ಹೇಳಿದ್ದಾರೆ. ಈ ಏಜೆಂಟ್‌ಗಳು ಈಗಾಗಲೇ ಫೋನ್‌ಪೆಯಲ್ಲಿ ಆಫ್‌ಲೈನ್ ವ್ಯಾಪಾರಿಗಳಿಗೆ ಕೆಲಸಮಾಡುತ್ತಿದ್ದಾರೆ. ವರ್ಷಾರಂಭದಲ್ಲಿ, ಅಮೆಜಾನ್ ಕೂಡ ತನ್ನ ವಾಲೆಟ್ ಅಮೆಜಾನ್ ಪೇ ಬಳಕೆದಾರರಿಗೆಇದೇ ರೀತಿಯ ಪ್ರಕ್ರಿಯೆ ಆರಂಭಿಸಿತ್ತು.

ಪರ್ಯಾಯ ಮಾರ್ಗಕ್ಕೆ ಅನುಮತಿಯಿಲ್ಲ ಬಳಕೆದಾರರ ಪರಿಶೀಲನೆಯನ್ನು ಪೂರ್ಣಗೊಳಿಸಲುವಿಡಿಯೋ ಕೆವೈಸಿಯಂತಹ ಪರ್ಯಾಯ ಆಯ್ಕೆಗಳನ್ನು ವ್ಯಾಲೆಟ್ ಕಂಪನಿಗಳು ನಿರೀಕ್ಷಿಸುತ್ತಿದ್ದವು. ಆದರೆ,ಆರ್‌ಬಿಐ ಇನ್ನೂ ಅಂತಹ ಯಾವುದೇ ಪರ್ಯಾಯ ವಿಧಾನಕ್ಕೆ ಅನುಮೋದನೆ ನೀಡಿಲ್ಲ. ಯುನಿಫೈಡ್ ಪೇಮೆಂಟ್ಸ್ಇಂಟರ್ಫೇಸ್ (ಯುಪಿಐ) ಮೂಲಕ ತನ್ನ ಬಹುಪಾಲು ವಹಿವಾಟುಗಳನ್ನು ನಿರ್ವಹಿಸುವ ಫೋನ್‌ಪೇ, ಸಣ್ಣ ಟಿಕೆಟ್ಗಾತ್ರದ ವಹಿವಾಟುಗಳಿಗೆ ವ್ಯಾಲೆಟ್ ಬಳಸುವ ಬಳಕೆದಾರರ ಸಕ್ರಿಯ ನೆಲೆಯನ್ನು ಹೊಂದಿದೆ. ಜುಲೈನಲ್ಲಿನಡೆದ 335 ಮಿಲಿಯನ್ ವಹಿವಾಟುಗಳಲ್ಲಿ, 300 ಮಿಲಿಯನ್ ವಹಿವಾಟುಗಳು ಯುಪಿಐನಿಂದ ಬಂದಿವೆ.
