ಸುದ್ದಿ

ಗದ್ದೆಯಲ್ಲಿ ಮಕ್ಕಳ ಹೆಜ್ಜೆ , “ನಮ್ಮ ನಡಿಗೆ ಕೃಷಿಯ ಕಡೆಗೆ”…!

43

ಶಂಕರಪುರ ಸೈಂಟ್ ಜೋನ್ಸ್ ಫ್ರೌಢ ಶಾಲಾ ಭಾರತ ಸೇವಾದಳ, ಸ್ಕೌಟ್, ಗೈಡ್ಸ್, ನೇಸರ ಹಸಿರುಪಡೆಯ 134 ವಿದ್ಯಾರ್ಥಿಗಳು ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರ ಗದ್ದೆಗೆ ಭೇಟಿ ನೀಡಿದರು.

ಟಿಲ್ಲರ್‍ನಲ್ಲಿ ಉಳುಮೆ ಮಾಡಿದ ಗದ್ದೆಗೆ ಇಳಿದರು. ಭಾರತ ಸೇವಾದಳದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ “ಸಾರೇ ಜಾಹಾಂಸೆ ಅಚ್ಚಾ,,,, ಹಿಂದೂಸ್ತಾನ್ ಹಮಾರಾ..! ಗೀತೆಯನ್ನು ಸಾಮೂಹಿವಾಗಿ ಅಭಿನಯದ ಮೂಲಕ ಹಾಡಿದರು. ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ, ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು ಪ್ರಯಾಸ ಪಟ್ಟು ನಡೆದು ಹೊಸ ಅನುಭವ ಪಡೆದರು.

ಶಂಕರಪುರ ಚರ್ಚ್‍ನ ಸಹಾಯಕ ಧರ್ಮಗುರು ರೋಶನ್ ಡಿ ಕುನ್ಹಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರ ಗೌಡ, ಸೇವಾದಳದ ತಾಲೂಕು ಅಧಿನಾಯಕ ಎಸ್.ಎಸ್.ಪ್ರಸಾದ್, ತಾಲೂಕು ಸಮಿತಿ ಸದಸ್ಯ ರಾಯನ್ ಫೆರ್ನಾಂಡಿಸ್ ಸಾಥ್ ನೀಡಿದರು. ಗದ್ದೆಯ ಮಾಲಿಕ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಶಾಲುಹೊದಿಸಿ, ಹಾರಹಾಕಿ ಸ್ಮರಣಿಕೆಯೊಂದಿಗೆ ಗೌರವಿಸಿದರು. ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು. ಭತ್ತದ ಬೆಳೆಯ ಪ್ರಾತಿಕ್ಷಕೆ ಮಾಹಿತಿಯನ್ನು ವಸಂತ ಪೂಜಾರಿಯವರು ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೊಡ್ರಿಗಸ್, ಕೃತಜ್ಞತೆ ಸಲ್ಲಿಸಿದರು. ದೈಹಿಕ ಶಿಕ್ಷಣ ಹಾಗೂ ಭಾರತ ಸೇವದಳದ ಶಿಕ್ಷಕ ಡೋಮಿಯನ್ ಆರ್ ನೊರೋನ್ಹಾ, ಸಹ ಶಿಕ್ಷಕರು ಜೊತೆಗಿದ್ದರು. ಉಪಾಹಾರದೊಂದಿಗೆ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಆರೋಗ್ಯದ ಮೇಲೆ ಹುರುಳಿ ಟೀ, ಹುರುಳಿ ಟೀ ಇಂದ ಏನೆಲ್ಲಾ ಲಾಭವಿದೆ ಗೊತ್ತಾ.

    ಹುರುಳಿ ಟೀ ಮಾಡುವ ವಿಧಾನ! ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನಿ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ. ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮದುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ…

  • ಸುದ್ದಿ

    ಸುಶಾಂತ್ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ, ಅವರ ಕುಟುಂಬದಲ್ಲಿ ಮತ್ತೊಂದು ದೊಡ್ಡ ಆಘಾತ.

    ಬಾಲಿವುಡ್ ನಟ ಶುಶಾಂತ್ ಸಿಂಗ್ ರಜಪೂತ್ ನಿಧನ ನಂತರ ಅವರ ಕುಟುಂಬದಲ್ಲಿ ಮತ್ತೊಂದು ಸಾವಿನ ಸುದ್ದಿ ಕೇಳಿ ಬಂದಿದೆ ಹೌದು ಸುಶಾಂತ್ ಸಿಂಗ್ ಸಾವಿನ ಸುದ್ದಿ ಕೇಳಿ ಅವರ ಅತ್ತಿಗೆ ಆಘಾತಕ್ಕೆ ಒಳಗಾಗಿದ್ದರು ಈಗ ಅವರು ಕೂಡ ನಿಧನರಾಗಿದ್ದಾರೆ. ಮುಂಬೈ ನಲ್ಲಿ ಶುಶಾಂತ್ ಅಂತ್ಯಕ್ರಿಯೆ ನಡೆಯುವ ವೇಳೆ. ಇತ್ತ ಬಿಹಾರದ ಪೂರ್ಣಿಯಾದಲ್ಲಿ ಸುಶಾಂತ್ ಅವರ ಅತ್ತಿಗೆ ಸುಧಾ ಅವರು ನಿಧನರಾಗಿದ್ದಾರೆ. ಶುಶಾಂತ್ ಚಿಕ್ಕಪ್ಪನ ಮಗನ ಪತ್ನಿ ನಿಧನ ಹೊಂದಿರುವುದು ಈ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸುಶಾಂತ್…

