ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಂಗ್ರೆಸ್ ಪಕ್ಷದ ಶಾಸಕರು ಸಾಲು ಸಾಲು ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ಯುತ್ತಿರುವ ಸಂದರ್ಭದಲ್ಲೇ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಆಡಳಿತಾರೂಢ ಜೆಡಿಎಸ್ ಪಕ್ಷ ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದೆ.ನಿನ್ನೆ ತಡರಾತ್ರಿವರೆಗೂ ಜೆಡಿಎಸ್ ಹಾಗೂ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದು, ಉಭಯ ಪಕ್ಷಗಳು ತಮ್ಮೆಲ್ಲ ಹಿಂದಿನ ಮನಸ್ತಾಪಗಳನ್ನು ಬದಿಗೊತ್ತಿ ಹೊಸದಾಗಿ ಮೈತ್ರಿ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅತೃಪ್ತಗೊಂಡಿರುವ ಶಾಸಕರ ಮನವೊಲಿಸುವ ನಿರಂತರ ಪ್ರಯತ್ನಗಳು ಫಲ ಕೊಟ್ಟಿಲ್ಲ. ಮೈತ್ರಿ ಸರ್ಕಾರದ ಎಲ್ಲ ಸಚಿವರ ರಾಜೀನಾಮೆ ಕೊಡಿಸಿ ಸಂಪುಟ ಪುನಾರಚನೆ ಮಾಡುವುದಾಗಿ ಘೊಷಿಸಲಾಗಿದೆ. ಪುನಾರಚನೆ ಸಂದರ್ಭದಲ್ಲಿ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದರೂ ಯಾರೂ ಕೂಡ ಮಣಿಯುತ್ತಿಲ್ಲ.ಬದಲಾಗಿ ಸಚಿವರಾಗಿದ್ದವರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತ ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ಯುತ್ತಿದ್ದಾರೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಪರಿಸ್ಥಿತಿ ಕೈ ಮೀರುತ್ತಿರುವ ಸಂದರ್ಭದಲ್ಲೇ ಪರ್ಯಾಯ ಮಾರ್ಗದತ್ತ ಜೆಡಿಎಸ್ ನಾಯಕರು ಗಮನ ಹರಿಸಿದ್ದಾರೆ.

ಒಂದೆಡೆ ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನಗಳನ್ನು ಮೇಲ್ನೋಟಕ್ಕೆ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎನಿಸಿದರೂ ಪರೋಕ್ಷವಾಗಿ ಶಾಸಕರ ರಾಜೀನಾಮೆಗೆ ಆ ಪಕ್ಷದ ನಾಯಕರೇ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನೊಂದಿಗಿನ ಮೈತ್ರಿಯನ್ನು ಮುಂದುವರಿಸಿದ್ದೇ ಆದರೆ ಜೆಡಿಎಸ್ ಪಕ್ಷ ಭವಿಷ್ಯದಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ. ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಚುನಾವಣೆಗೆ ಹೋದರೂ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ಹಾಗಾಗಿ ಬಿಜೆಪಿಗೆ ಬೇಷರತ್ ಬೆಂಬಲ ಕೊಡುವುದೇ ಸೂಕ್ತ ಎಂಬ ನಿರ್ಧಾರಕ್ಕೂ ಬಂದಿದ್ದಾರೆ ಎನ್ನಲಾಗಿದೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರರೊಬ್ಬರು ದೆಹಲಿಯ ಬಿಜೆಪಿ ನಾಯಕರೊಂದಿಗೆ ತಡರಾತ್ರಿ ಸಮಾಲೋಚನೆ ನಡೆಸಿ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಬೇಷರತ್ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಬಿಜೆಪಿಯಿಂದ ಈ ಬಗ್ಗೆ ಖಚಿತ ಭರವಸೆ ಸಿಕ್ಕಿರುವ ಮಾಹಿತಿ ಲಭ್ಯವಾಗಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ಕಷ್ಟ ಬಂದರೆ ಕಣ್ಣೀರಿಡುತ್ತೇವೆ. ಇಲ್ಲದಿದ್ದರೆ ಬಿಕ್ಕಿ ಬಿಕ್ಕಿ ಅಳುತ್ತೇವೆ. ಅದರಲ್ಲೂ ಮಹಿಳೆಯರು, ಹುಡುಗಿಯರೂ ಆಕಾಶದಿಂದ ಮಳೆ ಸುರಿಸುತ್ತಿದೆಯೇನೋ ಅನಿಸುವಂತೆ ಕಣ್ಣೀರಿಡುತ್ತಾರೆ. ಹುಡುಗರು ಮಾತ್ರ ಎಷ್ಟೇ ಕಷ್ಟ ಬಂದರೂ ಅಳುವುದಿಲ್ಲ ಯಾಕೆ ಗೊತ್ತಾ..?
