ಸುದ್ದಿ

ಪ್ರವಾಹದಲ್ಲಿ ಕೊಚ್ಚಿ ಹೋದ ಅರ್ಚಕ , ಎರಡು ದಿನ ಸೇತುವೆ ಕೆಳಗೆ ಇದ್ದು ಬದುಕಿ ಬಂದಿದ್ಹೇಗೆ..?

79

ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ.

ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ ಬಿಚ್ಚಿಟ್ಟಿದ್ದಾರೆ.

ನಂಜನಗೂಡಿನಲ್ಲಿ ಪುರೋಹಿತ ವೃತ್ತಿಯಲ್ಲಿರುವ ವೆಂಕಟೇಶ್, ಎರಡು ದಿನಗಳ ಕಾಲ ಬ್ರಿಡ್ಜ್ ಕೆಳಗೆ ಅಡಗಿ ಕುಳಿತಿದ್ದರಂತೆ, ಊಟ-ತಿಂಡಿ ಇಲ್ಲದೇ ಸುಸ್ತಾಗಿದ್ದ ವೆಂಕಟೇಶ್, ನೀರಿನ ರಭಸ ಕಡಿಮೆಯಾದ ಬಳಿಕ ಹೊರಬಂದಿದ್ದಾರೆ.

ಈ ಬಗ್ಗೆ ಮಾತನಾಡಿದ ವೆಂಕಟೇಶ್, ತಿನ್ನೋಕ್ಕೆ ಊಟ ಇಲ್ಲದೆ, ನೀರು ಕಡಿಮೆಯಾದ ಬಳಿಕ ಬಂದೆ. ಈ ರೀತಿಯ ಸಾಹಸ ನನಗೆ ಹುಟ್ಟಿನಿಂದ ಬಂದಿದೆ. ನಾನು ಸೈಕಲ್‌ನಲ್ಲಿ ಹಿಮಾಲಯಕ್ಕೆ ಹೋಗಿದ್ದೇನೆ. ನನಗೆ ಇದೆಲ್ಲ ಅಭ್ಯಾಸ ಇದೆ, ಯಾವುದೇ ಆತಂಕ ಬೇಡ. ನನಗೆ ನದಿಯಲ್ಲಿ ಈಜಾಡಿ ಬಂದು ದಡ ಸೇರುವ ಸಾಮರ್ಥ್ಯ ಇದೆ ಎಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