ಸುದ್ದಿ

ಎದೆಯುರಿ ಸಮಸ್ಯೆಯಿಂದ ಬಳಲಿತ್ತಿದ್ದೀರಾ ….ಅಗಾದರೆ ಇದನ್ನು ಒಮ್ಮೆ ಓದಿ ……!

84

ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ.

ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ.

►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ

ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್‌ಇಎಸ್) ’ನ ಮೇಲೆ ಹೆಚ್ಚುವರಿ ಒತ್ತಡವುಂಟಾಗುತ್ತದೆ. ಈ ಸ್ನಾಯುವು ಜಠರದಲ್ಲಿಯ ಆಮ್ಲ ಇತ್ಯಾದಿಗಳು ಅನ್ನನಾಳವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಅದರ ಮೇಲೆ ಹೆಚ್ಚುವರಿ ಒತ್ತಡವುಂಟಾದಾಗ ಅದರ ಕಾರ್ಯದಲ್ಲಿ ವ್ಯತ್ಯಯಗಳುಂಟಾಗುತ್ತವೆ.

►ಕಡಿಮೆ ಕಾರ್ಬೊಹೈಡ್ರೇಟ್ ಇರುವ ಆಹಾರ ಸೇವಿಸಿ

ಬೊಜ್ಜುದೇಹಿಗಳು ಕಡಿಮೆ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವುದು ಎದೆಯುರಿಯನ್ನು ತಗ್ಗಿಸಲು ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಬೆಟ್ಟುಮಾಡಿವೆ. ಅತಿಯಾದ ಕಾರ್ಬೊಹೈಡ್ರೇಟ್‌ಗಳ ಸೇವನೆಯಿಂದ ಹೊಟ್ಟೆಯಲ್ಲಿ ವಾಯು ಸಂಗ್ರಹಗೊಳ್ಳುತ್ತದೆ ಮತ್ತು ಹೊಟ್ಟೆಯುಬ್ಬರ ವುಂಟಾಗುತ್ತದೆ ಹಾಗೂ ಇದು ಎದೆಯುರಿಗೆ ಕಾರಣವಾಗುತ್ತದೆ.

►ಆಹಾರವನ್ನು ಸರಿಯಾಗಿ ಅಗಿದು ತಿನ್ನಿ

ಆಹಾರವನ್ನು ನಿಧಾನವಾಗಿ,ಚೆನ್ನಾಗಿ ಅಗಿದು ಸೇವಿಸಿದಾಗ ಅದು ಜೀರ್ಣ ರಸಗಳು ಆಹಾರವನ್ನು ವಿಭಜಿಸಲು ಮತ್ತು ಅದನ್ನು ಜೀರ್ಣಗೊಳಿಸಲು ಸಾಕಷ್ಟು ಸಮಯಾವಕಾಶವನ್ನು ನೀಡುತ್ತವೆ. ಆದರೆ ಅವಸರದಿಂದ ಊಟ ಮಾಡಿದಾಗ ಅದು ಸರಿಯಾಗಿ ಜೀರ್ಣಗೊಳ್ಳುವುದಿಲ್ಲ ಮತ್ತು ಇದು ಅಜೀರ್ಣ,ಆಮ್ಲೀಯತೆ ಹಾಗೂ ಎದೆಯುರಿಗೆ ಕಾರಣವಾಗುತ್ತದೆ.

►ತಡರಾತ್ರಿ ಆಹಾರ ಸೇವನೆ ಬೇಡ

ಹೊತ್ತಲ್ಲದ ಹೊತ್ತಿಗೆ ಊಟ ಮಾಡುವುದು ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಕೆಲಸದ ಒತ್ತಡದಿಂದಲೋ ಅಥವಾ ಸಂಜೆಯ ಸಮಯದಲ್ಲಿ ಹೊಟ್ಟೆ ಬಿರಿಯುವುಷ್ಟು ತಿನಿಸುಗಳನ್ನು ಸೇವಿಸಿಯೋ ತಡರಾತ್ರಿಯಲ್ಲಿ ಊಟ ಮಾಡುವುದು ಎದೆಯುರಿಗೆ ಸುಲಭವಾಗಿ ತುತ್ತಾಗಿಸುತ್ತದೆ.

