ಸುದ್ದಿ

ಕೇಳಿದಷ್ಟು ಹಣ ಕೊಡಲು ನೋಟು ಪ್ರಿಂಟ್ ಮಾಡುವುದಿಲ್ಲ…!

29

‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ.

‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10 ದಿನ ಸಮಯ ತೆಗೆದುಕೊಂಡು ನಿಖರ ವರದಿ ನೀಡಿ’ ಎಂದು ಯಡಿಯೂರಪ್ಪ ಅವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದೇ ಸಭೆಯಲ್ಲಿ ವನ್ಯಜೀವಿ ವಿಭಾಗದ ಡಿಎಫ್‌ಒ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ಹೊಂದಿಕೊಂಡು ಹೋಗಿ ಇಲ್ಲವಾದರೆ ಕಲಬುರಗಿ, ರಾಯಚೂರಿಗೆ ಹೋಗಲು ಸಿದ್ಧವಾಗು ಎಂದು ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಅವರು ನೋಟ್ ಪ್ರಿಂಟ್ ಮಾಡುವ ಯಂತ್ರದ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಮುಂಚೆ ರಾಜ್ಯದ ಸಿಎಂ ಆಗಿದ್ದಾಗಲೂ ಸಹ ಸಾಲಮನ್ನಾ ಮಾಡುವಂತೆ ಪ್ರತಿಪಕ್ಷಗಳು ಒತ್ತಾಯ ಹಾಕಿದಾಗ ‘ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರಗಳಿಲ್ಲ’ ಎಂದು ಹೇಳಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ಕರ್ನಾಟಕ ರಾಜ್ಯದ ಈ ಗ್ರಾಮಕ್ಕೆ ಬಂದವರಿಗೆಲ್ಲಾ ಮೊಟ್ಟೆ ಫ್ರೀ ..!ತಿಳಿಯಲು ಈ ಲೇಖನ ಓದಿ….

    ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.

  • ಸುದ್ದಿ

    ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…

  • ಸುದ್ದಿ

    ಸಿಹಿ ಸುದ್ದಿ : ಗ್ಯಾಸ್ ಸಿಲಿಂಡರ್ ಜೊತೆ ಸಿಗುತ್ತೆ 50 ಲಕ್ಷ ರೂ. ಉಚಿತ ವಿಮೆ

    ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವವರಿಗೆ ಸಿಲಿಂಡರ್ ಜೊತೆ 50 ಲಕ್ಷ ರೂಪಾಯಿವರೆಗೆ ವಿಮೆ ಸಂಪೂರ್ಣ ಉಚಿತವಾಗಿ ಸಿಗಲಿದೆ. ಅಂದ್ರೆ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಿಸಿ ಅನಾಹುತ ಸಂಭವಿಸಿದ್ರೆ ಕುಟುಂಬಕ್ಕೆ 50 ಲಕ್ಷ ರೂಪಾಯಿಯವರೆಗೆ ಪರಿಹಾರ ಸಿಗಲಿದೆ. ಸರ್ವೆಯೊಂದರ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 100ಕ್ಕೂ ಹೆಚ್ಚು ಮಂದಿ ಸಿಲಿಂಡರ್ ಸ್ಫೋಟಿಸಿ ಸಾವನ್ನಪ್ಪುತ್ತಾರೆ. ಆದ್ರೆ ಅನೇಕ ಬಾರಿ ಜನರು ಇದ್ರ ಪರಿಹಾರವನ್ನು ಪಡೆಯುವುದಿಲ್ಲ. ಪರಿಹಾರದ ಬಗ್ಗೆ ಅವ್ರಿಗೆ ಮಾಹಿತಿಯಿಲ್ಲದಿರುವುದು ಇದಕ್ಕೆ ಕಾರಣ. ಈ…

  • ಸಿನಿಮಾ

    ಕನ್ನಡದಲ್ಲಿ ಆರ್ಭಟಿಸುತ್ತಿರುವ ಕಾಲೇಜ್ ಕುಮಾರ್ ಟ್ರೈಲರ್..!ತಿಳಿಯಲು ಈ ಲೇಖನ ಓದಿ..

    ಕನ್ನಡದ ಸಿನಿಮಾ ಯಾರಿಗೇನು ಕಡಿಮೆ ಇಲ್ಲದಂತೆ ಒಂದರ ಮೇಲೊಂದು ಹಿಟ್ ಆಗುತ್ತಲೇ ಇವೆ.. ಕಿರಿಕ್ ಪಾರ್ಟಿ, ರಾಜಕುಮಾರ, ಹೆಬ್ಬುಲಿ, ತಾರಕ್, ಈಗ ಇದೇ ಲಿಸ್ಟ್ ಗೆ ಸೇರ್ಪಡೆಯಾಗಲು ಯೂತ್ಸ್ ಸಿನಿಮಾ #ಕಾಲೇಜ್ ಕುಮಾರ್ ಬರುತ್ತಿದೆ.

  • ಸುದ್ದಿ

    ನಿರ್ದೇಶಕ ಮಿಲನ ಪ್ರಕಾಶ್‌ ಮತ್ತೊಮ್ಮೆ ದರ್ಶನ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ತಾರಕ್‌’ ಚಿತ್ರದ ನಂತರ ಈ ಜೋಡಿ ಜತೆಯಾಗುತ್ತಿದೆ…!

    ಈಗಾಗಲೇ ಮಿಲನ ಪ್ರಕಾಶ್‌ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್‌ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ  ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್‌ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…

  • ಸುದ್ದಿ

    ಇನ್ನುಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯಬೇಕೆಂದರೆ ಇದನ್ನು ಪಾಲಿಸಲೇಬೇಕು..!ಏನದು?

    ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್‌ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್  ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…