ಅಭಿಮಾನಿಗಳೇ ಹಾಗೆ ತಮ್ಮ ನೆಚ್ಚನ ನಟನಿಗಾಗಿ ಏನಾದ್ರೂ ಮಾಡಲು ತಯಾರಿರುತ್ತಾರೆ.ತಮ್ಮ ನೆಚ್ಚಿನ ನಟನ ಚಿತ್ರಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಒಂದು ವೇಳೆ ತಮ್ಮ ನೆಚ್ಚಿನ ನಟನನ್ನು ಒಂದು ಬಾರಿ ಭೇಟಿ ಮಾಡಿಬಿಟ್ಟರೆ ಅವರ ಜೀವನ ಸಾರ್ಥಕ ಆದಂತೆ ಅನ್ನುವಷ್ಟು ಮಟ್ಟಿಗೆ ಇಷ್ಟಪಡುವವರಿದ್ದಾರೆ. ಆದರೆ ಆಂಧ್ರದ ವಿಜಯವಾಡದ ತಮ್ಮ ನೆಚ್ಚಿನ ನಟನ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಇದಕ್ಕೆ ಹುಚ್ಚು ಅಭಿಮಾನ ಅನ್ನಬೇಕೋ, ಅತಿರೇಕದ ಅಭಿಮಾನ ಅನ್ನಬೇಕೋ ಗೊತ್ತಿಲ್ಲ.ತಾವು ಪ್ರೀತಿಸೋ ಆರಾಧಿಸುವ ಸ್ಟಾರ್…
ಗಾಯಕ ಚಂದನ್ ಶೆಟ್ಟಿ ಅವರು ಯುವದಸರಾ ವೇದಿಕೆಯಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಭಾರಿ ವಿರೋಧಕ್ಕೆ ಗುರಿಯಾಗಿತ್ತು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಿಗ್ ಮನೆಯಲ್ಲಿ ಇಬ್ಬರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಫ್ರೆಂಡ್ ಷಿಪ್ ಮುಂದುವರಿಸಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರುಕನ್ನಡ ರ್ಯಾಪರ್,…
ಜಿಯೋ ಸೆಟ್ ಟಾಪ್ ಬಾಕ್ಸ್ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್ ಸೇವೆಯು 50ಕ್ಕೂ ಹೆಚ್ಚು ಎಚ್ಡಿ ಚ್ಯಾನಲ್ಗಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್ಗಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.
ಇಂದು ಶನಿವಾರ, 03/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸದ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸದೆ ದೇಹಾಲಸ್ಯ. ಹಣದ ಆಧಾಯ ಹೆಚ್ಚಾಗುತ್ತದೆ. ಉದ್ದೇಶಿಸಿದ ಕೆಲಸಕಾರ್ಯಗಳು ನಡೆಯಲಿವೆ. ನೀವು ನಂಬುವರರಿಂದ ನಿಜ ತಿಳಿಯುತ್ತದೆ.ಆರ್ಥಿಕ ವಿಚಾರದಲ್ಲಿ ಜಾಗ್ರತೆ. ವೃಷಭ:- ಅಪವಾದಗಳೂ ಬೆನ್ನತ್ತಿ ಬರಬಹುದು. ನಿರೀಕ್ಷಿತ ಮೂಲದಿಂದ ಧನಾದಾಯ. ಬಾಕಿಯಿರುವ ಕುಟುಂಬದ ಎಲ್ಲಾ ಸಾಲಗಳನ್ನು ತೀರಿಸಲು ಸಾಧ್ಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಆರ್ಥಿಕವಾಗಿ ಅಭಿವೃದ್ಧಿ. ಅತಿ ವೇಗದ ಚಾಲನೆ…
ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.