►ಹಸಿ ಈರುಳ್ಳಿಯಿಂದ ದೂರವಿರಿ

ಹೆಚ್ಚಿನ ಜನರು ಊಟದೊಂದಿಗೆ ಹಸಿ ಈರುಳ್ಳಿಯನ್ನು ಅಥವಾ ಅದನ್ನು ಸಲಾಡ್‌ನೊಂದಿಗೆ ಸೇರಿಸಿಕೊಂಡು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ನಿಮಗೆ ಆಮ್ಲೀಯತೆಯ ಸಮಸ್ಯೆಯಿದ್ದರೆ ಹಸಿ ಈರುಳ್ಳಿಯಿಂದ ದೂರವಿರಿ,ಏಕೆಂದರೆ ಅದು ಎದೆಯುರಿ ಮತ್ತು ತೇಗಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಸಿ ಈರುಳ್ಳಿಯು ಹುದುಗು ಬರುವ ನಾರನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತದೆ ಮತ್ತು ಇದು ಜೀರ್ಣ ಸಂದರ್ಭದಲ್ಲಿ ಹೆಚ್ಚು ಅನಿಲವನ್ನು ಉತ್ಪಾದಿಸುತ್ತದೆ. ಅಲ್ಲದೆ ಹಸಿ ಈರುಳ್ಳಿಯಲ್ಲಿನ ಸಂಯುಕ್ತಗಳು ಅನ್ನನಾಳದ ಒಳಪದರವನ್ನು ಕೆರಳಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ.

►ಕಾರ್ಬನೀಕೃತ ಪಾನೀಯಗಳನ್ನು ನಿವಾರಿಸಿ

ಸೋಡಾದಂತಹ ಕಾರ್ಬನೀಕೃತ ಪಾನೀಯಗಳು ಎಲ್‌ಇಎಸ್‌ನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತವೆ ಮತ್ತು ಆಮ್ಲ ಹಿಮ್ಮುಖ ಹರಿವಿನಿಂದಾಗಿ ಪದೇ ಪದೇ ತೇಗನ್ನುಂಟು ಮಾಡುತ್ತವೆ. ಈ ಪಾನೀಯಗಳಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಅನ್ನನಾಳವನ್ನು ಪ್ರವೇಶಿಸುವ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಇವೆಲ್ಲ ಎದೆಯುರಿಗೆ ಕಾರಣವಾಗುತ್ತವೆ.

►ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಚ್ಯೂವಿಂಗ್ ಗಮ್ ಬಳಸಿ

ಸಕ್ಕರೆ ರಹಿತ ಚ್ಯೂಯಿಂಗ್ ಗಮ್ ಆಮ್ಲೀಯತೆಯ ಸಮಸ್ಯೆಯನ್ನು ನಿಭಾಯಿಸಲು ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಗಮ್‌ನ್ನು ಅಗಿಯುವಾಗ ಅದು ಹೆಚ್ಚಿನ ಪ್ರಮಾಣದಲ್ಲಿ ಜೊಲ್ಲು ಉತ್ಪತ್ತಿಯಾಗುವಂತೆ ಮಾಡುತ್ತದೆ ಮತ್ತು ಇದು ಅನ್ನನಾಳದಲ್ಲಿಯ ಹೆಚ್ಚುವರಿ ಆಮ್ಲವನ್ನು ನಿವಾರಿಸುತ್ತದೆ.

►ಕಾಫಿಯ ಸೇವನೆ ಮಿತವಾಗಿರಲಿ

ಆಮ್ಲ ಹಿಮ್ಮುಖ ಹರಿವಿಗೆ ಕಾರಣವಾಗಿರುವ ಆಹಾರಗಳ ಸೇವನೆಯಿಂದ ದೂರವಿರುವುದು ಎದೆಯುರಿಯನ್ನು ತಡೆಯಲು ಪ್ರಮುಖ ಮಾರ್ಗಗಳಲ್ಲೊಂದಾಗಿದೆ. ಕಾಫಿ ಇಂತಹ ಆಹಾರಗಳಲ್ಲಿ ಸೇರಿದೆ. ಕಾಫಿಯು ಎಲ್‌ಇಎಸ್‌ನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತದೆ ಮತ್ತು ಇದು ಆಮ್ಲ ಹಿಮ್ಮುಖ ಹರಿವಿನ ಅಪಾಯವನ್ನು ಹೆಚ್ಚಿಸುತ್ತದೆ.

