ಸುದ್ದಿ

“ಬರದ ನಾಡಿಗೆ ಭಗೀರಥನ ಪ್ರಯತ್ನ” ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯನೂರಾರು ಕೆರೆಗಳಿಗೆ ನೀರು…!

66

ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ…

ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ ಸುಮ್ಮನಾಗಿದ್ದಾರೆ! ಎತ್ತಿನಹೊಳೆ, ಮೇಕೇದಾಟು, ಪರಮಶಿವಯ್ಯ, ಎರಗೋಳು ಮುಂತಾದ ಯೋಜನೆಗಳನ್ನು ತರುತ್ತೇವೆಂದು ನಮಗೆ ನೀರಿನ ಆಸೆ ಹುಟ್ಟಿಸಿ ಸುಮ್ಮನಾಗಿದ್ದಾರೆ, ಆ ಎಲ್ಲಾ ಯೋಜನೆಗೆ ಎಥೇಚ್ಚವಾಗಿ ಹಣ ಪೋಲಾಗಿದ್ದು ನಮಗೆ ತಿಳಿದಿದೆ.ಸದನದಲ್ಲಿ ರಮೇಶ್ ಕುಮಾರ್ ಅವರ ನಡೆಯ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ….! ಸದನದಿಂದಾಚೆಗೆ ನಮ್ಮ ಜಿಲ್ಲೆಯ ರಾಜಕೀಯ ಮುತ್ಸದ್ದಿಗಳು ಎಂಬ ಗೌರವಕ್ಕೆ ಎಂದಿಗೂ ಅವರು ಚ್ಯುತಿ ಬರದಂತೆ ನಡೆದುಕೊಂಡ್ಡಿದ್ದಾರೆ,

ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ನೂರಾರು ಕೆರೆಗಳಿಗೆ ನೀರು ತರಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಿದ್ದಾರೆ, ಸದನದಲ್ಲಿ ಅತ್ತಿದ್ದಾರೆ ಜಗಳವಾಡಿದ್ದಾರೆ ಸ್ವಂತ ಪಕ್ಷದವರನ್ನೇ ಎದುರು ಹಾಕಿಕೊಂಡಿದ್ದಾರೆ ಮತ್ತು ಸುಪ್ರೀಂಕೋರ್ಟ್ ಮಟ್ಟಿಲೇರಿ ಕೆಸಿ ವ್ಯಾಲಿ ಯೋಜನೆಯನ್ನು ಜಿಲ್ಲೆಗೆ ತಂದಿದ್ದಾರೆ.ಯೋಜನೆ ತಂದಿರುವುದಲ್ಲ ಅದನ್ನ ಸಮರ್ಪಕವಾಗಿ ಕಾರ್ಯಗತಗೊಳಿಸಲು ಶ್ರಮಿಸಿದ್ದಾರೆ.. ಕಾರ್ಯಗತಗೊಳಿಸಿದ್ದಾರೆ ಕೂಡ…. ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ..

ನೀರಿಲ್ಲ ನೀಲಗಿರಿ ಮರ ಹಾಕೋಣ, ನೀರಿಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಿ ಕೆಲಸಕ್ಕೆ ಕಳಿಸೋಣ. ನೀರಿಲ್ಲ ಸಾಲ ಜಾಸ್ತಿಯಾಗಿ ತೀರಿಸಲಾಗುತ್ತಿಲ್ಲ ಸಾಯೋಣ ಎಂಬ ಮಾತುಗಳು ರೈತರ ಬಾಯಿಂದ ಕೇಳಿದ್ದೇವೆ ನೀರಿಲ್ಲ ಎಂಬ ನೋವನ್ನೂ ಅನುಭವಿಸಿದ್ದೇವೆ… ಈ ಯೋಜನೆಯಿಂದ ಆ ಮಾತುಗಳು ಇನ್ನು ನಾವು ಕೇಳಲ್ಲ ಅನ್ನಿಸುತ್ತೆ.. ಎಲ್ಲಾ ಕೆರೆಗಳು ತುಂಬುವ ಲಕ್ಷಣ ಕಾಣಿಸುತ್ತಿದೆ ಮತ್ತು ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ ಎಂಬ ನಂಬಿಕೆ ಇದೆ..

