ಸುದ್ದಿ

ಕಾರ್ಖಾನೆಯ ಕ್ಯಾಂಟೀನ್ ಊಟ ತಿಂದು 100ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ..!

39

ಕಾರ್ಖಾನೆಯ ಕ್ಯಾಂಟೀನ್ ಆಹಾರ ಸೇವಿಸಿದ 100ಕ್ಕೂ ಹೆಚ್ಚು ಮಹಿಳಾ ನೌಕರರು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

ತಾಲ್ಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಅಂಚೇಪಾಳ್ಯದ ಬಳಿ ಇರುವ ಇಂಡೋ ಸ್ಪಾನಿಶ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನೌಕರರಿಗೆ ನಿನ್ನೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಅನ್ನ ಮತ್ತು ಮೊಳಕೆಕಾಳು ಸಾಂಬಾರ್ ನೀಡಲಾಗಿತ್ತು.

ಊಟ ಮುಗಿದ ಕೆಲವು ನಿಮಿಷಗಳ ನಂತರ 40ಕ್ಕೂ ಹೆಚ್ಚು ಮಹಿಳೆಯರು ಹೊಟ್ಟೆ ನೋವೆಂದು ಒದ್ದಾಡಿದ್ದಾರೆ. ತಕ್ಷಣ ಅವತನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಇನ್ನುಳಿದ ಮಹಿಳೆಯರೂ ಕೂಡ ತೀವ್ರ ಅಸ್ವಸ್ಥಗೊಂಡಾಗ ಕೆಲವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಯಿತು.

ವೈದ್ಯರಾದಡ ಆ.ನವೀನ್, ಡಾ.ಗಣೇಶ್ ಬಾಬು ಪ್ರಥಮ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದರು. ನಂತರ ತಾಲ್ಲೂಕು ವೈದ್ಯಾಧಿಕಾರಿ ಕಾರ್ಖಾನೆಯ ಕ್ಯಾಂಟೀನ್ ಪರಿಶೀಲಿಸಿದಾಗ ಆಹಾರ ತಯಾರಿಕೆಗೆ ಕಲುಷಿತ ನೀರು ಬಳಸಿರುವುದೇ ಪ್ರಮುಖ ಕಾರಣವಾಗಿದ್ದು, ಕ್ಯಾಂಟೀನ್ ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲದಿರುವುದು ಕಂಡುಬಂದಿತು.

ಈ ಸಂಬಂಧ ಕಾರ್ಖಾನೆ ಹಾಗೂ ಕ್ಯಾಂಟೀನ್ ಮಾಲೀಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವೈದ್ಯಾಧಿಕಾರಿಗಳ ಮಂದಿ ಬಂದ ನಂತರ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