►ಮದ್ಯಪಾನ ಬೇಡ

ಮದ್ಯಪಾನ ಆರೋಗ್ಯಕ್ಕೆ ಕೆಟ್ಟದ್ದು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಮತ್ತು ವ್ಯಕ್ತಿಯು ಎದೆಯುರಿಯಿಂದ ಬಳಲುತ್ತಿದ್ದರೆ ಅದು ಇನ್ನೂ ಕೆಟ್ಟದ್ದು. ಮದ್ಯವು ಆಮ್ಲ ಹಿಮ್ಮುಖ ಹರಿವಿನ ಅಪಾಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ಸ್ಥಿತಿಯನ್ನೂ ಇನ್ನಷ್ಟು ಹದಗೆಡಿಸುತ್ತದೆ. ಅದು ಜಠರಾಮ್ಲಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆಮ್ಲವನ್ನು ನಿವಾರಿಸುವ ಎಲ್‌ಇಎಸ್‌ನ ಸಾಮರ್ಥ್ಯವನ್ನು ಕುಂದಿಸುತ್ತದೆ.

►ಆಹಾರ ಸೇವಿಸಿದ ತಕ್ಷಣ ವ್ಯಾಯಾಮ ಬೇಡ

ವ್ಯಾಯಮವು ನಾವು ಸೇವಿಸಿದ ಆಹಾರವು ಜೀರ್ಣಗೊಳ್ಳಲು ನೆರವಾಗುತ್ತದೆ,ಆದರೆ ಆಹಾರ ಸೇವಿಸಿದ ತಕ್ಷಣ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಹಾಗೆ ಮಾಡಿದರೆ ಜೀರ್ಣಕ್ರಿಯೆಗೆ ವ್ಯತ್ಯಯವುಂಟಾಗುತ್ತದೆ ಮತ್ತು ಅನ್ನನಾಳದಲ್ಲಿ ಆಮ್ಲ ಸಂಗ್ರಹಗೊಳ್ಳುತ್ತದೆ. ಇದು ಎದೆಯುರಿಗೆ ಕಾರಣವಾಗುತ್ತದೆ ಮತ್ತು ಈಗಾಗಲೇ ಎದೆಯುರಿಯಿಂದ ಬಳಲುತ್ತಿದ್ದರೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವ ಮುನ್ನ ತನ್ನಲ್ಲಿರುವುದನ್ನು ಖಾಲಿ ಮಾಡಲು ಜಠರಕ್ಕೆ ಸ್ವಲ್ಪ ಸಮಯಾವಕಾಶ ನೀಡಿ.

►ಊಟವಾದ ತಕ್ಷಣ ನಿದ್ರಿಸಬೇಡಿ

ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಊಟವಾದ ತಕ್ಷಣ ಹಾಸಿಗೆಯನ್ನು ಸೇರಿಕೊಂಡರೆ ಎಲ್‌ಇಎಸ್ ಮೇಲಿನ ಒತ್ತಡ ಹೆಚ್ಚುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿಗೆ ಸುಲಭದ ಗುರಿಯಾಗಿಸುತ್ತದೆ. ಊಟ ಮತ್ತು ನಿದ್ರೆಯ ಮಧ್ಯೆ ಅಂತರವನ್ನು ಕಾಯ್ದುಕೊಳ್ಳುವುದು ಆಹಾರವನ್ನು ಜೀರ್ಣಗೊಳಿಸಲು ಜಠರಕ್ಕೆ ನೆರವಾಗುತ್ತದೆ ಮತ್ತು ಎದೆಯುರಿಯನ್ನು ತಡೆಯುತ್ತದೆ.

