ಸುದ್ದಿ

ಕೇವಲ 13 ವಯಸ್ಸಿನಲ್ಲೆ 135 ಪುಸ್ತಕ ಬರೆದು 4 ವಿಶ್ವದಾಖಲೆ ನಿರ್ಮಿಸಿದ ಪೋರ…..!

41

ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ‘ಇಂದಿರಾ ಕ್ಯಾಂಟೀನ್​​ ಬದಲು ಅನ್ನಪೂರ್ಣ ಕ್ಯಾಂಟೀನ್​​ ಎಂದು ಹೆಸರಿಡಲು ಬಿಜೆಪಿ ಚಿಂತನೆ’…!

    ಬೆಂಗಳೂರು : ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ ಯಾವುದೋ ಒತ್ತಡಕ್ಕೆ ಮಣಿದು ಸ್ಪೀಕರ್ ತೀರ್ಪು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ಹೇಳಿದರು. ನಗರದ ಚಾನ್ಸರಿ ಪೆವಿಲಿಯನ್ ಹೊಟೇಲ್ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಳೇ ಋಣ ತೀರಿಸಲೇನೋ ಈ ತೀರ್ಪನ್ನು ರಮೇಶ್ ಕುಮಾರ್ ಅವರು ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್​​ಗೆ ಈ ಪ್ರಕರಣ ಹೋಗಬಹುದು ಕೋರ್ಟ್​​ನಲ್ಲಿ ಅಂತಿಮ ತೀರ್ಮಾನ ಬರಲಿದೆ ಎಂದು ಅವರು ತಿಳಿಸಿದರು. ಇನ್ನು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ…

  • ಸಿನಿಮಾ

    ರೊಬೋ-2.0 ಚಿತ್ರದ ಆ್ಯಮಿ ಜಾಕ್ಸನ್ ಫಸ್ಟ್ ಲುಕ್ ಬಿಡುಗಡೆ…! ತಿಳಿಯಲು ನೋಡಿ…

    ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ

  • ಸುದ್ದಿ

    ಹೆಂಡತಿಯ ಹತ್ತಿರ 20 ಸಾವಿರ ಸಾಲ ಪಡೆದ ಪತಿ, 28.45 ಕೋ.ರೂ ಗೆದ್ದ…!

    ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್‌ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…

  • ಮನರಂಜನೆ

    ಹಳ್ಳಿ ಹೈದ ಹನುಮಂತನಿಗೆ ಹೊಸ ವರ್ಷಕ್ಕೆ ಸಿಕ್ತು ಬಂಪರ್ ಆಫರ್..!

    ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ. ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ. ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ…

  • ಸುದ್ದಿ

    ಪ್ಯಾಂಟ್ ಜಿಪ್ ಬಟನ್ ಹಾಕದೆ ರಕುಲ್ ಫೋಟೋಶೂಟ್ ಮಾಡಿದ….!

    ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಪ್ಯಾಂಟ್ ಜಿಪ್ ಹಾಕದೆ ಫೋಟೋಶೂಟ್ ಮಾಡಿಸಿದ್ದು, ಈಗ ಈ ಫೋಟೋವನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.ಇತ್ತೀಚೆಗೆ ರಕುಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ರಕುಲ್ ಜೀನ್ಸ್ ಹಾಗೂ ಕ್ರಾಪ್ ಟಾಪ್ ಧರಿಸಿದ್ದಾರೆ. ಆದರೆ ರಕುಲ್ ತಾವು ಧರಿಸಿದ್ದ ಜೀನ್ಸ್ ಪ್ಯಾಂಟಿನ ಬಟನ್ ಹಾಗೂ ಜಿಪ್ ಧರಿಸದೆ ಹಾಗೆಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ. ರಕುಲ್ ಜೀನ್ಸ್ ಪ್ಯಾಂಟ್‍ನ ಬಟನ್ ಹಾಗೂ ಜಿಪ್ ಧರಿಸದೆ ಮಾಡಿದ ಫೋಟೋಶೂಟ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ…

  • ಆರೋಗ್ಯ, ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರದ ಈ ಬೀಜಗಳಲ್ಲಿದೆ ನಿಮ್ಮ ದೇಹದ ತೂಕ ಕಡಿಮೆ ಮಾಡುವ ತಾಕತ್ತು.!ತಿಳಿಯಲು ಈ ಮಾಹಿತಿ ನೋಡಿ..

    ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ ಬೀಜದಲ್ಲಿಯೂ ಸಾಕಷ್ಟು ಔಷಧಿ ಗುಣವಿದೆ. ಕೆಲವೊಂದು ಬೀಜಗಳು ನಮ್ಮ ತೂಕ ಕಡಿಮೆ ಮಾಡಲು ನೆರವಾಗುತ್ತವೆ. *ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಬೀಜ ಕಸದ ಬುಟ್ಟಿ ಸೇರುತ್ತೆ. ಆದ್ರೆ ಕಲ್ಲಂಗಡಿ ಬೀಜ ಬಹಳ ಒಳ್ಳೆಯದು. ಹಾಲು ಅಥವಾ ನೀರಿನ ಜೊತೆ ಸೇವನೆ ಮಾಡಬಹುದು. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. *ಕಲ್ಲಂಗಡಿ…