  • ಆರೋಗ್ಯ, ಉಪಯುಕ್ತ ಮಾಹಿತಿ

    ತುಂಬಾ ಜನಕ್ಕೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ನಿದ್ರೆ ಬರುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ ..

    ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಆದರೆ ತುಂಬಾ ಜನರಿಗೆ ಆ ನಿದ್ರೆಯೇ ದೊಡ್ಡ ಸಮಸ್ಯೆಯಾಗಿದೆ, ರಾತ್ರಿಯೆಲ್ಲಾ ನಿದ್ರೆ ಬರುವುದಿಲ್ಲ ಹಗಲೆಲ್ಲಾ ಕಣ್ಣು ಮುಚ್ಚುತ್ತಲೇ ಇರುತ್ತಾರೆ, ಎಷ್ಟು ಪ್ರಯತ್ನಿಸಿದರು ರಾತ್ರಿ ಸಮಯ ಬಾರದ ನಿದ್ರೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ಅದು ಬಂದು ಬಿಡುತ್ತದೆ.

  • ಆರೋಗ್ಯ

    ಕ್ಯಾರೆಟ್ ನಲ್ಲಿದೆ ಅದ್ಬುತ ಅರೋಗ್ಯಕರ ಅಂಶಗಳು.

    ಕ್ಯಾರೆಟ್ಟುಗಳಲ್ಲಿ ಕ್ಯಾಲೋರಿ ಪ್ರೋಟೀನ್ ಹಾಗೂ ಕೊಬ್ಬಿನ ಅಂಶಗಳು ತುಂಬ ಕಡಿಮೆ ಇದ್ದು, ಸುಮಾರು 86-95 ಶೇಖಡಾದಷ್ಟು ನೀರಿನ ಅಂಶವನ್ನು ಒಳಗೊಂಡಿದೆ. ಒಂದು ಮಧ್ಯಮ ಗಾತ್ರದ ಕ್ಯಾರೆಟ್ ಸೇವಿಸುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟುಗಳು ಲಭ್ಯವಾಗುತ್ತವೆ. ವಿವಿಧ ಪ್ರೋಟಿನ್, ವಿಟಮಿನ್ ಗಳನ್ನು ಹೇರಳವಾಗಿ ಹೊಂದಿರುವ ಕ್ಯಾರೆಟ್ ರೋಗ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು, ಹಲವಾರು ರೋಗಗಳನ್ನು ದೂರವಿಡುತ್ತದೆ.ರಕ್ತದ ಶುದ್ಧತೆಗೆ ಹಾಗೂ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು…

  • ಸಿನಿಮಾ, ಸುದ್ದಿ

    ತನ್ನ ಯಜಮಾನ ಚಿರುವನ್ನು ನೋಡಲು ಹಠ ಮಾಡುತ್ತಿರೋ ಅವರ ಪ್ರೀತಿಯ ಶ್ವಾನ.

    ಸ್ಯಾಂಡಲ್ ವುಡ್ ನಟ ಚಿರು ಅವರ ಪ್ರೀತಿಯ ಶ್ವಾನ ದ್ರೋಣ ಇದೀಗ ತನ್ನ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿದೆ. ಹೌದು. ದ್ರೋಣ, ಚಿರು ಅವರ ಮುದ್ದಿನ ಶ್ವಾನವಾಗಿದೆ. ಆದರೆ ಇದೀಗ ಚಿರು ಅವರು ಹೃದಯಾಘಾತಕ್ಕೆ ಒಳಗಾಗಿ ಚಿರನಿದ್ರೆಗೆ ಜಾರಿದ್ದು, ತನ್ನ ಯಜಮಾನನನ್ನ ನೋಡಲು ದ್ರೋಣ ಹಠ ಮಾಡುತ್ತಿದ್ದಾನೆ. ರೆಬೆಲ್ ಸ್ಟಾರ್ ಅಂಬರೀಶ್ ಕೊಟ್ಟಿರುವ ನಾಯಿಯೊಂದು ಚಿರು ಮನೆಯಲ್ಲಿದೆ. ಆ ಶ್ವಾನಂದರೆ ಅಂದ್ರೆ ಚಿರು ಸರ್ಜಾಗೆ ತುಂಬಾನೇ ಇಷ್ಟ. ಪ್ರಾಣಿಗಳನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ದ ಚಿರು, ಇತ್ತೀಚಿಗಷ್ಟೇ ದರ್ಶನ್‍ಗೆ…