►ಹಾಸಿಗೆಯ ತಲೆಭಾಗ ಎತ್ತರವಾಗಿರಲಿ

ವಿಶೇಷವಾಗಿ ರಾತ್ರಿಗಳಲ್ಲಿ ಎದೆಯುರಿಯುಂಟಾಗುತ್ತಿದ್ದರೆ ಅದಕ್ಕೆ ನಿಮ್ಮ ಹಾಸಿಗೆಯ ಭಂಗಿಯನ್ನು ದೂರಬೇಕಾಗುತ್ತದೆ. ಹಾಸಿಗೆಯ ತಲೆಭಾಗವನ್ನು ಎತ್ತರಿಸುವುದರಿಂದ ಜಠರಾಮ್ಲದ ನಿವಾರಣೆ ಉತ್ತಮಗೊಳ್ಳುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿನ ಆವರ್ತನಗಳನ್ನು ಕಡಿಮೆ ಮಾಡುತ್ತದೆ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ.

►ಬಲಮಗ್ಗುಲಾಗಿ ನಿದ್ರಿಸಬೇಡಿ

ನೀವು ಮಲಗುವ ಭಂಗಿಯು ಜೀರ್ಣಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಎಡಮಗ್ಗುಲಾಗಿ ಮಲಗುವುದು ಎದೆಯುರಿಯನ್ನು ತಡೆಯುವ ಜೊತೆಗೆ ಒಳ್ಳೆಯ ನಿದ್ರೆಯನ್ನೂ ನೀಡುತ್ತದೆ. ಬಲಮಗ್ಗುಲಾಗಿ ಮಲಗುವುದು ಆಮ್ಲ ಹಿಮ್ಮುಖ ಹರಿವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಬಲಮಗ್ಗುಲಾಗಿ ಮಲಗುವುದರಿಂದ ಎಲ್‌ಇಎಸ್ ಮೂಲಕ ಆಮ್ಲ ಸೋರಿಕೆಯ ಸಾಧ್ಯತೆಯು ಹೆಚ್ಚಾಗಿರುತ್ತದೆ ಮತ್ತು ಇದು ಎದೆಯುರಿಯ ಅಪಾಯವನ್ನು ಹೆಚ್ಚಿಸುತ್ತದೆ.

►ದೇಹದ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿ

ನೀವು ಅಗತ್ಯಕ್ಕಿಂತ ಹೆಚ್ಚಿನ ದೇಹತೂಕವನ್ನು ಹೊಂದಿದ್ದರೆ ಮತ್ತು ಆಮ್ಲ ಹಿಮ್ಮುಖ ಹರಿವಿನಿಂದ ಬಳಲುತ್ತಿದ್ದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ನಿಮ್ಮ ಆದ್ಯತೆಯಾಗಿರಬೇಕು. ಅತಿಯಾದ ಕೊಬ್ಬು,ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿಯ ಕೊಬ್ಬು ಜಠರ ಮತ್ತು ಎಲ್‌ಇಎಸ್ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಇದರಿಂದಾಗಿ ಜಠರಾಮ್ಲವು ಮೇಲ್ಮುಖವಾಗಿ ತಳ್ಳಲ್ಪಡುತ್ತದೆ ಮತ್ತು ಎದೆಯುರಿಗೆ ಕಾರಣವಾಗುತ್ತದೆ.

►ನಿಮ್ಮ ಔಷಧಿಗಳನ್ನು ಪರಿಶೀಲಿಸಿ ಕೆಲವು ಔಷಧಿಗಳು ಆಮ್ಲ ಸಂಗ್ರಹಗೊಳ್ಳಲು ಅಥವಾ ಅನ್ನನಾಳದ ಉರಿಯೂತಕ್ಕೆ ಕಾರಣವಾಗುತ್ತವೆ ಮತ್ತು ಇದು ಎದೆಯುರಿಯನ್ನುಂಟು ಮಾಡುತ್ತದೆ ಅಥವಾ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ವೈದ್ಯರು ನಿಮಗೆ ಸೂಚಿಸಿರುವ ಔಷಧಿಗಳು ಎದೆಯುರಿಯಂತಹ ಅಡ್ಡಪರಿಣಾಮಗಳನ್ನು ಹೊಂದಿವೆಯೇ ಎನ್ನುವುದನ್ನು ಅವರ ಬಳಿ ಕೇಳಿ ತಿಳಿದುಕೊಳ್ಳಿ. ಲಕ್ಷಣಗಳು ಮುಂದುವರಿದರೆ ಎದೆಯುರಿಯಿಂದ ಪಾರಾಗಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳ!