ನಂಬಿ ಇನ್ನ ಎರಡು ಮೂರುವರ್ಷಗಳಲ್ಲಿ ಜಿಲ್ಲೆಯ ಕೃಷಿ ಚಟುವಟಿಕೆಗಳುಮತ್ತಷ್ಟು ಗರಿಗೆದರುತ್ತದೆ ಜಿಲ್ಲೆಯ ರೈತರ ಆರ್ಥಿಕಪರಿಸ್ಥಿತಿ ಸುಧಾರಣೆ ಆಗುತ್ತದೆ ವ್ಯವಸಾಯಕ್ಕೆನೀರಿಲ್ಲ ಎಂದು ಊರಿಂದಾಚೆ ಇರುವಟೆಕ್ಕಿಗಳೂ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳುಮತ್ತೆ ತನ್ನೂರಿಗೆ ಮರಳಿ ವ್ಯವಸಾಯ ಶುರುಮಾಡುತ್ತಾರೆ..ಆ ಹಳೆಯ ವೈಭವಕ್ಕೆಮರಳುತ್ತಾರೆ.. ಕೆಸಿ ವ್ಯಾಲಿ ಯೋಜನೆಯಹರಿಕಾರ, ಜಿಲ್ಲೆಯ ಭಗೀರಥ ರಮೇಶ್ಕುಮಾರ್ ಅವರಿಗೆ ಹಾಗೂ ಈಯೋಜನೆ ಕಾರ್ಯರೂಪಕ್ಕೆ ತರಲು ಶ್ರಮಿಸಿದ ಎಲ್ಲಾಮಾಜಿಗಳಿಗೂ ಹಾಲಿಗಳಿಗೂ ಮತ್ತು ಎಲ್ಲಾ ಪಕ್ಷಗಳಮುಖಂಡರಿಗೂ ಧನ್ಯವಾದಗಳು .

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮಹಾಲಯ ಅಮಾವಾಸ್ಯೆ ಕಳೆದು ಒಂದು ತಿಂಗಳ ನಂತರ ದಸರಾ ಯಾಕೆ ಬರುತ್ತಿದೆ !

    ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…

  • ಜೀವನಶೈಲಿ

    ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ ! ತಿಳಿಯಲು ಈ ಲೇಖನ ಓದಿ…

    ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(4 ಡಿಸೆಂಬರ್, 2018) ನೀವು ಏನು ಮಾಡಬೇಕೆಂದುಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ನೀವು ಇಂದು ಪ್ರೀತಿಮಾಡುವ ಅವಕಾಶವನ್ನುಕಳೆದುಕೊಳ್ಳದಿದ್ದಲ್ಲಿ,…

  • ಸುದ್ದಿ

    ದೊಡ್ಡಗೌಡರ ಎದುರೆ ಕುರ್ಚಿಗಾಗಿ ಕಚ್ಚಾಟ..!

    ಮೈತ್ರಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಷಯದ ಬೆನ್ನೆಲ್ಲೇ ಇದೀಗ ನಿಗಮ ಮಂಡಳಿಗಾಗಿ ಫೈಟ್ ಶುರುವಾಗಿದೆ. ಖಾಲಿ ಇರುವ ನಿಗಮ ಮಂಡಳಿಗಾಗಿ ತೆನೆ ಕಾರ್ಯಕರ್ತರಲ್ಲಿ ಮತ್ತೊಂದು ಹಂತದ ಕುಸ್ತಿ ಶುರುವಾಗಿದೆ. ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಇದಕ್ಕೇ ಅನ್ಸತ್ತೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳೋಕೆ ಬರೀ ಶಾಸಕರಿಗಷ್ಟೇ ನಿಗಮ ಮಂಡಳಿ ಸ್ಥಾನ ಕರುಣಿಸಿದ್ದ ದಳಪತಿಗಳಿಗೆ ಹೊಸ ಸಂಕಷ್ಟ ಶುರುವಾಗಿದೆ. ಜೆಡಿಎಸ್​ ವರಿಷ್ಠರ ನಡೆಗೆ ಹತ್ತಾರು ವರ್ಷ ಪಕ್ಷಕ್ಕಾಗಿ ದುಡಿದ ತೆನೆ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ದೇವೇಗೌಡರ ಎದುರೇ ಪಟ್ಟಕ್ಕಾಗಿ…