ಫೋನ್‌ಪೇಯುಭೌತಿಕ ಕೆವೈಸಿಗೆ ಮುಂದಾಗಿರುವುದು ಏಕೆಂದರೆ, ಗ್ರಾಹಕರು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟುಮುಂದುವರಿಸಲಿ ಎಂಬುದು ಪ್ರಮುಖ ಅಂಶವಾಗಿದೆ. ಅಮೆಜಾನ್‌ನಂತಹ ಕಂಪನಿಗಳು ಸಹ ಇದೇ ಕಾರಣಗಳಿಗಾಗಿ ಭೌತಿಕಕೆವೈಸಿಯನ್ನು ಪ್ರಯತ್ನಿಸಿದ್ದವು. ಅಂದಾಜಿನ ಪ್ರಕಾರ ಕನಿಷ್ಠ 70% ವ್ಯಾಲೆಟ್ ಖಾತೆಗಳು ಸಂಪೂರ್ಣಕೆವೈಸಿ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಕೂಡ ವರದಿಯಾಗಿದೆ

ದುಬಾರಿ ಪ್ರಕ್ರಿಯೆ : ಈ ಪ್ರಕ್ರಿಯೆ ದುಬಾರಿ ಮಾತ್ರವಲ್ಲದೆ, ವಾರದ ದಿನಗಳಲ್ಲಿಗ್ರಾಹಕರು ಹಾಜರಾಗಲು ಸಿದ್ಧರಿರುವ ಸಮಯ ಸ್ಲಾಟ್‌ಗಳನ್ನು ಹೊಂದಿಸುವುದು ಕಠಿಣವಾಗಿದೆ ಅಥವಾ ಅನೇಕವ್ಯಾಲೆಟ್‌ಗಳು ಕೂಡ ಇದೇ ಪ್ರಕ್ರಿಯೆ ನಡೆಸುತ್ತವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಹೆಚ್ಚಿನ ಗ್ರಾಹಕರುಸಾಮಾನ್ಯವಾಗಿ ತಮ್ಮ ಫೋನ್‌ನಲ್ಲಿ ಎರಡು ಅಥವಾ ಮೂರು ಮೊಬೈಲ್ ವ್ಯಾಲೆಟ್‌ಗಳನ್ನು ಹೊಂದಿರುತ್ತಾರೆ.ಈ ಮೊದಲು ಇ-ಕೆವೈಸಿ ಬೆಲೆ 15 ರೂ., ಈಗ ಭೌತಿಕ ಕೆವೈಸಿ ವೆಚ್ಚ ಕನಿಷ್ಠ 100 ರೂ. ಆಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿವಂಗತ ಅಂಬರೀಶ್ ಅವರ ಜಯಂತಿಯಾದ ಇಂದು ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂಡ್ಯ ಸಂಸದರಾಗಿ ಆಯ್ಕೆ ಆಗಿರುವ ಸುಮಲತಾ ಅವರು ಇಂದು ಬೆಳಿಗ್ಗೆಯೇ ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಸ್ಮಾರಕಕ್ಕೆ ಮಗ ಅಭಿಶೇಕ್ ಅವರೊಂದಿಗೆ ಸೇರಿ ಪೂಜೆ ಸಲ್ಲಿಸಿದರು. ನೆರೆದಿದ್ದ ಅಭಿಮಾನಿಗಳೊಂದಿಗೂ ಸುಮಲತಾ ಅವರು ಕೆಲ ಕಾಲ ಮಾತನಾಡಿದರು. ಅಭಿಶೇಕ್, ರಾಕ್ಲೈನ್ ವೆಂಕಟೇಶ್ ಇನ್ನೂ ಹಲವು ಅಭಿಮಾನಿಗಳು, ಚಿತ್ರರಂಗದ ಪ್ರಮುಖರು…
ದೇವರ ಮೇಲೆ ವಿಶ್ವಾಸವಿತ್ತು.
ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ……….
ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವವನ್ನು ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂತಹ ವ್ಯಕ್ತಿ ಎಂಬುದನ್ನು ಹಾಗೆಯೇ ತಿಳಿಯಬಹುದು.
ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ಯೋ ಗೊತ್ತಿಲ್ಲ. ಆದರೆ ಸಿಎಂಗೂ ಮೊದಲೇ ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ. ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ…
ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ. ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ…
ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ 9 ನಕಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಶಿವರಾಜ ಜಾಳಿಹಾಳ, ಮಂಜುನಾಥ ಕಡೆಮನಿ, ನಿಂಗಪ್ಪ ಕಂಬಳಿ, ಮೈಲಾರಪ್ಪ, ಫಕೀರಪ್ಪ ಸೇರಿದಂತೆ 9 ಮಂದಿ ನಕಲಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಅವರು ಬೇರೆಯವರ ಹೆಸರಲ್ಲಿ ಪರೀಕ್ಷೆ ಬರೆದ ಹಿನ್ನೆಲೆಯಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಕೊಠಡಿ ಮೇಲ್ವಿಚಾರಕರು ಸೇರಿ ನಾಲ್ವರು ಅಧಿಕಾರಿಗಳನ್ನು ಪರೀಕ್ಷೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಕ್ರಮಕ್ಕೆ ಆದೇಶಿಸಲಾಗಿದೆ ಎಂದು…