    ಬೆಂಗಳೂರು(05-01-2023): ವಸತಿ ಯೋಜನೆಗಳ ಫ‌ಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ನೀಡುತ್ತಿದ್ದ ಸಹಾಯಧನ ಮೊತ್ತವನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀಡುತ್ತಿದ್ದ 2.70 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮಹತ್ವದ ತರ‍್ಮಾನಕ್ಕೆ ಸರ್ಕಾರ ಮುಂದಾಗಿದೆ. ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೂರು ಕಲ್ಪಿಸುವ ಬಸವ, ಅಂಬೇಡ್ಕರ್‌ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳವಾಗಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ…

  • ಉಪಯುಕ್ತ ಮಾಹಿತಿ, ದೇವರು

    ದೇವರ ಪೂಜೆ ಮಾಡುವಾಗ ನಿಮ್ಮ ಮನಸ್ಸು ಚಂಚಲವಾಗುವುದಾ ಹೀಗೆ ಮಾಡಿ.

    ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ. ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು ಕೇವಲ ಭಗವಂತನನ್ನು ಚಿಂತಿಸುವಂತೆ ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ…

  • Motivation

    ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !

    ॐ ‘ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ॐ  ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಪ್ರತಿದಿನ ಓಂ ಅನ್ನು ಪಠಿಸುವುದರಿಂದ ನಿಮ್ಮ ಜೀವನಕ್ಕೆ ಧನಾತ್ಮಕತೆಯನ್ನು ತರಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ॐ  ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಈ ಸಂಪೂರ್ಣ ಬ್ರಹ್ಮಾಂಡವನ್ನು ಸೃಷ್ಟಿಸುವ ಹಿಂದೆ ಇದ್ದ…

  • ಸುದ್ದಿ, ಸ್ಪೂರ್ತಿ

    ಗಂಗೆ ಮಲೀನವಾಗಬಾರದೆಂದು ಪ್ರತಿದಿನ ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತಿರುವ ಮೀನುಗಾರ. ಈ ಸುದ್ದಿ ನೋಡಿ.

    ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ನ ಬಳಕೆ ಅತಿ ಹೆಚ್ಚಾಗಿದ್ದು ನದಿಯ ಮಾಲಿನ್ಯಕ್ಕೆ ತುತ್ತಾಗಿದೆ, ಇಲ್ಲಿಗೆ ಬರುವ ಪ್ರವಾಸಿಗಳು ಕೂಡ ತಾವು ತರುವ ವಸ್ತುಗಳ ಪ್ಲಾಸ್ಟಿಕ್ ಅನ್ನು ಎಲ್ಲೆಂದರೆ ಅಲ್ಲಿ ಬಿಸಾಡಿ ಹೋಗುತ್ತಾರೆ. ಇದು ತೀರಾ ನದಿಯ ಮಾಲಿನ್ಯಕ್ಕೆ ತುತ್ತಾಗಿದೆ. ಆದರೆ ಇಲ್ಲಿ 48 ವರ್ಷದ ಕಾಳಿಪದ ದಾಸ್ ಎಂಬುವವರು  ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುವ ಕಾರ್ಯವನ್ನು ಮಾಡುತ್ತಾರೆ. ಇವರು ಮೂಲತಃ ಪಶ್ಚಿಮ ಬಂಗಳಾದವರಾಗಿದ್ದು ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ…

  • ಆಧ್ಯಾತ್ಮ

    ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

    ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ ವೃಶ ಕಪಿ ಅವತಾರ.

  • ಸುದ್ದಿ

    ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!

    ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ! ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್…