ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ ಆ ಬಾಕಿ ಹಣ ಚುಕ್ತಾ ಮಾಡಿದ್ದಾರೆ ರಿಚರ್ಡ್.

ಈ ಕಥೆ ಸ್ವಾರಸ್ಯಕರ. ಇದೀಗ ಕೀನ್ಯಾದಲ್ಲಿ ಸಂಸದರಾಗಿರುವ ರಿಚರ್ಡ್ ಸೋಮವಾರ ಔರಂಗಾಬಾದ್ ನಗರಕ್ಕೆ ತಮ್ಮ ಪತ್ನಿ ಸಮೇತ ಭೇಟಿ ನೀಡಿ ಗಾವ್ಲಿ ಅವರನ್ನು ಹುಡುಕಿ ಅವರನ್ನು ಕಂಡು ಮಾತನಾಡಿಸಿ, 200 ರೂ. ವಾಪಸ್ ನೀಡಲು ಮುಂದಾದಾಗ ಅವರ ಪ್ರಾಮಾಣಿಕತೆಗೆ ಹೃದಯ ತುಂಬಿ ಬಂದು ಕಾಶೀನಾಥ್ ನಯವಾಗಿ ನಿರಾಕರಿಸಿದರು. ಆದರೂ ರಿಚರ್ಡ್ ಅವರು ಗಾವ್ಲಿ ಕುಟುಂಬದ ಮಕ್ಕಳಿಗೆ ಕೆಲ ಯುರೋ (ಸುಮಾರು ರೂ 19,900) ತಮ್ಮ ಕಾಣಿಕೆಯಾಗಿ ನೀಡಿದರು.

ಸದ್ಯ ರಿಚರ್ಡ್ ಅವರು ಕೆನ್ಯಾ ಸಂಸತ್ತಿನಲ್ಲಿ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಉಪಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಯಾದ ಕೀನ್ಯಾದ ನಿಯೋಗದಲ್ಲಿ ಅವರಿದ್ದರು. ಪ್ರಧಾನಿ ಭೇಟಿಯ ನಂತರ ಔರಂಗಾಬಾದ್ ನಲ್ಲಿ ತಮ್ಮ ಅಚ್ಚುಮೆಚ್ಚಿನ `ಕಾಶಿನಾಥ್ ಕಾಕಾ’ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಹಿಂದೆ ವಾಂಖೆಡೆ ನಗರದಲ್ಲಿ ದಿನಸಿ ಅಂಗಡಿ ಹೊಂದಿದ್ದ ಗಾವ್ಲಿ ಈಗ ದೊಡ್ಡ ಮಳಿಗೆ ಹೊಂದಿದ್ದಾರಲ್ಲದೆ, ನಾಲ್ಕು ಅಂತಸ್ತಿನ ಮನೆಯನ್ನೂ ಕಟ್ಟಿಸಿದ್ದಾರೆ.

ಔರಂಗಾಬಾದ್ ನಗರಕ್ಕೆ ಆಗಮಿಸಿದ ರಿಚರ್ಡ್ ಮತ್ತವರ ಪತ್ನಿ ಮಿಶೆಲ್ ಅವರಿಗೆ ಗಾವ್ಲಿ ಅವರನ್ನು ಹುಡುಕಲು ಎರಡು ದಿನಗಳೇ ತಗಲಿತ್ತು.ಸೋಮವಾರ ತಮ್ಮ ಬಳಿ ಬಂದ ರಿಚರ್ಡ್ ಅವರನ್ನು ಗುರುತಿಸಲು ಗಾವ್ಲಿ ಅವರಿಗೆ ಸ್ವಲ್ಪ ಹೊತ್ತು ಬೇಕಾಯಿತು, ಆಗ ರಿಚರ್ಡ್ ತಾವು ನೀಡಬೇಕಾದ ಬಾಕಿ ಹಣದ ಬಗ್ಗೆ ಹೇಳಿದಾಗ ಕಾಶಿನಾಥ್ ಅವರ ಕಣ್ತುಂಬಿ ಬಂದಿತ್ತು. ರಿಚರ್ಡ್ ಅವರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ಇಬ್ಬರೂ ನಂತರ ಸಂತೋಷದಿಂದ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….
ದರ್ಶನ್, ಪುನೀತ್ ರಾಜ್ಕುಮಾರ್, ಸುದೀಪ್ ಸೇರಿ ಎಲ್ಲರೂ ಟ್ವೀಟ್ ಮಾಡುವ ಮೂಲಕ ಅಂಬಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ, ಓರ್ವ ಸ್ಟಾರ್ ನಟನನ್ನು ಬಿಟ್ಟು! ಕನ್ನಡ ಚಿತ್ರರಂಗದ ದೊಡ್ಡಣ್ಣನಂತೆ ಕೆಲಸ ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ರಂಗದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ಪರಿಹಾರ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಮೇ 29 ಅವರ ಜನ್ಮದಿನ. ಮೇ 30 ರವಿಚಂದ್ರನ್ ಜನ್ಮದಿನ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲ ಗಣ್ಯರೂ ಯಶ್ ಅವರನ್ನು…
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ವರಕವಿ ಬೇಂದ್ರೆಯವರ ಈ ಕವನ ಯಾರಿಗೆ ತಾನೇ ಗೊತ್ತಿಲ್ಲ.. ನಮ್ಮ ತಂಡದಿಂದ ಯುಗಾದಿ ಮತ್ತು ಹೊಸವರ್ಷದ ಆರ್ಥಿಕ ಶುಭಾಶಯಗಳು… ಯುಗಾದಿ ಅಂದ್ರೆ ಏನು… ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು….
ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್ಗೆ ಒಂದೇ ಕುಟುಂಬದ ಮೂವರು ಅಕ್ಕತಂಗಿಯರು ಕಮಲ, ಗೀತ, ಮಮತಾರಿಗೆ (ಜಿಲ್ಲಾಧಿಕಾರಿಯಾಗಿ) ರ್ಯಾಂಕ್ 32, 64, 128 ಬಂದಿದೆ.
ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…
ಜಗತ್ತಿನಲ್ಲೇ ಅತೀ ಹೆಚ್ಚಾಗಿ ಸೇವಿಸುವ ಹಣ್ಣು ಬಾಳೆಹಣ್ಣು. ಬಾಳೆಹಣ್ಣು ಅತ್ಯಂತ ಹೆಚ್ಚು ಪೋಷಕಾಂಶವುಳ್ಳ ಆಹಾರ ಎಂದು ವೈದ್ಯರಿಂದ ಹಿಡಿದು ಪ್ರತಿಯೊಬ್ಬರು ಶಿಫಾರಸು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ತಕ್ಷಣವೇ ಶಕ್ತಿ ತುಂಬುತ್ತದೆ. ಒಂದು ರೀತಿಯಲ್ಲಿ ಗ್ಲೂಕೊಸ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಕೂಡ ಹೇಳಬಹುದು.